More

    102 ದಿನಗಳ ಬಳಿಕ ಸ್ಪೇನ್​ನಲ್ಲಿ ಭೇಟಿಯಾದ ದಂಪತಿಯ ಸಂಭ್ರಮ

    ನವದೆಹಲಿ: ವಿಶ್ವಾದ್ಯಂತ ಬಾಧಿಸುತ್ತಿರುವ ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಲಾಕ್​ಡೌನ್​ ಜಾರಿಯಾಗಿದ್ದರಿಂದ ಹಲವಾರು ಜನರು ತಾವಿದ್ದಲ್ಲೇ ಸಿಲುಕಿಕೊಂಡು, ಕುಟುಂಬದವರಿಂದ ದೂರಾಗಿ ಇನ್ನಿಲ್ಲದ ಸಂಕಟ, ಸಂಕಷ್ಟಗಳನ್ನು ಎದುರಿಸಿದ್ದರು. ಇದೀಗ ಕಠಿಣ ಲಾಕ್​ಡೌನ್​ ನಿಯಮಗಳು ಸಡಿಲಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪರಸ್ಪರ ಭೇಟಿಯಾಗಲು, ಅಪ್ಪಿಕೊಂಡು, ಮುದ್ದಾಡಿ ಪ್ರೀತಿ ತೋರಲು ಅವಕಾಶ ದೊರೆಯುತ್ತಿದೆ. ಇದು ಅವರೆಲ್ಲರ ಪಾಲಿಗೆ ರೋಮಾಂಚಕಾರಿ ಅನುಭವ ನೀಡುತ್ತಿದೆ.

    ಪ್ಲಾಸ್ಟಿಕ್​ನ ತೆಳುವಾದ ಶೀಟ್​ಗಳ ಬಳಕೆ: ಯಾರೇ ದಂಪತಿಯಾಗಿರಲಿ, ಅಪ್ಪ-ಮಗಳೇ ಆಗಿರಲಿ ಪರಸ್ಪರ ಅಪ್ಪಿಕೊಂಡು, ಮುದ್ದಾಡುವ ಮುನ್ನ ಪ್ಸಲಾಸ್ಟಿಕ್​ನ ತೆಳುವಾದ ಶೀಟ್​ಗಳನ್ನು ಬಳಸಲಾಗುತ್ತಿದೆ. ತನ್ಮೂಲಕ ಕರೊನಾ ಸೋಂಕು ಮತ್ತೊಮ್ಮೆ ಯಾರಿಗೂ ಹಬ್ಬದಂತೆ ಎಚ್ಚರವಹಿಸಲಾಗುತ್ತಿದೆ.

    ಇದನ್ನೂ ಓದಿ: ಗಡಿಯಲ್ಲಿ ಡ್ರೋನ್​ ಬಳಸಿ ನಿಗಾ; ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ ಸಹಕಾರ

    ಸ್ಪೇನ್​ನ ಈ ಹಿರಿಯ ನಾಗರಿಕ ಜೋಡಿ ಸದ್ಯ ಬಾರ್ಸಿಲೋನಾದ ಹಿರಿಯ ನಾಗರಿಕರ ಕೇರ್​ ಸೆಂಟರ್​ನಲ್ಲಿ ಇದ್ದಾರೆ. ತಮ್ಮ 59 ವರ್ಷದ ದಾಂಪತ್ಯದಲ್ಲಿ ಇವರಿಬ್ಬರೂ ಒಮ್ಮೆಯೂ ಪರಸ್ಪರ ನೋಡದೆ, ಅಪ್ಪಿಕೊಳ್ಳದೆ ಕ್ಷಣವನ್ನು ಕಳೆದಿದ್ದೇ ಇಲ್ಲ. ಆದರೆ, ಕೋವಿಡ್​-19ರಿಂದಾಗಿ ಬಾರ್ಸಿಲೋನಾದಲ್ಲಿ ಜಾರಿಗೊಳಿಸಲಾಗಿದ್ದ ಲಾಕ್​ಡೌನ್​ನಿಂದಾಗಿ ಇವರಿಬ್ಬರೂ ಪ್ರತ್ಯೇಕವಾಗಿ, ದೂರ, ದೂರವೇ ಇರಬೇಕಾಗಿ ಬಂದಿತ್ತು. 102 ದಿನಗಳ ಬಳಿಕ ಇದೀಗ ಬಾರ್ಸಿಲೋನಾದಲ್ಲಿ ಲಾಕ್​ಡೌನ್​ ನಿಯಮಗಳನ್ನು ಸಡಿಲಗೊಳಿಸಲಾಗಿದೆ.

    102 ದಿನಗಳ ಬಳಿಕ ಸ್ಪೇನ್​ನಲ್ಲಿ ಭೇಟಿಯಾದ ದಂಪತಿಯ ಸಂಭ್ರಮ

    ಸಿಕ್ಕ ಮೊದಲ ಅವಕಾಶದಲ್ಲೇ ಪರಸ್ಪರ ಭೇಟಿಯಾದ ದಂಪತಿ, ಪ್ಲಾಸ್ಟಿಕ್​ನ ತೆಳುವಾದ ಶೀಟ್​ ಅನ್ನು ಬಳಸಿ, ಪರಸ್ಪರ ಚುಂಬಿಸಿಕೊಂಡು, ದೀರ್ಘಅಗಲಿಕೆಯ ನೋವನ್ನು ಮರೆಯಲು ಯತ್ನಿಸಿದರು.

    ಇವರಂತೆ ನಾಲ್ಕು ತಿಂಗಳ ಬಳಿಕ ಬಾರ್ಸಿಲೋನಾಕ್ಕೆ ಪ್ರಯಾಣಿಸಿ, ಅಪ್ಪನನ್ನು ನೋಡಲು ಅವಕಾಶ ಸಿಗುತ್ತಲೇ ಪುತ್ರಿ ಡೊಲೇರೆಸ್​ ರೇಯೆಸ್​ ತಮ್ಮ ತಂದೆ ಜೋಸ್​ ರೇಯೆಸ್​ ಅವರನ್ನು ಅಪ್ಪಿಕೊಂಡು ಸಂತೈಸಿದರು. ಇಂಥ ಹಲವು ಹೃದಯಸ್ಪರ್ಶಿ ದೃಶ್ಯಗಳು ಸ್ಪೇನ್​ನ ಉದ್ದಗಲಕ್ಕೂ ನೋಡಬಹುದಾಗಿದೆ.

    ಮದುವೆ ಆಗದೆ ವಂಚಿಸಿದ ಪ್ರಿಯಕರನ ವಿರುದ್ಧ 6 ತಿಂಗಳ ಗರ್ಭಿಣಿ ಹೋರಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts