More

    ಲಾಕ್​ಡೌನ್​ ತೆರವಾದ ಬಳಿಕ ಸಾರ್ವಜನಿಕ ಸಾರಿಗೆ ಬಳಕೆ ಟ್ರೆಂಡ್​ ಹೇಗಿರುತ್ತೆ?

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಭಾನುವಾರದಂದು ಲಾಕ್​ಡೌನ್​ 4.0 ಅವಧಿಯಲ್ಲಿ ಏನೆಲ್ಲ ಸಡಲಿಕೆಯಾಗಲಿದೆ, ಎಲ್ಲೆಲ್ಲಿ ಅದು ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ ಎಂಬ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದೆ. ಇದೇ ವೇಳೆ, ಲಾಕ್​ಡೌನ್​ 4.0 ಅವಧಿಯಲ್ಲಿ ಸಾರ್ವಜನಿಕ ಸಾರಿಗೆ ಪುನರಾರಂಭಗೊಳ್ಳುವ ಬಗ್ಗೆಯೂ ಮಾತುಗಳು ಕೇಳಿ ಬರುತ್ತಿವೆ.

    ಸಾರ್ವಜನಿಕ ಸಾರಿಗೆ ಆರಂಭವಾಗುತ್ತಿರುವಂತೆ ಜನರು ಮೊದಲಿನಂತೆ ಅವುಗಳನ್ನು ಬಳಸಲು ಮುಂದಾಗುತ್ತಾರಾ? ಅಥವಾ ತಮ್ಮ ಸ್ವಂತ ವಾಹನಗಳ ಬಳಕೆಯನ್ನು ಹೆಚ್ಚು ಮಾಡುತ್ತಾರಾ ಎಂಬ ಪ್ರಶ್ನೆಗಳು ಮೂಡಲಾರಂಭಿಸಿವೆ. ಆದರೆ ಈ ಎಲ್ಲ ಪ್ರಶ್ನೆಗಳಿಗೆ ವೆಲಾಸಿಟಿ ಎಂಆರ್​ ಎಂಬ ಸಂಸ್ಥೆ ನಡೆಸಿರುವ ಸಮೀಕ್ಷೆಯಲ್ಲಿ ಉತ್ತರ ಸಿಕ್ಕಿದೆ.

    ಇದನ್ನೂ ಓದಿ: ಸೆಕೆ ಅಂತ ಮನೆಯ ಪಡಸಾಲೆಯಲ್ಲಿ ಮಲಗಿದ್ದ ವೃದ್ಧೆಯನ್ನು ಎಳೆದೊಯ್ದು ತಿಂದ ಚಿರತೆ!

    ಲಾಕ್​ಡೌನ್​ ನಂತರದಲ್ಲಿ ಸಾರ್ವಜನಿಕ ಸಾರಿಗೆ ಆರಂಭವಾದರೂ ಹೆಚ್ಚಿನ ಸಂಖ್ಯೆಯ ಜನರು ಅದನ್ನು ಬಳಸುವುದು ಅನುಮಾನವಾಗಿದೆ. ಸಮೀಕ್ಷೆಯಲ್ಲಿ ಶೇ.70 ಜನ ಸಾರ್ವಜನಿಕ ಸಾರಿಗೆ ಬಳಸುವುದಿಲ್ಲ ಎಂದು ಹೇಳಿರುವುದು ಇದಕ್ಕೆ ಕಾರಣ.

    ಅಷ್ಟೇ ಅಲ್ಲ, ಒಲಾ, ಉಬರ್​ನಂತ ಟ್ಯಾಕ್ಸಿ ಸೇವೆಯನ್ನು ಕೂಡ ತಾವು ಬಳಸುವುದಿಲ್ಲ ಎಂದು ಶೇ.62 ಜನ ಹೇಳಿದ್ದಾರಂತೆ. ಇದರರ್ಥ ಜನರು ತಮ್ಮ ದೈನಂದಿನ ಸಂಚಾರಕ್ಕೆ ಸ್ವಂತ ವಾಹನಗಳನ್ನು ಬಳಸುವುದು ನಿಶ್ಚಿವಾಗಿದೆ. ಇದರಿಂದಾಗಿ, ರಸ್ತೆಗಳಲ್ಲಿ ವಾಹನದಟ್ಟಣೆ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು ನಿಶ್ಚಿತವಾಗಿದೆ.

    ಇದನ್ನೂ ಓದಿ: ನಗರ ನಕ್ಸಲರು ಮತ್ತು ಜಿಹಾದಿಗಳ ಹಿಂದೆ ಹೋದ ಹಿಂದೂ ಯುವತಿಯ ದುರಂತ ಕಥೆ ಇದು…

    ಇನ್ನು ಮಾಲ್​, ಸೂಪರ್​ಮಾರ್ಕೆಟ್​ ಮತ್ತು ಚಿತ್ರಮಂದಿರಗಳು ಪುನರಾರಂಭಗೊಂಡರೆ ಎಂದಿನಂತೆ ಶಾಪಿಂಗ್​ ಮತ್ತು ಸಿನಿಮಾ ನೋಡಲು ಹೋಗುತ್ತಾರೆ ಎಂದು ಭಾವಿಸಿದ್ದರೆ ಅದೂ ಕೂಡ ತಪ್ಪು. ಮಾಲ್​ ಮತ್ತು ಸೂಪರ್​ಮಾರ್ಕೆಟ್​ನಲ್ಲಿ ಬಿಲ್​ಕುಲ್​ ಶಾಪಿಂಗ್​ ಮಾಡುವುದಿಲ್ಲ ಎಂದು ಶೇ.71 ಜನ ಸಮೀಕ್ಷೆಯಲ್ಲಿ ಹೇಳಿದ್ದಾರೆ. ಅದರ ಬದಲು ಆನ್​ಲೈನ್​ನಲ್ಲಿ ಶಾಪಿಂಗ್​ ಮಾಡಲು ಬಯಸುವುದಾಗಿ ಶೇ.80 ಜನ ತಿಳಿಸಿದ್ದಾರೆ.

    ಕರೊನೋತ್ತರದಲ್ಲಿ ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತದೆ ಎಂದು ಶೇ.50 ಜನ ಶಂಕೆ ವ್ಯಕ್ತಪಡಿಸಿದ್ದರೆ, ಖಾಸಗಿ ವಲಯದಲ್ಲಿ ಉದ್ಯೋಗ ಭದ್ರತೆಯ ನಷ್ಟವಾಗುತ್ತದೆ ಎಂದು ಶೇ.53 ಜನ ಅಭಿಪ್ರಾಯಪಟ್ಟಿದ್ದಾರೆ.
    ಚಿನ್ನ ಖರೀದಿಗೆ ಆಸಕ್ತಿ: ಕರೊನೋತ್ತರ ಜಗತ್ತಿನಲ್ಲಿ ಅನಿಶ್ಚಿತತೆ ಮುಂದುವರಿದಿದ್ದರೂ ಜನರು ಮಾತ್ರ ಚಿನ್ನದಲ್ಲಿ ಹೂಡಿಕೆ ಮಾಡಲು ಹೆಚ್ಚು ಆಸಕ್ತಿ ಹೊಂದಿದ್ದಾರೆ.

    ವೆಲಾಸಿಟಿ ಎಂಆರ್​ ಸಂಸ್ಥೆಯ ಎಂಡಿ ಮತ್ತು ಸಿಇಒ ಜಸಲ್​ ಷಾ, ಶೇ.30 ಜನ ಚಿನ್ನದಲ್ಲಿ ಹೂಡಿಕೆ ಮಾಡುವ ಆಸಕ್ತಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮ್ಯೂಚುಯಲ್​ ಫಂಡ್​ಗಳಲ್ಲಿ ಶೇ.47 ಜನರು ಮತ್ತು ಷೇರುಗಳಲ್ಲಿ ಶೇ.33 ಜನರು ಹಣ ಹೂಡಿಕೆ ಮಾಡಲು ಬಯಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.

    ಆರ್ಥಿಕ ಪ್ಯಾಕೇಜ್​ನ 4ನೇ ಭಾಗದಲ್ಲಿ ಈ ಎಂಟು ವಲಯಗಳಿಗೆ ಒತ್ತು..ಖಾಸಗೀಕರಣಕ್ಕೆ ಮಹತ್ವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts