More

    ದ್ವಿತೀಯ ಪಿಯು ಫಲಿತಾಂಶ ಪ್ರಕಟ: ದಕ್ಷಿಣ ಕನ್ನಡ ಮೇಲುಗೈ, ಯಾದಗಿರಿಗೆ ಕೊನೇ ಸ್ಥಾನ

    ಬೆಂಗಳೂರು: 2022-23ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಶುಕ್ರವಾರ (ಏಪ್ರಿಲ್​ 21) ಪ್ರಕಟಗೊಂಡಿದ್ದು, ಈ ಬಾರಿ ಶೇ.78.97 ಫಲಿತಾಂಶ ಬಂದಿದೆ. ಕಳೆದ ವರ್ಷಕ್ಕಿಂತ ಶೇ.13 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಕಳೆದ ಬಾರಿ ಶೇ. 61.88 ಫಲಿತಾಂಶ ಬಂದಿತ್ತು.

    ಈ ಬಾರಿ ದಕ್ಷಿಣ ಕನ್ನಡ ಶೇ. 95.33 ಫಲಿತಾಂಶದೊಂದಿಗೆ ಪ್ರಥಮ ಸ್ಥಾನ ಪಡೆದಿದ್ದರೆ, ಯಾದಗಿರಿ ಶೇ. 62.98 ಫಲಿತಾಂಶದೊಂದಿಗೆ ಮತ್ತೊಮ್ಮೆ ಕೊನೆಯ ಸ್ಥಾನಕ್ಕೆ ಕುಸಿದಿದೆ. ದಕ್ಷಿಣ ಕನ್ನಡ ಶೇ. 88.02 ಫಲಿತಾಂಶದೊಂದಿಗೆ ಕಳೆದ ಬಾರಿಯೂ ಮೇಲುಗೈ ಸಾಧಿಸಿತ್ತು. ಕಳೆದ ಬಾರಿ ಶೇ, 60.59 ಫಲಿತಾಂಶದೊಂದಿಗೆ 23ನೇ ಸ್ಥಾನದಲ್ಲಿದ್ದ ಯಾದಗಿರಿ ಈ ಬಾರಿ ಕೊನೆಯ ಸ್ಥಾನಕ್ಕೆ ಕುಸಿದಿದೆ. ಕಳೆದ ಬಾರಿ ಶೇ. 49.31 ಫಲಿತಾಂಶದೊಂದಿಗೆ ಕೊನೆಯ ಸ್ಥಾನದಲ್ಲಿದ್ದ ಚಿತ್ರದುರ್ಗ ಈ ಬಾರಿ ಶೇ.69.5 ಫಲಿತಾಂಶದೊಂದಿಗೆ 28ನೇ ಸ್ಥಾನಕ್ಕೆ ಜಿಗಿದಿದೆ.

    * ಈ ಬಾರಿ ಪರೀಕ್ಷೆಗೆ ನೋಂದಾಯಿಸಿದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ: 7,27,923
    * ಪರೀಕ್ಷೆಗೆ ಅರ್ಹರಾದ ಒಟ್ಟು ವಿದ್ಯಾರ್ಥಿಗಳು: 7,25,821
    * ಎಲ್ಲಾ ವಿಷಯದಲ್ಲಿ ಗೈರಾದ ವಿದ್ಯಾರ್ಥಿಗಳು: 23,754
    * ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳು : 7,02,067
    * ತೇರ್ಗಡೆಯಾದ ಒಟ್ಟು ವಿದ್ಯಾರ್ಥಿಗಳು: 5,24,209

    ಈ ಬಾರಿಯು ಬಾಲಕಿಯರದ್ದೇ ಮೇಲುಗೈ

    ಬಾಲಕರು
    ಹಾಜರು: 3,49,901
    ತೇರ್ಗಡೆ: 2,41,607
    ಶೇಕಡವಾರು ಫಲಿತಾಂಶ: 69.05

    ಬಾಲಕಿಯರು
    ಹಾಜರು: 3,52,166
    ತೇರ್ಗಡೆ: 2,82,602
    ಶೇಕಡವಾರು ಫಲಿತಾಂಶ: 80.25

    ಈ ಬಾರಿ ಬಾಲಕಿಯರದ್ದೇ ಮೇಲುಗೈ

    ಜಿಲ್ಲೆಗಳ ಶೇಕಡವಾರು ಫಲಿತಾಂಶ

    Second PUC Result 2022-23

    ಶುಕ್ರವಾರ ಬೆಳಗ್ಗೆ 10.00ಕ್ಕೆ ಮಲ್ಲೆಶ್ವರದಲ್ಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಲ್ಲಿ ಫಲಿತಾಂಶ ಬಿಡುಗಡೆ ಮಾಡಲಾಯಿತು. ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿ (ಕೆಎಸ್​ಇಎಬಿ) ಯ ಅಧ್ಯಕ್ಷ ರಾಮಚಂದ್ರ, ಕರ್ನಾಟಕ ಶಾಲಾ ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಸಿಂಗ್ ಭಾಗಿಯಾಗಿದರು.

    ದ್ವಿತೀಯ ಪಿಯು ಫಲಿತಾಂಶ ಪ್ರಕಟ: ದಕ್ಷಿಣ ಕನ್ನಡ ಮೇಲುಗೈ, ಚಿತ್ರದುರ್ಗಕ್ಕೆ ಕೊನೇ ಸ್ಥಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts