More

    ‘ಸಿನಿಮಾ ಇನ್ನೂ ಬಾಕಿ ಇದೆ, ಈಗ ಕೇಜ್ರಿವಾಲ್ ಸರದಿ’: ಕವಿತಾ ಬಂಧನದ ಕುರಿತು ತಿಹಾರ್‌ನಿಂದ ಸುಕೇಶ್ ಚಂದ್ರಶೇಖರ್ ಲೆಟರ್‌ ಬಾಂಬ್‌

    ನವದೆಹಲಿ: ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಇಡಿ ತಂಡ ಇತ್ತೀಚೆಗೆ ತೆಲಂಗಾಣದ ಬಿಆರ್‌ಎಸ್ ನಾಯಕಿ ಕವಿತಾ ಅವರನ್ನು ಬಂಧಿಸಿದೆ. ಅವರನ್ನು ಒಂದು ವಾರ ರಿಮಾಂಡ್‌ಗೆ ಕಳುಹಿಸಲಾಗಿದೆ. ಈ ನಡುವೆ ತಿಹಾರ್ ಜೈಲಿನಲ್ಲಿರುವ ಸುಖೇಶ್ ಚಂದ್ರಶೇಖರ್ ಕವಿತಾರನ್ನು ಗುರಿಯಾಗಿಸಿಕೊಂಡು ಪತ್ರ ಬರೆದಿದ್ದಾರೆ. ತಮ್ಮ ಪತ್ರದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧವೂ ಸುಕೇಶ್ ತೀವ್ರ ವಾಗ್ದಾಳಿ ನಡೆಸಿದ್ದು, ಕೇಜ್ರಿವಾಲ್ ಕೂಡ ಶೀಘ್ರವೇ ತಿಹಾರ್ ಜೈಲಿಗೆ ಬರಬೇಕು ಎಂದು ಹೇಳಿದ್ದಾರೆ. ಇನ್ನು ಸುಕೇಶ್ ಏನೇನೆಲ್ಲಾ ಹೇಳಿದ್ದಾರೆಂದು ತಿಳಿಯೋಣ.

    ಕೆ.ಕವಿತಾ ಅವರನ್ನು ಗುರಿಯಾಗಿಟ್ಟುಕೊಂಡು ಪತ್ರದಲ್ಲಿ ಬರೆದಿರುವ ಸುಕೇಶ್, “ಸತ್ಯಕ್ಕೆ ಜಯ ಸಿಕ್ಕಿದೆ. ನಕಲಿ ಕೇಸ್, ಸುಳ್ಳು ಆರೋಪ ಎನ್ನುವ ನಾಟಕ ವಿಫಲವಾಗಿದೆ. ಈಗ ನೀವು ಸತ್ಯದ ಶಕ್ತಿಯನ್ನು ಎದುರಿಸಬೇಕಾಗಿದೆ. ನೀವು ಯಾವಾಗಲೂ ಅಜೇಯರು ಎಂದು ಭಾವಿಸಿದ್ದೀರಿ. ಆದರೆ ಈ ಹೊಸ ಭಾರತದಲ್ಲಿ ನೀವು ಮರೆತಿದ್ದೀರಿ, ಕಾನೂನು ಹಿಂದೆಂದಿಗಿಂತಲೂ ಬಲವಾಗಿದೆ ಮತ್ತು ಹೆಚ್ಚು ಶಕ್ತಿಯುತವಾಗಿದೆ” ಎಂದು ಸುಕೇಶ್ ಪತ್ರದಲ್ಲಿ ಬರೆದಿದ್ದಾರೆ.

    ಕಳೆದ ಒಂದು ವರ್ಷದಲ್ಲಿ ತೆಲಂಗಾಣದಲ್ಲಿ ಬಿಆರ್‌ಎಸ್ ಅಧಿಕಾರದಿಂದ ಹೊರಗುಳಿದಿದ್ದು, ಕೆ ಕವಿತಾ ಅವರನ್ನು ಬಂಧಿಸಿ ತಿಹಾರ್ ಕ್ಲಬ್‌ನ ಭಾಗವಾಗಲು ಕ್ಷಣಗಣನೆ ಪ್ರಾರಂಭವಾಗಿದೆ ಎಂದು ಹೇಳಿರುವ ಸುಕೇಶ್, “ನಿಮಗೆ ಪ್ರಾಮಾಣಿಕ ಸಲಹೆ ಎಂದರೆ ಇನ್ನೂ ಎಲ್ಲವನ್ನೂ ಮುಚ್ಚಿಟ್ಟು ಈ ಹಗರಣದ ಮಾಸ್ಟರ್ ಮೈಂಡ್ ಮತ್ತು ಗಾಡ್ ಫಾದರ್ ಅರವಿಂದ್ ಕೇಜ್ರಿವಾಲ್ ಅವರನ್ನು ಉಳಿಸಲು ಪ್ರಯತ್ನಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಈಗ ನಿಮ್ಮ ಎಲ್ಲಾ ಭ್ರಷ್ಟಾಚಾರವನ್ನು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳಿವೆ. ಶ್ರೇಷ್ಠವಾದ ತಿಹಾರ್ ಕ್ಲಬ್‌ಗೆ ನಿಮ್ಮನ್ನು ಸ್ವಾಗತಿಸುತ್ತೇನೆ” ಎಂದು ಬರೆದಿದ್ದಾರೆ ಸುಕೇಶ್.

    “ಕವಿತಾ ತಿಹಾರ್‌ನಲ್ಲಿ ದೀರ್ಘಕಾಲ ಉಳಿಯಲು ಕೇಜ್ರಿವಾಲ್ ಅವರು ಎಲ್ಲ ವ್ಯವಸ್ಥೆ ಮಾಡಿದ್ದಾರೆ. ನನ್ನ ಪ್ರೀತಿಯ ಕೇಜ್ರಿವಾಲ್ ಜೀ, ನೀವು ಮುಂದಿನವರು, ನೀವು ಎಷ್ಟೇ ಪ್ರಯತ್ನಿಸಿದರೂ, ಈಗ ಅದು ಮುಗಿದಿದೆ, ಇದು ನಿಮ್ಮ ಎಲ್ಲಾ ಸುಳ್ಳು ಮತ್ತು ನಾಟಕದ ಪರಾಕಾಷ್ಠೆಯಾಗಿದೆ. ಈಗ ನಿಮ್ಮ ಸ್ವಂತ ತಿಹಾರ್ ಕ್ಲಬ್‌ನಲ್ಲಿರುವ ನಿಮ್ಮ ಎಲ್ಲಾ ಸಹೋದರ ಸಹೋದರಿಯರ ಬಳಿಗೆ ಬನ್ನಿ” ಎಂದು ಸುಕೇಶ್ ಪತ್ರದಲ್ಲಿ ತಿಳಿಸಿದ್ದಾರೆ. 

    ‘ಈವರೆಗಿನ ಬೆಳವಣಿಗೆ ಏನೇ ಆಗಿರಲಿ, ಎಲ್ಲವೂ ಸುಖಾಂತ್ಯ ಕಾಣಲಿದೆ’: ವಿಜಯೇಂದ್ರ ವಿಶ್ವಾಸ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts