More

    ಪ್ರಕೃತಿಗೆ ಪೂರಕವಾದ ಕೃತಿ ಪದ್ಧತಿ ಅಳವಡಿಸಿಕೊಳ್ಳಿ

    ರಾಯಚೂರು: ರೈತರು ನೈಸರ್ಗಿಕವಾಗಿ ಸಿಗುವ ಸಂಪನ್ಮೂಲಗಳನ್ನು ಬಳಸಿಕೊಂಡು ಪ್ರಕೃತಿಗೆ ಪೂರಕವಾದ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಇಂದಿನ ಅನಿವಾರ್ಯತೆಯಾಗಿದೆ ಎಂದು ಕೃಷಿ ವಿಜ್ಞಾನಗಳ ವಿವಿ ಕುಲಪತಿ ಡಾ.ಎಂ.ಹನುಮಂತಪ್ಪ ಹೇಳಿದರು.
    ಸ್ಥಳೀಯ ಸಾವಯವ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಸುಸ್ಥಿರ ಕೃಷಿಗಾಗಿ ಸಾವಯವ ಮತ್ತು ನೈಸರ್ಗಿಕ ಕೃಷಿ ಪದ್ಧತಿಗಳನ್ನು ಕುರಿತು ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿ, ಪಾರಂಪರಿಕ ಕೃಷಿಯೂ ಸಂಪದ್ಭರಿತ ಮತ್ತು ಪ್ರಕೃತಿಗೆ ಸಹಕಾರಿಯಾಗಿದೆ ಎಂದರು.
    ಹಿಂದಿನ ಕಾಲದ ಕೂಡು ಕುಟುಂಬ ಮರೆಯಾಗಿ ಗ್ರಾಮೀಣ ಸೊಗಡು ಕಣ್ಮರೆಯಾಗಿ ಆಧುನಿಕ ಕೃಷಿ ಪದ್ಧತಿ ಅಳವಡಿಕೆಯಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಸಾವಯವ ಮತ್ತು ನೈಸರ್ಗಿಕ ಪದ್ಧತಿ ಅಳವಡಿಕೆ ಇದಕ್ಕೆ ಪರಿಹಾರವಾಗಿದೆ ಎಂದು ಹೇಳಿದರು.
    ವಿವಿ ಆಡಳಿತಾಕಾರಿ ಡಾ.ಜಾಗೃತಿ ದೇಶಮಾನ್ಯೆ ಮಾತನಾಡಿ, ಸಾವಯವ ಕೃಷಿಗೆ ಪಶು ಸಂಪತ್ತು ಅವಶ್ಯವಾಗಿದೆ. ಪಶು ಸಂಗೋಪನೆಯಿಂದ ಕೃಷಿ ಉತ್ಪನ್ನಗಳ ಹೆಚ್ಚಳದೊಂದಿಗೆ ವರ್ಷವೀಡಿ ಕೆಲಸ ಸಿಕ್ಕು ಆದಾಯ ಹೆಚ್ಚಳವಾಗಲಿದೆ ಎಂದು ತಿಳಿಸಿದರು.
    ಅಧ್ಯಕ್ಷತೆ ವಹಿಸಿದ್ದ ವಿವಿ ಹಣಕಾಸು ನಿಯಂತ್ರಣಾಕಾರಿ ಡಾ.ಪ್ರಮೋದ ಕಟ್ಟಿ ಮಾತನಾಡಿ, ರೈತರು ಸಾವಯವ ಪದ್ಧತಿಯನ್ನು ಅಳವಡಿಸಿಕೊಂಡಾಗ ಹೆಚ್ಚಿನ ಲಾಭ ಪಡೆದುಕೊಳ್ಳಬಹುದಾಗಿದೆ. ವಿವಿಯಿಂದ ತರಬೇತಿ ಹಾಗೂ ತಾಂತ್ರಿಕ ಮಾಹಿತಿಯನ್ನು ನೀಡಲಾಗುತ್ತಿದ್ದು, ಸದುಪಯೋಗ ಪಡೆದುಕೊಳ್ಳಬೇಕು ಎಂದರು.
    ಕಾರ್ಯಕ್ರಮದಲ್ಲಿ ಸಾವಯವ ಕೃಷಿ ಸಂಶೋಧನಾ ಸಂಸ್ಥೆ ಮುಖ್ಯಸ್ಥ ಡಾ.ಎಂ.ಎ.ಬಸವಣ್ಣೆಪ್ಪ, ಪ್ರಾಧ್ಯಾಪಕರಾದ ಡಾ.ಬಸವರಾಜ, ಡಾ.ಹನುಮಂತಪ್ಪ, ಶ್ರೀಹರಿ, ಡಾ.ಆನಂದ ಕಾಂಬಳೆ, ವೆಂಕಣ್ಣ ಗೌಡ ಹಾಗೂ ಜಿಲ್ಲೆಯ ರೈತರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts