More

    ‘ಮಾಸ್ಟರ್​’ ಟಿಕೆಟ್​ಗಾಗಿ ಕ್ಯೂ ನಿಂತ ಜನ …

    ಚೆನ್ನೈ: ವಿಜಯ್​ ಅಭಿನಯದ ತಮಿಳು ಚಿತ್ರ ‘ಮಾಸ್ಟರ್​’ ಚಿತ್ರವು ಬಿಡುಗಡೆಗೆ ಸಜ್ಜಾಗಿದೆ. ಜನವರಿ 13ರ ಬುಧವಾರ ಈ ಚಿತ್ರ ಎಲ್ಲೆಡೆ ಬಿಡುಗಡೆಯಾಗಲಿದೆ. ಈ ಮಧ್ಯೆ, ಚಿತ್ರದ ಅಡ್ವಾನ್ಸ್​ ಬುಕ್ಕಿಂಗ್​ ಶುರುವಾಗಿದ್ದು, ಜನ ಟಿಕೆಟ್​ಗಾಗಿ ಮುಗಿಬೀಳುತ್ತಿದ್ದಾರೆ.

    ಇದನ್ನೂ ಓದಿ: ಚಿತ್ರ ವಿಮರ್ಶೆ| ತಾತ್ಸಾರ ತಾಕಲಾಟಗಳ ಬಂಧದೊಳಗೆ ಅಮೃತವಾಹಿನಿ…

    ಮುಂಚೆ ಚಿತ್ರ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡಿನ ಸರ್ಕಾರವು ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ಹಾಜರಾತಿಗೆ ಅನುಮತಿ ನೀಡಿತ್ತು. ಆದರೆ, ಕೇಂದ್ರ ಸರ್ಕಾರಕ್ಕೆ ಇದಕ್ಕೆ ಸಮ್ಮತಿ ಸೂಚಿಸದ ಹಿನ್ನೆಲೆಯಲ್ಲಿ ಶೇ. 50ರಷ್ಟು ಹಾಜರಾತಿಯಲ್ಲೇ ಬಿಡುಗಡೆ ಮಾಡುವುದಕ್ಕೆ ಸೂಚಿಸಿದೆ. ಚಿತ್ರಕ್ಕೆ ಶೇ. 100ರಷ್ಟು ಹಾಜರಾತಿಯನ್ನು ನಿರೀಕ್ಷಿಸಿದ್ದ ಚಿತ್ರತಂಡಕ್ಕೆ, ಇದರಿಂದ ಭಾರೀ ಆಘಾತವಾಗಿದೆ.

    ಶೇ. 100ರಷ್ಟು ಹಾಜರಾತಿಗೆ ಅನುಮತಿ ತಪ್ಪಿದರೂ, ತಮಿಳುನಾಡು ಸರ್ಕಾರವು ಇನ್ನೊಂದು ರೀತಿಯಲ್ಲಿ ರಿಯಾಯ್ತಿ ನೀಡಿದ್ದು, ಹೆಚ್ಚು ಪ್ರದರ್ಶನಗಳನ್ನು ನಡೆಸುವುದಕ್ಕೆ ಅನುಮತಿ ನೀಡಿದೆ. ಅದರಂತೆ ‘ಮಾಸ್ಟರ್​’ ಚಿತ್ರದ ಪ್ರದರ್ಶನಗಳ ಸಂಖ್ಯೆ ಹೆಚ್ಚಾಗಿದೆ. ಅಷ್ಟೇ ಅಲ್ಲ, ತಮಿಳುನಾಡಿನ ಅರ್ಧದಷ್ಟು ಚಿತ್ರಮಂದಿರಗಳು ‘ಮಾಸ್ಟರ್​’ ಚಿತ್ರವನ್ನು ಪ್ರದರ್ಶಿವುದಕ್ಕೆ ಮುಂದಾಗಿವೆ.

    ಅದಕ್ಕೆ ಸರಿಯಾಗಿ, ತಮಿಳುನಾಡಿನಲ್ಲಿ ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್​ ಶುರುವಾಗಿದ್ದು, ವಿಜಯ್​ ಅಭಿಮಾನಿಗಳು ಟಿಕೆಟ್​ ಪಡೆಯುವುದಕ್ಕೆ ನಾನಾ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಭಾನುವಾರವಂತೂ ಅಡ್ವಾನ್ಸ್ ಬುಕ್ಕಿಂಗ್​ ಶುರುವಾಗಿದ್ದು, ಕೆಲವೇ ಗಂಟೆಗಳ ಅಂತರದಲ್ಲಿ ಮೊದಲ ದಿನದ ಅಷ್ಟೂ ಪ್ರದರ್ಶನಗಳ ಟಿಕೆಟ್ ಮಾರಾಟವಾಗಿವೆ.

    ಇದನ್ನೂ ಓದಿ: ‘ಪುಷ್ಪ’ ಚಿತ್ರದ ನಿರ್ದೇಶಕ ಸುಕುಮಾರ್ ಜತೆ ಸಿನಿಮಾ ಮಾಡ್ತಾರಾ ದರ್ಶನ್​?

    ಇನ್ನು, ಟಿಕೆಟ್​ ಸಿಗುತ್ತಿರುವ ಸುದ್ದಿ ಕೇಳಿದ ಅಭಿಮಾನಿಗಳು ತಮಿಳುನಾಡಿನಾದ್ಯಂತ ದೊಡ್ಡ ಸಂಖ್ಯೆಯಲ್ಲಿ ಚಿತ್ರಮಂದಿರಗಳಿಗೆ ನುಗ್ಗಿದ್ದು, ಸಾಮಾಜಿಕ ಅಂತರ ಮತ್ತು ಮಾಸ್ಕ್​​ಗಳನ್ನು ಮರೆತು ಟಿಕೆಟ್​ ಪಡೆದುಕೊಂಡಿದ್ದಾರೆ. ಟಿಕೆಟ್​ ಸಿಗದವರಿಗೆ ನಿರಾಶೆಯಾಗಿದ್ದು, ಮೊದಲ ದಿನ ಟಿಕೆಟ್​ ಸಿಗದಿದ್ದರೂ, ಎರಡೆನಯ ದಿನದ ಟಿಕೆಟ್​ ಬುಕ್ಕಿಂಗ್ ಯಾವಾಗ ಪ್ರಾರಂಭವಾಗುತ್ತದೋ ಎಂದು ಕಾದು ಕುಳಿತಿದ್ದಾರೆ.

    ಈ ವರ್ಷ ಬಾಲಿವುಡ್​ನಲ್ಲಿ ಗಟ್ಟಿಮೇಳ ಗಟ್ಟಿಮೇಳ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts