More

    ಶೀಘ್ರದಲ್ಲಿ ಕಳಸಕ್ಕೆ ತಾಲೂಕು ಆಡಳಿತಾಧಿಕಾರಿ ನೇಮಕ,ಸಂಸದೆ ಶೋಭಾ ಕರಂದ್ಲಾಜೆ ಭರವಸೆ

    ಕಳಸ: ಕಳಸ ತಾಲೂಕು ಕೇಂದ್ರದ ಗೆಜೆಟ್ ನೋಟಿಫಿಕೇಷನ್ ಕೂಡಲೇ ಮಾಡಿಕೊಡುವುದಾಗಿ ಸಂಸದೆ ಶೋಭಾ ಕರಂದ್ಲಾಜೆ ಭರವಸೆ ನೀಡಿದರು. ಗ್ರಾಪಂ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಕರೊನಾ ತಡೆ ಮುಂಜಾಗ್ರತಾ ಸಭೆಯಲ್ಲಿ ಸದಸ್ಯ ಸಂತೋಷ್ ಹಿನಾರಿ ವಿಷಯ ಪ್ರಸ್ತಾಪಿಸಿದರು.

    ಕಳಸ ತಾಲೂಕು ಕೇಂದ್ರವೆಂದು ಸರ್ಕಾರ ಘೊಷಣೆ ಮಾಡಿದೆಯಾದರೂ ಗೆಜೆಟ್ ನೋಟಿಫಿಕೇಷನ್ ಆಗದಿರುವುದರಿಂದ ತಾಲೂಕು ಆಡಳಿತಾಧಿಕಾರಿ ನೇಮಕವಾಗಿಲ್ಲ. ಇದರಿಂದ ಜನ ಕೆಲಸಕ್ಕೆ ಮೂಡಿಗೆರೆಗೆ ಹೋಗುವುದು ತಪ್ಪಲಿಲ್ಲ. ಇನ್ನು ಸರ್ಕಾರಿ ಆಸ್ಪತ್ರೆ ಇದ್ದರೂ ಇಲ್ಲಿ ಸರಿಯಾದ ವೈದ್ಯರಿಲ್ಲ. ಇಲ್ಲಿ ಎರಡು ವರ್ಷಗಳಿಂದ ಹೆರಿಗೆ ಮಾಡಿಸಿಲ್ಲ. ಕೂಡಲೇ ವೈದ್ಯರ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.

    ನಂತರ ಶೋಭಾ ಕರಂದ್ಲಾಜೆ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಕೂಡಲೇ ಕಳಸ ತಾಲೂಕು ಕೇಂದ್ರದ ಗೆಜೆಟ್ ನೋಟಿಫಿಕೇಷನ್ ಮಾಡಿ ಆಡಳಿತಾಧಿಕಾರಿ ನೇಮಕ ಮಾಡುವಂತೆ ಮನವಿ ಮಾಡಿದರು.

    ಹಿರಿಯ ಮುಖಂಡ ವೆಂಕಟಸುಬ್ಬಯ್ಯ ಮಾತನಾಡಿ, ಕಳಸ ಇನಾಂ ಭೂಮಿ ಸಮಸ್ಯೆ ಬಗ್ಗೆ ಸರ್ಕಾರ ಸಂತ್ರಸ್ತರ ಪರವಾಗಿ ನಾಯಾಲಯಕ್ಕೆ ಅಫಿಡವಿಟ್ ಸಲ್ಲಿಸುವುದಾಗಿ ಹೇಳಿತ್ತು. ಆದರೆ ಈವರೆಗೂ ಅಫಿಡವಿಟ್ ಸಲ್ಲಿಕೆಯಾಗಿಲ್ಲ ಎಂದು ತಿಳಿಸಿದರು.

    ಶಾಸಕ ಎಂ.ಪಿ.ಕುಮಾರಸ್ವಾಮಿ, ತಹಸೀಲ್ದಾರ್ ರಮೇಶ್, ತಾಪಂ ಸದಸ್ಯ ಮಹಮ್ಮದ್ ರಫೀಕ್, ಗ್ರಾಪಂ ಅಧ್ಯಕ್ಷೆ ರತಿ ರವೀಂದ್ರ, ಉಪಾಧ್ಯಕ್ಷ ಪ್ರಕಾಶ್​ಕುಮಾರ್, ಸದಸ್ಯ ರಂಗನಾಥ್, ತಾಪಂ ಮಾಜಿ ಅಧ್ಯಕ್ಷ ಎಂ.ಎ.ಶೇಷಗಿರಿ, ಬಿಜೆಪಿ ಹೋಬಳಿ ಅಧ್ಯಕ್ಷ ಗಿರೀಶ್ ಹೆಮ್ಮಕ್ಕಿ, ಡಾ. ಪ್ರೇಮ್ುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts