More

    ಮದುವೆ ಊಟದ ಗಮ್ಮತ್ತು; ರಸ್ತೆ ತುಂಬಾ ವಾಂತಿ, ಭೇದಿ..ನವದಂಪತಿ ಸೇರಿ ಅತಿಥಿಗಳು ಆಸ್ಪತ್ರೆ ದಾಖಲು

    ಅಹಮದಾಬಾದ್: ಮದುವೆ ಮನೆಯಲ್ಲಿ ಊಟ ಮಾಡಿ ವಧು-ವರರನ್ನು ಸೇರಿ ಕುಟುಂಬಸ್ಥರು ಅಸ್ವಸ್ಥರಾಗಿದ್ದಾರೆ. ಮದುವೆ ಸಮಾರಂಭ ಮುಗಿಸಿ ಮನೆಗೆ ಮರಳುವ ಬದಲು ವರ, ವಧು-ವರರು ಆಸ್ಪತ್ರೆ ತಲುಪಿದ್ದಾರೆ. ಈ ಘಟನೆ  ಹಮದಾಬಾದ್-ವಡೋದರಾದಲ್ಲಿ  ನಡೆದಿದೆ.

    ಮದುವೆ ಸಮಾರಂಭದಲ್ಲಿ ಊಟ ತಿಂದು ವಾಪಾಸ್ಸಾಗುತ್ತಿದ್ದಾಗ ವಾಂತಿ ಶುರುವಾಗಿದೆ. ಕೂಡಲೇ ಎಲ್ಲರನ್ನು ನಾಡಿಯಾಡ್ ಸಿವಿಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರಲಾಯಿತು. ಆಸ್ಪತ್ರೆಯ ಸಿಬ್ಬಂದಿ ಚಿಕಿತ್ಸೆ ನೀಡಿದ ನಂತರ ಎಲ್ಲರ ಸ್ಥಿತಿ ಸುಧಾರಿಸಿದೆ.

    ನಡೆದಿದ್ದೇನು?: ಗುಜರಾತ್‌ನ ರಾಜ್‌ಪಿಪ್ಲಾದಿಂದ ವರ ಹಿಮಾಂಶು ಮದುವೆ ಅಹಮದಾಬಾದ್​ನಲ್ಲಿ ಅದ್ದೂರಿಯಾಗಿ ನಡೆಯಿತ್ತು.  ಮದುವೆ ವಿಧಿವಿಧಾನಗಳು ಸಂತೋಷದಿಂದ ಜರುಗಿತ್ತು. ಮದುವೆ ಸಮಾರಂಭದಲ್ಲಿ ವಧು, ವರ ಮತ್ತು ನೆಂಟರು ಊಟ ಸವಿದರು.  ಸಮಾರಂಭ ಮುಗಿಸಿ ಛತ್ರದಿಂದ ಹೊರಟರು, ದಾರಿಯಲ್ಲಿ ಮದುವೆಗೆ ಬಂದ ಅತಿಥಿಗಳಿಂದ ತುಂಬಿದ್ದ ಬಸ್‌ನಲ್ಲಿ ಒಬ್ಬರ ನಂತರ ಒಬ್ಬರು ಭೇದಿ, ವಾಂತಿ, ಹೊಟ್ಟೆನೋವು ಕಾಣಿಸಿಕೊಂಡಿದೆ. ಅಷ್ಟೇ ಅಲ್ಲ ಮದುವೆಗೆ ಬಂದವರ ಸ್ಥಿತಿ ಹದಗೆಟ್ಟಿದ್ದರಿಂದ ವಧು-ವರರಿಗೂ ಸಮಸ್ಯೆ ಎದುರಾಗಿದೆ.

    ಇದಾದ ನಂತರ ಅಹಮದಾಬಾದ್-ವಡೋದರಾ ಎಕ್ಸ್‌ಪ್ರೆಸ್ ಹೆದ್ದಾರಿಯ ನಾಡಿಯಾಡ್ ಟೋಲ್ ಬಳಿ ಮದುವೆಗೆ ಅತಿಥಿಗಳು ತುಂಬಿದ್ದ ಬಸ್ ಹಾಗೂ ವಧು-ವರರ ವಾಹನವನ್ನು ತಡೆದು 108ಕ್ಕೆ ಮಾಹಿತಿ ನೀಡಲಾಯಿತು. ಹೆಚ್ಚಿನ ಸಂಖ್ಯೆಯ ರೋಗಿಗಳಿದ್ದ ಕಾರಣ, ಕೆಲವು ರೋಗಿಗಳನ್ನು 108ಗೆ ಮತ್ತು ಕೆಲವರನ್ನು ಮದುವೆಯ ಮೆರವಣಿಗೆ ಬಸ್‌ಗೆ ಕರೆದೊಯ್ಯಲಾಯಿತು. ಆದರೆ ವಧುವರರು ತಮ್ಮ ಕಾರಿನಲ್ಲಿ ನಾಡಿಯಾಡ್ ಸಿವಿಲ್ ಆಸ್ಪತ್ರೆಗೆ ತಲುಪಿದರು.

    ಮದುವೆ ಮನೆಗೆ ಬಂದಿದ್ದ ಸಂಬಂಧಿಕರು ಅತಿಸಾರ, ವಾಂತಿ ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದರು.   ಎಲ್ಲಾ ರೋಗಿಗಳಿಗೆ ತಕ್ಷಣ ಚಿಕಿತ್ಸೆ ನೀಡಿತು ಮತ್ತು ಕೆಲವೇ ಗಂಟೆಗಳಲ್ಲಿ ಎಲ್ಲರ ಆರೋಗ್ಯ ಸುಧಾರಿಸಿದೆ.

    ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡಗೆ ಅನಾರೋಗ್ಯ; ಆಸ್ಪತ್ರೆಗೆ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts