More

    ಐಪಿಎಲ್ ಬಳಿಕ ಪ್ರೊ ಕಬಡ್ಡಿ ಲೀಗ್, ಬಿಗ್ ಬಾಸ್‌ನಿಂದಲೂ ವಿವೋ ಔಟ್?

    ನವದೆಹಲಿ: ಚೀನಾ ವಿರುದ್ಧದ ಜನಾಕ್ರೋಶದ ಹಿನ್ನೆಲೆಯಲ್ಲಿ ಐಪಿಎಲ್ 13ನೇ ಆವೃತ್ತಿಯ ಶೀರ್ಷಿಕೆ ಪ್ರಾಯೋಜಕತ್ವದಿಂದ ಹಿಂದೆ ಸರಿದಿರುವ ಮೊಬೈಲ್ ಕಂಪನಿ ವಿವೋ, ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಪ್ರಾಯೋಜಕತ್ವವನ್ನೂ ತ್ಯಜಿಸಿದೆ ಎಂದು ವರದಿಯಾಗಿದೆ. ಜತೆಗೆ ಜನಪ್ರಿಯ ಹಿಂದಿ ರಿಯಾಲಿಟಿ ಶೋ ಬಿಗ್ ಬಾಸ್ ಪ್ರಾಯೋಜಕತ್ವದಿಂದಲೂ ಹೊರನಡೆದಿದೆ ಎನ್ನಲಾಗಿದೆ.

    ಪ್ರೊ ಕಬಡ್ಡಿ ಲೀಗ್ ಜತೆಗಿನ ಒಪ್ಪಂದದ ಅನ್ವಯ ಚೀನಾ ಮೂಲದ ಕಂಪನಿ ವಿವೋ, ವಾರ್ಷಿಕ 60 ಕೋಟಿ ರೂ. ಮೊತ್ತ ಪಾವತಿಸುತ್ತಿತ್ತು. ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕಲರ್ಸ್‌ ವಾಹಿನಿಗೆ ವಾರ್ಷಿಕ 30 ಕೋಟಿ ರೂ. ನೀಡುತ್ತಿತ್ತು ಎನ್ನಲಾಗಿದೆ.

    ‘ಭಾರತ-ಚೀನಾ ಗಡಿ ಸಂಘರ್ಷದ ಬಳಿಕ ತನ್ನ ಬ್ರಾಂಡ್ ನಕಾರಾತ್ಮಕ ಪ್ರಚಾರ ಪಡೆಯುತ್ತಿರುವ ಹಿನ್ನೆಲೆಯಲ್ಲಿ ವಿವೋ ಕಂಪನಿ ಪ್ರಾಯೋಜಕತ್ವಗಳಿಂದ ದೂರ ಉಳಿಯಲು ಬಯಸಿದೆ. ಐಪಿಎಲ್ ಜತೆಗೆ ಈ ವರ್ಷದ ಎಲ್ಲ ಪ್ರಮುಖ ಒಪ್ಪಂದಗಳನ್ನೂ ತ್ಯಜಿಸಲು ಬಯಸಿದೆ. ವಿವೋ ಈಗ ತನ್ನ ಉತ್ಪನ್ನಗಳನ್ನು ರಿಟೇಲ್ ರಿಯಾಯಿತಿ ಮತ್ತು ಹೆಚ್ಚಿನ ಕಮಿಷನ್ ನೀಡುವ ಮೂಲಕ ಮಾರಾಟ ಮಾಡುವತ್ತ ಗಮನಹರಿಸಿದೆ’ ಎಂದು ಕಂಪನಿಯ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.

    ಇದನ್ನೂ ಓದಿ: VIDEO: ಮೈದಾನಕ್ಕೆ ಸಹ ಆಟಗಾರನ ಶೂ ಕೊಂಡೊಯ್ದ ಸರ್ಫಾಜ್, ತಂಡದ ವಿರುದ್ಧ ಸಿಟ್ಟಾದ ಶೋಯಿಬ್​ ಅಖ್ತರ್​

    ಪ್ರೊ ಕಬಡ್ಡಿ ಲೀಗ್ ಆಯೋಜಕ ಸ್ಟಾರ್ ಸ್ಪೋರ್ಟ್ಸ್ ಜತೆಗೆ ವಿವೋ ಕಂಪನಿ 2017ರಲ್ಲಿ 5 ವರ್ಷಗಳಿಗೆ ಒಟ್ಟು 300 ಕೋಟಿ ರೂ. ಮೊತ್ತಕ್ಕೆ ಒಪ್ಪಂದ ಮಾಡಿಕೊಂಡಿತ್ತು. ಕರೊನಾ ಹಾವಳಿಯಿಂದಾಗಿ 2020ರ ಪ್ರೊ ಕಬಡ್ಡಿ ಲೀಗ್ ಟೂರ್ನಿ ಬಹುತೇಕ ರದ್ದುಗೊಂಡಿದೆ. ಇನ್ನು ಬಿಗ್ ಬಾಸ್ ರಿಯಾಲಿಟಿ ಶೋ ಮುಂದಿನ ಆವೃತ್ತಿ ಅಕ್ಟೋಬರ್‌ನಲ್ಲಿ ನಡೆಯುವ ನಿರೀಕ್ಷೆ ಇದ್ದು, ಅದರಿಂದಲೂ ವಿವೋ ದೂರ ಉಳಿಯಲಿದೆ.

    ಸಾನಿಯಾ ಭೇಟಿಗೆ ಅವಕಾಶವಿಲ್ಲ, ನಿರಾಸೆಯಿಂದಲೇ ಇಂಗ್ಲೆಂಡ್‌ನತ್ತ ಮಲಿಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts