More

    ಮಣಿಪುರದಲ್ಲಿ ಆಫ್ರಿಕನ್​​ ಹಂದಿ ಜ್ವರ ಪತ್ತೆ..! ಜನಪ್ರಿಯವಾಗಿರುವ ಹಂದಿ ಮಾಂಸ ಇದೀಗ 180-200 ರೂ. ಗೆ ಮಾರಾಟ

    ಮಣಿಪುರದ ಇಂಫಾಲ್​​​ನಲ್ಲಿ ಆಫ್ರಿಕನ್​ ಹಂದಿ ಜ್ವರ ಪತ್ತೆಯಾಗಿದೆ. ಆಫ್ರಿಕನ್ ಹಂದಿ ಜ್ವರ ತ್ತೆಯಾಗಿರುವುದಾಗಿ ಮಣಿಪುರದ ಪಶುವೈದ್ಯಕೀಯ ಇಲಾಖೆಯು ದೃಢಪಡಿಸಿದೆ. ಇಂಫಾಲ್​ನ ಪಶ್ಚಿಮ ಪ್ರದೇಶದಲ್ಲಿರುವ ಎರೋಸೆಂಬಾದಲ್ಲಿರುವ ಹಂದಿ ಸಾಕಣೆಯನ್ನು ಹಂದಿ ಜ್ಚರ ಹರಡುತ್ತಿರುವ ಝೋನ್​ ಎಂದು ಗುರುತಿಸಲಾಗಿದೆ.


    ಹಂದಿಯನ್ನು ಸಾಕಿದ ಸ್ಥಳದಿಂದ ವರ್ಗಾಯಿಸದಂತೆ ಕಟ್ಟೆಚ್ಚರ ವಹಿಸಲಾಗಿದೆ. ಇದೀಗ ಮಣಿಪುರದ ಇಂಫಾಲ್​ನಲ್ಲಿ ಸತ್ತ ಹಂದಿಗಳು, ಅಥವಾ ಸೋಂಕಿತ ಹಂದಿಗಳ ವಿಲೇವಾರಿ ಮೇಲೆಯೂ ಕಟ್ಟೆಚ್ಚರ ವಹಿಸಲಾಗಿದೆ. ಹಲವಾರು ಹಂದಿಗಳು ವೈರಸ್ ಸೋಂಕಿಗೆ ಒಳಗಾಗಿದ್ದು, ಮಣಿಪುರದಲ್ಲಿ ಹೆಚ್ಚು ಜನಪ್ರಿಯವಾಗಿರುವ ಹಂದಿ ಮಾಂಸವನ್ನು ಈಗ ಕೆಜಿಗೆ 180-200 ರೂ.ಗೆ ಮಾರಾಟ ಮಾಡಲಾಗುತ್ತಿದೆ.


    ಆಫ್ರಿಕನ್​​ ಹಂದಿ ಜ್ವರ ಎಂದರೇನು?
    ಸಾಮಾನ್ಯವಾಗಿ ಹಂದಿಗಳಲ್ಲಿ ಕಂಡುಬರುವ ಇನ್ಫ್ಲೂಯೆಂಜಾ ಎ (influenza A) ಎಂಬ ಹೆಸರಿನ ವೈರಸ್ ಮೂಲಕ ಮನುಷ್ಯರಿಗೆ ಹರಡುವ ಜ್ವರವನ್ನೇ ಹಂದಿಜ್ವರ ಅಥವಾ ಸ್ವೈನ್ ಫ್ಲೂ ಎಂದು ಕರೆಯುತ್ತಾರೆ. ಆಫ್ರಿಕನ್ ಹಂದಿ ಜ್ವರವನ್ನು ಪ್ರಾಣಿಗಳ ಆರೋಗ್ಯಕ್ಕಾಗಿ ವಿಶ್ವ ಸಂಸ್ಥೆ ವರ್ಗೀಕರಿಸಿದೆ, ಇದು ದೇಶೀಯ ಮತ್ತು ಕಾಡು ಹಂದಿಗಳ ಮೇಲೆ ಪರಿಣಾಮ ಬೀರುವ ಅತ್ಯಂತ ಸಾಂಕ್ರಾಮಿಕ ವೈರಲ್ ಕಾಯಿಲೆ ಎಂದು ಕೋಯಿಕ್ಕೋಡ್ ಜಿಲ್ಲೆಯ ಪೆರಂಬ್ರಾ ಬಳಿಯ ಜಾನಕಿಕ್ಕಾಡ್ ಪರಿಸರ ಪ್ರವಾಸೋದ್ಯಮ ಕೇಂದ್ರದಿಂದಲೂ ವರದಿ ಮಾಡಲಾಗಿತ್ತು.


    ಅಕ್ಟೋಬರ್ 13 ರಂದು ಮಣಿಪುರ ಸರ್ಕಾರದ ಪಶುವೈದ್ಯಕೀಯ ಮತ್ತು ಪಶುಸಂಗೋಪನಾ ಇಲಾಖೆಯ ನಿರ್ದೇಶನದ ಅನುಸಾರವಾಗಿ ಏಕಾಏಕಿ ಹಂದಿ ಜ್ವರ ಪತ್ತೆಯಾದ ಅಧಿಸೂಚನೆಯನ್ನ ಹೊರಡಿಸಿತ್ತು.


    ಇಂಫಾಲ್​ನ ಪಶ್ಚಿಮ ವಲಯದ ಡೆಪ್ಯೂಟಿ ಕಮಿಷನರ್​ ಈ ಬಗ್ಗೆ ಮಾಹಿತಿ ನೀಡಿದ್ದು, ಪಶು ವೈದ್ಯ ಸಂಗೋಪನಾ ಇಲಾಖೆಯ ಅಧಿಕಾರಿಗಳಾದ ಇಬೊಟೊಂಬಿ ಸಿಂಗ್​​ ಸೋಂಕಿನ ವಿರುದ್ಧ ಹೋರಾಟಡಲು ತುರ್ತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.


    ಪಶುವೈದ್ಯಕೀಯ ಮತ್ತು ಪಶುಸಂಗೋಪನಾ ಇಲಾಖೆಯೂ ಸೋಂಕು ಹರಡದಂತೆ ಹಂದಿಗಳು ವಾಸುಸುತ್ತಿರುವ ಪ್ರದೇಶದಲ್ಲಿ ನಿಗಾ ವಹಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts