More

    ಉಜನಿ ಜಲಾಶಯದಿಂದ ಭೀಮೆಗೆ ನೀರು ಹರಿಸಿ

    ಅಫಜಲಪುರ: ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮೆಗೆ ನೀರು ಹರಿಸಬೇಕು, ರೈತರ ಪ್ರತಿ ಎಕರೆಗೆ ೨೫ ಸಾವಿರ ರೂ. ಬೆಳೆ ಪರಿಹಾರ ವಿತರಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ತಹಸಿಲ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

    ತಾಲೂಕು ಅಧ್ಯಕ್ಷ ಶ್ರೀಮಂತ ಬಿರಾದಾರ ಮಾತನಾಡಿ, ಭೀಮಾ ನದಿ ನೀರನ್ನು ಆಶ್ರಯಿಸಿ ಬೆಳೆದ ವಾಣಿಜ್ಯ ಬೆಳೆಗಳು ಒಣಗುತ್ತಿದ್ದು, ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ನದಿಗೆ ನೀರು ಹರಿಸಬೇಕು. ಮಳೆಯ ಕೊರತೆಯಿಂದಾಗಿ ರೈತರು ಸಂಕಷ್ಟಕ್ಕೀಡಾಗಿದ್ದು, ಸರ್ಕಾರ ಈಗಾಗಲೇ ತಾಲೂಕವನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದೆ. ಕೂಡಲೇ ಪ್ರತಿ ಎಕರೆಗೆ ೨೫ ಸಾವಿರ ರೂ. ಪರಿಹಾರ ನೀಡಬೇಕು. ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ ಬೆಳೆ ಸಾಲ ವಸೂಲಾತಿ ನಿಲ್ಲಿಸಿ, ಮನ್ನಾ ಮಾಡಬೇಕು. ದಿನಕ್ಕೆ ೧೦ ಗಂಟೆ ೩ ಫೇಸ್ ಹಾಗೂ ರಾತ್ರಿ ೧ ಫೇಸ್ ವಿದ್ಯುತ್ ನೀಡಬೇಕು. ಪ್ರತಿ ಟನ್ ಕಬ್ಬಿಗೆ ೫,೦೦೦ ರೂ. ದರ ನಿಗದಿ ಮಾಡಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ದಿನಕ್ಕೆ ೭೦೦ ರೂ.ನಂತೆ ೨೦೦ ದಿನ ಕೆಲಸ ನೀಡಬೇಕು ಎಂದು ಆಗ್ರಹಿಸಿದರು.

    ಬಸವೇಶ್ವರ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಪ್ರಮುಖ ಮಾರ್ಗಗಳ ಮೂಲಕ ತಹಸಿಲ್ ಕಚೇರಿ ತಲುಪಿತು. ತಹಸೀಲ್ದಾರ್ ಸಂಜೀವಕುಮಾರ ದಾಸರ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.

    ಪ್ರಮುಖರಾದ ರಾಜಕುಮಾರ ಪಾಟೀಲ್​, ಶಾಂತಕುಮಾರ ಅಂಜುಟಗಿ, ಅಮೃತರಾವ ಪಾಟೀಲ್, ಸಿದ್ದು ದಣ್ಣೂರ, ಯಶವಂತರಾಯ ಪಾಟೀಲ್, ವಿಠ್ಠಲ ಕಲಶೆಟ್ಟಿ, ರಾಜಕುಮಾರ ಬಡದಾಳ, ಗುರು ಚಾಂದಕವಟೆ, ಅರ್ಜುನ ಕೇರೂರ, ಗೌಡಪ್ಪಗೌಡ ಪಾಟೀಲ್, ದತ್ತುಗೌಡ ಪಾಟೀಲ್, ಸಂಗಣ್ಣ, ಬಸವರಾಜ ಹೇರೂರ, ಸಿದ್ದರಾಮಯ್ಯ ಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts