More

    ಅಫ್ಘಾನಿಸ್ತಾನದಲ್ಲಿ ದಂಪತಿ ಒಟ್ಟಿಗೆ ಊಟಕ್ಕೆ ಪಾರ್ಕ್‌ಗೆ ಹೋಗೋ ಹಾಗಿಲ್ಲ!

    ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ದಿನಕ್ಕೊಂದು ಚಿತ್ರವಿಚಿತ್ರ ನಿಯಮಗಳನ್ನು ಜಾರಿಗೆ ತರುತ್ತಿದ್ದಾರೆ. ಅಫ್ಘಾನಿಸ್ತಾನದ ಹೆರಾತ್ ಪ್ರಾಂತ್ಯದಲ್ಲಿ ಉದ್ಯಾನಗಳು ಅಥವಾ ರೆಸ್ಟೋರೆಂಟ್‌ಗಳಿಗೆ ಕುಟುಂಬಗಳು ಮತ್ತು ಮಹಿಳೆಯರ ಪ್ರವೇಶವನ್ನು ತಾಲಿಬಾನ್ ನಿರ್ಬಂಧಿಸಿದೆ.

    ಇತ್ತೀಚೆಗೆ ಮಹಿಳೆಯೊಬ್ಬರು ತನ್ನ ಪತಿ ಜತೆ ರೆಸ್ಟೋರೆಂಟ್‌ಗೆ ಹೋಗಿದ್ದರು. ಅಲ್ಲಿಯೂ ಇಬ್ಬರನ್ನು ಪ್ರತ್ಯೇಕವಾಗಿ ಕೂರಿಸಿ ಊಟ ನೀಡಲಾಗಿತ್ತು. ಉದ್ಯಾನವನದಲ್ಲಿ ಮಹಿಳೆಯರಿಗೆ, ಪುರುಷರಿಗೆ ಪ್ರತ್ಯೇಕ ದಿನ ಮೀಸಲಿಡಲಾಗಿದೆ. ಗುರುವಾರ, ಶುಕ್ರವಾರ ಹಾಗೂ ಶನಿವಾರ ಮಹಿಳೆಯರು ಪಾರ್ಕ್‌ಗೆ ಬರಬಹುದು, ಪುರುಷರು ಉಳಿದ ದಿನ ಪಾರ್ಕ್‌ಗೆ ಬರಬಹುದು ಎನ್ನಲಾಗಿದೆ.

    ಇದನ್ನೂ ಓದಿ: ಏಪ್ರಿಲ್ 30ರಂದು ಕೊಲ್ಲುತ್ತೇನೆ; ಬುಲೆಟ್​ ಪ್ರೂಫ್​ ಕಾರ್​ ಕೊಂಡ ಬೆನ್ನಲ್ಲೇ ಸಲ್ಲು ಭಾಯ್​ಗೆ ಮತ್ತೊಮ್ಮೆ ಬೆದರಿಕೆ!

    ತಾಲಿಬಾನಿಗಳು ದಿನಕ್ಕೊಂದು ಚಿತ್ರವಿಚಿತ್ರ ನಿಯಮಗಳ ನಡುವೆ ಇದೀಗ ಮತ್ತೊಂದು ವಿಚಿತ್ರ ನಿಯಮ ಜಾರಿಗೆ ತಂದಿದ್ದು, ಮಹಿಳೆಯರು ತಮ್ಮ ಗಂಡಂದಿರ ಜತೆ ಫ್ಯಾಮಿಲಿ ಡಿನ್ನರ್ ಕೂಡ ಮಾಡುವಂತಿಲ್ಲ. ಆಫ್ಘನ್‌ನ ಹೆರಾತ್ ಪ್ರಾಂತ್ಯದಲ್ಲಿ ವಾಸಿಸುವವರಿಗೆ ತಾಲಿಬಾನ್ ಈ ನಿಯಮ ಹೇರಿದೆ.

    ತೆರೆದ ರೆಸ್ಟೋರೆಂಟ್‌ಗಳಿಗೆ ಮಾತ್ರ ಈ ನಿಯಮ ಅನ್ವಯವಾಗುತ್ತದೆ ಎನ್ನಲಾಗಿದೆ. ಲಿಂಗ ಪ್ರತ್ಯೇಕತೆಯ ಯೋಜನೆಯನ್ನು ಇಲ್ಲಿ ಜಾರಿಗೆ ತಂದಿದ್ದು, ಪುರುಷರು ಫ್ಯಾಮಿಲಿ ರೆಸ್ಟೋರೆಂಟ್‌ಗಳಲ್ಲಿಯೂ ಕುಟುಂಬ ಸದಸ್ಯರೊಂದಿಗೆ ತಿನ್ನಲು ಅನುಮತಿ ಇಲ್ಲ. ಪುರುಷರು ಹಾಗೂ ಮಹಿಳೆಯರು ಒಟ್ಟಿಗೇ ಉದ್ಯಾನವನಕ್ಕೂ ಹೋಗುವಂತಿಲ್ಲ. ಉದ್ಯಾನವನ ಹಾಗೂ ಹಸಿರು ಪ್ರದೇಶ ಹೊಂದಿರುವ ಯಾವುದೇ ರೆಸ್ಟೋರೆಂಟ್‌ಗೆ ಮಹಿಳೆಯರು ಭೇಟಿ ನೀಡುವಂತಿಲ್ಲ.

    ಇದನ್ನೂ ಓದಿ: ಹವಾಮಾನ ಮೂನ್ಸೂಚನೆ; ಏ.15ರಿಂದ ರಾಜ್ಯದಲ್ಲಿ ಮಳೆ ಸಾಧ್ಯತೆ
    ಸಾರ್ವಜನಿಕ ಸ್ಥಳಗಳಲ್ಲಿ ಲಿಂಗವನ್ನು ಮಿಶ್ರಣ ಮಾಡಲಾಗುತ್ತಿದೆ ಎಂದು ಧಾರ್ಮಿಕ ಮೌಲ್ವಿಗಳು ದೂರಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಲಿಂಗ ಮಿಶ್ರಣ ಅಥವಾ ಮಹಿಳೆಯರು ಹಿಜಾಬ್ ಧರಿಸದ ಕಾರಣ ನಿರ್ಬಂಧಗಳನ್ನು ತರಲಾಗಿದೆ ಎಂದು ಅಫ್ಘಾನ್ ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿಯವರೆಗೆ, ನಿಷೇಧವು ಹೇರತ್ ಪ್ರಾಂತ್ಯದಲ್ಲಿ ಹಸಿರು ಸ್ಥಳಗಳನ್ನು ಹೊಂದಿರುವ ರೆಸ್ಟೋರೆಂಟ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ಹೊರಾಂಗಣ ಊಟದ ನಿಷೇಧವು ಹೆರಾತ್‌ನಲ್ಲಿರುವ ಸಂಸ್ಥೆಗಳಿಗೆ ಮಾತ್ರ ಅನ್ವಯಿಸುತ್ತದೆ, ಅಂತಹ ಆವರಣಗಳು ಪುರುಷರಿಗೆ ತೆರೆದಿರುತ್ತವೆ.

    ಹೃದಯಾಘಾತದ ಅಪಾಯ; ಈ 5 ಅಂಶಗಳು ನಿಮ್ಮ ಹೃದಯವನ್ನು ಹಾನಿಗೊಳಿಸಬಹುದು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts