More

    ಪಿಯುಸಿ ಮುಗೀತು ಮುಂದೇನು? ಇಲ್ಲಿದೆ ನೂರಾರು ಅವಕಾಶ, ಆಯ್ಕೆ ನಿಮ್ಮದು

    ಸಾಮಾನ್ಯವಾಗಿ ಎಲ್ಲರೂ ಇತ್ತೀಚೆಗೆ ಗಮನಿಸಿರಬಹುದಾದ ಅಂಶವೇನೆಂದರೆ ವಿದ್ಯಾರ್ಥಿಗಳಿಗಿಂತ, ವಿದ್ಯಾರ್ಥಿಗಳ ಪಾಲಕರು ತಮ್ಮ ಮಕ್ಕಳು ಜೀವನಪಥ ರೂಪಿಸಿಕೊಳ್ಳುವಲ್ಲಿ ಪಿಯುಸಿ ನಂತರ ಮಾಡಬಹುದಾದ ಕೋರ್ಸ್‌ಗಳ ಬಗ್ಗೆ ಆತಂಕ ಹಾಗೂ ಗೊಂದಲಕ್ಕೊಳಗಾಗಿದ್ದಾರೆ. ಕೆಲವು ಪಾಲಕರಂತೂ ತಮ್ಮ ಮಕ್ಕಳನ್ನು ಡಾಕ್ಟರ್ ಅಥವಾ ಇಂಜಿನಿಯರ್‌ಗಳನ್ನಾಗಿ ರೂಪಿಸಿಕೊಳ್ಳಲು ಜೀವನದ ಪರಮ ಗುರಿಯನ್ನಾಗಿಸಿ ಕೊಂಡಿದ್ದಾರೆಂಬುದು ಹೊಸ ವಿಷಯವೇನಲ್ಲ. ಒಂದು ವೇಳೆ ಅವರ ಅಪೇಕ್ಷೆಗಳು ಕೈಗೂಡದಿದ್ದರೆ ವಿಪರೀತ ಹತಾಶೆ ಮತ್ತಷ್ಟು ಗೊಂದಲಕ್ಕೀಡಾಗುತ್ತಾರೆ. ಪಾಲಕರು ಅಥವಾ ಪೋಷಕರು ಯಾವ ಕಾರಣಕ್ಕಾಗಿಯೂ ಬೇಸರಗೊಳ್ಳುವ ಅನಿವಾರ್ಯತೆ ಇಲ್ಲ. ಪದವಿಪೂರ್ವ ಶಿಕ್ಷಣದ ನಂತರ ನಿಮ್ಮ ಮಕ್ಕಳ ಭವಿಷ್ಯ ರೂಪಿಸಲು ಹೊಸ ಹೊಸ ಕೋರ್ಸ್‌ಗಳ ರಾಶಿಯೇ ನಿಮ್ಮ ಮುಂದಿದೆ.

    ಕಲಾ ವಿಭಾಗ

    ಸಾಮಾನ್ಯವಾಗಿ ಪದವಿಪೂರ್ವ ಮಟ್ಟದಲ್ಲಿ ಕಲಾ ವಿಷಯವನ್ನು ಆರಿಸಿಕೊಂಡು ತೇರ್ಗಡೆ ಹೊಂದಿದವವರನ್ನು ನಿಧಾನಗತಿಯ ಕಲಿಕೆಯುಳ್ಳವರು [Slow -Learners] ಎಂದು ಪರಿಗಣಿಸುವ ಪರಿಪಾಠ ಬಹಳಷ್ಟು ಜನರಲ್ಲಿದೆ. ಈ ಸಮಾಜಕ್ಕೆ, ಶಿಕ್ಷಕರನ್ನು, ವಕೀಲರನ್ನು, ಸಾಹಿತಿಗಳು, ಕಲಾವಿದರು, ಮನೋವಿಜ್ಞಾನಿಗಳು, ಆರ್ಥಿಕ ತಜ್ಞರು, ಪತ್ರಿಕೋದ್ಯಮಿಗಳು, ಸಮೂಹ ಸಂವಹನಗಾರರು, ಸಾಮಾಜಿಕ ಕಾರ್ಯಕರ್ತರು, ನಾಗರಿಕ ಸೇವಾ ವರ್ಗ ಹಾಗೂ ಇನ್ನಿತರ ಸರ್ಕಾರಿ ನೌಕರರನ್ನು ಕೊಟ್ಟ ಹೆಗ್ಗಳಿಕೆ ಈ ಕಲಾನಿಕಾಯದ್ದು.

    ಇದನ್ನೂ ಓದಿ: ಸೆಲೆಬ್ರಿಟಿಗಳಿಗೆ ಶಾಕ್​ ನೀಡಿದ ಟ್ವಿಟರ್; ರಾತ್ರೋರಾತ್ರಿ ಕಾಣೆಯಾದ ಬ್ಲೂ ಟಿಕ್​

    ಪ್ರಚಲಿತ ಸಮಯದಲ್ಲಿ ಪತ್ರಿಕೋದ್ಯಮ, ಸಮೂಹ ಸಂವಹನ, ಮನೋವಿಜ್ಞಾನ, ಸಮಾಲೋಚನೆ [Counselling], ಮಾನವ ಸಂಪನ್ಮೂಲ ಅಭಿವೃದ್ಧಿ, ಲಲಿತಕಲೆ, ಸಾಹಿತ್ಯ, ಪ್ರವಾಸೋದ್ಯಮ, ಭೂಗೋಳ, ಅಂತರಾಷ್ಟ್ರೀಯ ಸಂಬಂಧಗಳು, ಅಪರಾಧ ಶಾಸ್ತ್ರ ಹಾಗೂ ವಿಧಿ ವಿಜ್ಞಾನ ವಿಭಾಗ, ಸಂಗೀತ, ಮಿಲಿಟರಿ ವಿಜ್ಞಾನ, ಕ್ಲಿನಿಕಲ್ ಮನೋವಿಜ್ಞಾನ, ಅನ್ವಯಿಕ ಮನೋವಿಜ್ಞಾನ, ಸಾರ್ವಜನಿಕ ಆಡಳಿತ, ಸಾರ್ವಜನಿಕ ಸಂಬಂಧ, ಗ್ರಾಮೀಣ ಅಭಿವೃದ್ಧಿ, ವಿಷುವಲ್ ಆರ್ಟ್ ಹಾಗೂ ಮಹಿಳಾ ಅಧ್ಯಯನ ಅಲ್ಲದೆ, ಗಣಿತ ಸಂಖ್ಯಾಶಾಸ್ತ್ರಗಳನ್ನು ಮಾನವಶಾಸ್ತ್ರ ವಿಷಯಗಳನ್ನು ಬಿ.ಎ. ಕೋರ್ಸ್ ಅಡಿಯಲ್ಲಿ ಅಭ್ಯಸಿಸಿ ತಮ್ಮ ಬದುಕು ರೂಪಿಸಿಕೊಳ್ಳಬಹುದು. ವಿಶೇಷವಾಗಿ ದೆಹಲಿ ವಿದ್ಯಾರ್ಥಿಗಳು ಬಿ.ಎ. ಪದವಿ ಪೂರೈಸಿಕೊಂಡು ಅತ್ಯಂತ ಕ್ಲಿಷ್ಟಕರ ಎಂದೇ ಬಿಂಬಿತವಾಗಿರುವ ಕ್ಯಾಟ್ [CAT] ಪರೀಕ್ಷೆಯಲ್ಲಿ ತೇರ್ಗಡೆಹೊಂದಿ ಪ್ರತಿಷ್ಟಿತ ಭಾರತೀಯ ವ್ಯವಸ್ಥಾಪನಾ ಪ್ರಬಂಧ ಸಂಸ್ಥೆಯಲ್ಲಿ [IIMS: Indian Institute of Managements] ಪ್ರವೇಶ ಗಿಟ್ಟಿಸಿಕೊಂಡ ಉದಾಹರಣೆಗಳು ಇತ್ತೀಚಿನ ದಿನಗಳಲ್ಲಿ ಅತ್ಯಂತ ಸಾಮಾನ್ಯವಾಗಿದೆ.

    ವಾಣಿಜ್ಯ ಹಾಗೂ ಮ್ಯಾನೇಜ್‌ಮೆಂಟ್

    ಆಂಗ್ಲ ಭಾಷೆ ಮತ್ತು ಇಂಟರ್‌ನೆಟ್ ಪ್ರಭಾವದಿಂದ ಇಡೀ ಪ್ರಪಂಚವೇ ಒಂದು ಜಾಗತಿಕ ಹಳ್ಳಿ. ನಮ್ಮ ದಿನನಿತ್ಯ ಜೀವನದ ಪ್ರತಿ ಭಾಗವೂ ವ್ಯಾಪಾರೀಕರಣಗೊಂಡಿದೆ. ಚಿಕ್ಕ, ಸ್ವಂತ ಉದ್ದಿಮೆಯಿಂದ ಹಿಡಿದು ದೊಡ್ಡ ಕಾರ್ಪೋರೇಟ್ ವಲಯ ಆಪೇಕ್ಷಿಸುವ ಕೌಶಲ ಹಾಗೂ ವ್ಯಾಪಾರ ನಡೆಸಲು ಬೇಕಾದ ಜ್ಞಾನವನ್ನು ಬಿಕಾಂ, ಬಿಬಿಎ, ಬಿಬಿಎಂ ಹಾಗೂ ಇತರೆ ವಾಣಿಜ್ಯಕ್ಕೆ ಸಂಬಂಧಪಟ್ಟ ವಿಷಯಗಳಿಂದ ಪಡೆದುಕೊಳ್ಳಬಹುದು.

    ಅತ್ಯಂತ ಪ್ರತಿಷ್ಠಿತ ಹುದ್ದೆಗಳಾದ ಚಾರ್ಟಡ್ ಅಕೌಂಟೆಂಟ್ [Chartered Accountant], ಕಾಸ್ಟ್ ಅಕೌಂಟೆಂಟ್ [Cost Accountant] ಹಾಗೂ ಕಂಪನಿ ಸೆಕ್ರೆಟರಿ [Company Secretory], ಹುದ್ದೆ ಬಯಸುವವರು ತಮ್ಮ ಪದವಿಯಲ್ಲಿ ಬಿಕಾಂ ಅಥವಾ ಬಿಬಿಎಂ ಅಭ್ಯಸಿಸುವುದು ಒಳಿತು. ನಿನಪಿರಲಿ ಪಿಯು ಮಟ್ಟದಲ್ಲಿ ವಿಜ್ಞಾನ ವಿಷಯ ಆರಿಸಿಕೊಂಡವರೂ ಈ ಹುದ್ದೆಗಳನ್ನು ಪಡೆಯಲು ಅರ್ಹರು.

    ವಾಣಿಜ್ಯ ಪದವಿ ನಂತರ ವಿದ್ಯಾರ್ಥಿಗಳು ಕಂಪ್ಯೂಟರ್ ಜ್ಞಾನ ಹೊಂದಿರುವುದು ಅತ್ಯವಶ್ಯಕ. ವಿಶೇಷವಾಗಿ MS Excel ನಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿರಬೇಕು. ಈಗ ಬಿಕಾಂ ಪದವಿಗೆ ಹೆಚ್ಚು ಬೇಡಿಕೆ ಬಂದಿರುವುದನ್ನು ಎಲ್ಲರೂ ಗಮನಿಸಿರಬಹುದು.

    ಸ್ನಾತಕೋತ್ತರ ಪದವಿಗಳಾದ ಎಂಬಿಎ ಇನ್ ಮಾರ್ಕೆಟಿಂಗ್, ಹ್ಯೂಮನ್ ರಿರ್ಸೋರ್ಸ್ ಮ್ಯಾನೇಜ್‌ಮೆಂಟ್ ಹಾಗೂ ಫೈನಾನ್ಸ್ ಗಳನ್ನು ಅಭ್ಯಸಿಸಿ, ಕಾರ್ಪೋರೇಟ್ ವಲಯದಲ್ಲಿ ಉತ್ತಮ ಹುದ್ದೆಗಳನ್ನು ನಿರೀಕ್ಷಿಸಬಹುದು. ನೆನಪಿರಲಿ, ಕೇವಲ ಎಂಬಿಎ ಪದವಿ ಇದೆ ಎಂದ ಮಾತ್ರಕ್ಕೆ ಒಳ್ಳೆಯ ಕೆಲಸ ಸಿಗುವುದಿಲ್ಲ. ನೀವು ಎಂಬಿಎ ಎಲ್ಲಿ ಹಾಗೂ ಹೇಗೆ ಪಡೆದುಕೊಂಡಿರೆಂಬುದು ಮುಖ್ಯವಾಗುತ್ತದೆ.

    ಎಂಕಾಂ ಪದವಿ ನಂತರ ಪ್ರತಿವರ್ಷ ಯುಜಿಸಿ ಹಾಗೂ ರಾಜ್ಯದ ವಿದ್ಯಾಲಯಗಳು ನಡೆಸುವ ಎನ್‌ಇಟಿ [NET] ಹಾಗೂ ಎಸ್‌ಎಲ್‌ಇಟಿ [SLET] ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ, ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಖಾಸಗಿ ಸಂಸ್ಥೆಗಳಲ್ಲಿಯೂ ಹುದ್ದೆಗಳಿಗೆ ಪ್ರಯತ್ನ ಪಡಬಹುದು.

    ವಾಣಿಜ್ಯ ಹಾಗೂ ಮ್ಯಾನೇಜ್ಮೆಂಟ್ ವಿಷಯದಲ್ಲಿ ಅತೀ ಆಕರ್ಷಕ ಹಾಗೂ ಲಾಭದಾಯಕ ಹುದ್ದೆ ಹೊಂದಲು ಇಚ್ಛಿಸುವ ವಿದ್ಯಾರ್ಥಿಗಳು ಈ ಕೆಳಕಂಡ ಹುದ್ದೆಗಳನ್ನು ಪಡೆಯಲು ಪ್ರಯತ್ನ ಮಾಡಬಹುದು.
    1. ಕಾರ್ಪೋರೇಟ್ ಸೆಕ್ರೆಟರಿ
    2. ಕಾಸ್ಟ್ ಆ್ಯಂಡ್ ವರ್ಕ್ಸ್ ಅಕೌಂಟೆಂಟ್
    3. ಚಾರ್ಟಡ್ ಅಕೌಂಟೆಂಟ್
    4. ಚಾರ್ಟರ್ಡ್‌ ಫೈನಾನ್ಶಿಯಲ್ ಅನಲಿಸ್ಟ್
    5. ಇನ್‌ವೆಸ್ಟ್‌ಮೆಂಟ್ ಬ್ಯಾಂಕರ್
    6. ಇನ್ಶುರೆನ್ಸ್ ಅಂಡರ್‌ರೈಟರ್
    7. ಆಕ್ಯುವರಿ
    8. ಲಾಜಿಸ್ಟಿಕ್ಸ್ ಅನಾಲಿಸ್ಟ್

    ವಾಣಿಜ್ಯ ಹಾಗೂ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳು ಪದವಿ ಹಾಗೂ ಸ್ನಾತಕೋತ್ತರ ಪದವಿಗಳ ನಂತರ ತಮ್ಮ ಅದೃಷ್ಟವನ್ನು ಈ ಕೆಳಕಂಡ ಕಂಪನಿಗಳಲ್ಲಿ ಪರೀಕ್ಷಿಸಬಹುದು.
    1) ಅಮೆರಿಕನ್ ಎಕ್ಸ್‌ಪ್ರೆಸ್, 2) ಅರ್ನ್‌ಸ್ಟ್ ಅಂಡ್ ಯಂಗ್, 3) ಉಜ್ಜೀವನ್ ಫೈನಾನ್ಶಿಯಲ್ ಸರ್ವೀಸಸ್, 4) ಗೂಗಲ್ 5) ಐ.ಬಿ.ಎಂ, 6) ಆಕ್ಸಿಸ್ ಬ್ಯಾಂಕ್, 7) ಎಚ್‌ಡಿಎಫ್‌ಸಿ ಬ್ಯಾಂಕ್, 8) ಕ್ಯಾಕ್ಸ್‌ಸ್ ಕಮ್ಯುನಿಕೇಶನ್ಸ್, 9) ಫಿಡಿಲಿಟಿ, 10) ಅಪೋಲೋ ಮ್ಯಾನಿಚ್ ಹೆಲ್ತ್ ಇನ್ಶುರೆನ್ಸ್ ಕಂಪನಿ, 11) ಮಹಿಂದ್ರಾ ಹಾಗೂ ಮಹಿಂದ್ರಾ ಸರ್ವೀಸಸ್, 12) ಇನ್ಫೋಸಿಸ್, 13) ಓರ‌್ಯಾಕಲ್, 14) ಜೆ.ಪಿ. ಮಾರ್ಗನ್, 15) ಸ್ಯಾಪ್ ಲ್ಯಾಬ್ಸ್ ಲಿಮಿಟೆಡ್… ಇತ್ಯಾದಿ.

    ಇದನ್ನೂ ಓದಿ: ವಯಸ್ಸು 24, ಸಂಬಳ 58 ಲಕ್ಷ, ಒಂಟಿತನ ಕಾಡ್ತಿದೆ; ಗರ್ಲ್‌ಫ್ರೆಂಡ್, ಸ್ನೇಹಿತರು ಇಲ್ಲ..!

    ವಿಜ್ಞಾನ ಕ್ಷೇತ್ರ

    ನಿಸ್ಸಂಶಯವಾಗಿ ಒಂದು ಅದ್ಭುತವಾದ ಕಲಿಕಾ ಜಗತ್ತು ವಿಜ್ಞಾನ. ಕೌಶಲ ಹಾಗೂ ಅಪೇಕ್ಷಿತ ಜ್ಞಾನ ಉಳ್ಳವರಿಗೆ ಅವಕಾಶಗಳ ಸರಮಾಲೆ. ಪ್ರತಿಷ್ಠಿತ ಹಾಗೂ ಅತೀ ಬೇಡಿಕೆಯುಳ್ಳ ಮೆಡಿಕಲ್ ಹಾಗೂ ಇಂಜಿನಿಯರಿಂಗ್, ಸಾಕಷ್ಟು ವಿಷಯಗಳು ಹಾಗೂ ಬಹಳ ಸಂಖ್ಯೆಯಲ್ಲಿರುವ ಕಾಲೇಜುಗಳು, ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಪದವೀಧರರಿಗೆ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳಲ್ಲಿ ಕೈತುಂಬಾ ವೇತನ ಪಡೆಯುವ ಅವಕಾಶ.

    ಇನ್ನಿತರೆ ಕೋರ್ಸ್‌ಗಳು
    ಬಿ.ಟೆಕ್, ಇಂಟೆಗ್ರೇಟೆಡ್ ಸೈನ್ಸ್ ಎಜುಕೇಶನ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಬೆಂಗಳೂರು, ಜವಹರ್‌ಲಾಲ್ ನೆಹರೂ ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ಬೆಂಗಳೂರು, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ Astro Physics ಸಂಸ್ಥೆಗಳು, Integrated MS Programme ಕೋರ್ಸ್ ನಡೆಯುತ್ತವೆ. ಇಂತಹ ಸಂಸ್ಥೆಗಳಲ್ಲಿ ತರಬೇತಿ ಹೊಂದಿರುವವರಿಗೆ ಉದ್ಯೋಗಾವಕಾಶಗಳು ಅಪಾರ.

    ವೆಟರ್ನರಿ ಸೈನ್ಸ್
    ಪ್ರಾಣಿಗಳ ಆರೋಗ್ಯದ ಬಗ್ಗೆ ಕಾಳಜಿ ಉಳ್ಳ ಆಸಕ್ತರು, ಈ ವಿಭಾಗದಲ್ಲಿ ಪದವಿ ಪಡೆದುಕೊಳ್ಳಬಹುದು. ಸರ್ಕಾರಿ ಪಶುಚಿಕಿತ್ಸಾಲಯಗಳಲ್ಲಿ ಕೆಲಸ ಸಿಗುವ ಸಂಭವ ಹೆಚ್ಚು.

    ಅಗ್ರಿಕಲ್ಚರ್
    ಬಿಎಸ್ಸಿ ಇನ್ ಅಗ್ರಿಕಲ್ಚರ್, ಸೆರಿಕಲ್ಚರ್, ಬಿ.ಟೆಕ್ ಡೈರಿ, ಬಿಎಸ್ಸಿ ಇನ್ ಹಾರ್ಟಿಕಲ್ಚರ್, ಬಿಎಸ್ಸಿ ಇನ್ Forestry, ಬಿಎಸ್ಸಿ ಇಂಡಸ್ಟ್ರಿಯಲ್ ಫಿಶರೀಸ್ ಬಿಎಸ್ಸಿ ಹಾಗೂ ಎಂಎಸ್ಸಿ ಪ್ರೌಢಶಾಲಾ ಶಿಕ್ಷಕರಾಗಲು, ಬಿಎಸ್ಸಿ (ಪಿಸಿಎಂ) ಆ್ಯಂಡ್ (ಸಿಬಿಝಡ್) ಅವಶ್ಯಕ. ಈಗ ಬಿಎಸ್ಸಿ ಒಂದು ವರ್ಸಟೈಲ್ ಕೋರ್ಸ್. ಬಿಎಸ್ಸಿ ಆ್ಯಂಡ್ ಎಂಎಸ್ಸಿ ಫೋಟೋನಿಕ್ಸ್, ನ್ಯಾನೋ ಟೆಕ್ನಾಲಜಿ, ಬಯೋ ಫಿಸಿಕ್ಸ್, ಬಯೋ ಇನ್ಫಾರ್ಮಟೆಕ್ಸ್, ಎಂಎಸ್ಸಿ ಇನ್ ಕೆಮಿಸ್ಟ್ರಿ, ಇಂಡಸ್ಟ್ರಿಯಲ್ ಕೆಮಿಸ್ಟ್ರಿ ಅಪ್ಲೈಡ್ ಕೆಮಿಸ್ಟ್ರಿ (ಎಂಸಿಎ), ಪಿಎಚ್‌ಡಿ ಇನ್ ಅಸ್ಟ್ರಾನಮಿ, ಅಸ್ಟ್ರೋಫಿಸಿಕ್ಸ್, ಸ್ಪೇಸ್‌ಸೈನ್ಸ್, ನ್ಯಾನೋ ಟೆಕ್ನಾಲಜಿ, ನ್ಯೂಕ್ಲಿಯರ್ ಎನರ್ಜಿ.

    ನರ್ಸಿಂಗ್‌ನಲ್ಲಿ: ಬಿಎಸ್ಸಿ ನರ್ಸಿಂಗ್, ಎಂಎಸ್ಸಿ ನರ್ಸಿಂಗ್.
    ಫಾರ್ಮಸಿ: ಬಿ.ಫಾರ್ಮ, ಎಂ.ಫಾರ್ಮ.

    ಇದನ್ನೂ ಓದಿ: ಜಿಲೇಬಿ ಫೈಲ್​ ಬಂದ್ರೆ ಬಿಸಾಕುತ್ತಿದ್ರಿ, ಜಿಲೇಬಿ ಅಂದ್ರೆ ಜನಕ್ಕೆ ಗೊತ್ತಿಲ್ವಾ? ಕಾಂಗ್ರೆಸ್​ ವಿರುದ್ಧ ಸಿಎಂ ಬೊಮ್ಮಾಯಿ ಕಿಡಿ

    ಕಾನೂನು ಪದವಿ

    ಈಗಲೂ ಕಾನೂನು ಪದವಿ ವಿಷಯದಲ್ಲಿಯೂ ತಮ್ಮ ಜೀವನಪಥ ಕಂಡುಕೊಳ್ಳಬಹುದು. ಸರ್ಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಯಶಸ್ವಿಯಾದಲ್ಲಿ ಜಡ್ಜ್ ಹುದ್ದೆ ಪಡೆಯುವ ಸಂಭವವಿದೆ. National Law School of India University ಹಾಗೂ ಇತರೆ ಹದಿನಾಲ್ಕು ಸಂಸ್ಥೆಗಳಲ್ಲಿ ಉತ್ತಮ ಮಟ್ಟದ ಕಾನೂನು ಶಿಕ್ಷಣ ಪಡೆಯಬಹುದು.

    ಮರ್ಚಂಡ್ ನ್ಯಾವಿ Merchant Navy
    ಜಗತ್ತನ್ನು ಸಮುದ್ರದ ಮೂಲಕ ಸುತ್ತುವ ವಿಶೇಷ ಅಭಿರುಚಿ ಹೊಂದಿರುವವರೆಗೆ ಈ ಹುದ್ದೆಗೆ ಪ್ರಯತ್ನ ಪಡಬಹುದು. Shipping Corporation of India (Mumbai) ಹಾಗೂ ಗೋವಾ, ಕೊಚ್ಚಿ, ಚೆನ್ನೈನ ಖಾಸಗಿ ಸಂಸ್ಥೆಗಳು ಈ ಕ್ಷೇತ್ರಕ್ಕೆ ಸಂಬಂಧ ಪಟ್ಟಂತೆ ಶಿಕ್ಷಣ ನೀಡಬಲ್ಲವು.

    ಬಿಎಸ್‌ಡಬ್ಲ್ಯು ಮತ್ತು ಎಂಎಸ್‌ಡಬ್ಲ್ಯು: ಸಾಮಾಜಿಕ ಕಾರ್ಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದವರಿಗೆ ಸರ್ಕಾರಿ, ಖಾಸಗಿ ಹಾಗೂ ಸರ್ಕಾರೇತರ ಸಂಸ್ಥೆಗಳಲ್ಲಿ ಕೆಲಸ ಸಿಗುವ ಸಂಭವ ಹೆಚ್ಚು.

    ಬಿ.ಎಸ್ಸಿ. ಇನ್ ಡಿಸೈನ್
    ಫ್ಯಾಷನ್ ಡಿಸೈನ್, ಆರ್ನಮೆಂಟ್ ಡಿಸೈನ್, ಟೆಕ್ಸ್ ಟೈಲ್ ಡಿಸೈನ್, ಇಂಟೀರಿಯರ್ ಡಿಸೈನ್.

    ನ್ಯಾಷನಲ್​ ಡಿಫೆನ್ಸ್​ ಅಕಾಡೆಮಿ: ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಆಯ್ಕೆಯಾದವರು ದೆಹಲಿಯ ಜವಾಹರ್‌ಲಾಲ್ ವಿಶ್ವವಿದ್ಯಾಲಯದಿಂದ B.Sc. Degree ಪಡೆದುಕೊಳ್ಳುತ್ತಾರೆ ಹಾಗೂ ಏರ್ ಫೋರ್ಸ್ ಹಾಗೂ ಏರ್‌ವಿಂಗ್ ನ್ಯಾವಿಂಗ್‌ಗೆ ಆಯ್ಕೆಯಾಗುತ್ತಾರೆ.

    ಪೈಲಟ್​
    ಪೈಲಟ್ ಆಗಬಯಸುವವರು ಇಂದಿರಾಗಾಂಧಿ ಉದನ್ ಇನ್‌ಸ್ಟಿಟ್ಯೂಟ್‌ಗೆ ತರಬೇತಿಗೆ ತೆರಳಬಹುದು. ಅಲ್ಲಿ ಕಮರ್ಷಿಯಲ್ ಪೈಲಟ್ ಲೈಸನ್ಸ್‌ಗಾಗಿ ಪ್ರಯತ್ನಿಸಬಹುದು.

    ಪ್ಯಾರಾ ಮೆಡಿಕಲ್ ಕೋರ್ಸ್‌ಗಳು
    1) Bachelor in Audiology and Speech langing fethology.
    2) Bachelor of Physiotherapy.
    3) B.Sc. Medical Laboratory Technology
    4) B.Sc. Radio Theraphy.
    5) B.Sc. Medical Imaging Technology.
    6) B.Sc.(B&D) Bachelor of Health Care & Hospital Managenment.
    7) B.Sc. (AHS): Bachelor of Allied Health Science.

    =======================================
    ಲೇಖಕರು: ಪ್ರೊ.ಗಿರೀಶ್ ಯರಲಕಟ್ಟಿಮಠ
    ಸಹಾಯಕ ಪ್ರಾಧ್ಯಾಪಕ, ಸ್ನಾತಕೋತ್ತರ ಮ್ಯಾನೇಜ್‌ಮೆಂಟ್ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ
    ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯ, ತುಮಕೂರು

    ದ್ವಿತೀಯ ಪಿಯು ಫಲಿತಾಂಶ ಪ್ರಕಟ: ದಕ್ಷಿಣ ಕನ್ನಡ ಮೇಲುಗೈ, ಯಾದಗಿರಿಗೆ ಕೊನೇ ಸ್ಥಾನ

    ದ್ವಿತೀಯ ಪಿಯು ಫಲಿತಾಂಶ: ವಿಷಯವಾರು ನೂರಕ್ಕೆ ನೂರು ಅಂಕ ಗಳಿಸಿದ ವಿದ್ಯಾರ್ಥಿಗಳ ಸಂಖ್ಯೆ ಹೀಗಿದೆ..

    ಪಿಯುಸಿ ಫಲಿತಾಂಶ: ಮೂರು ಪ್ರಥಮ ಸ್ಥಾನಗಳು ಹೆಣ್ಮಕ್ಕಳ ಮುಡಿಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts