More

    ಹೊಂದಾಣಿಕೆ ಲೋಕಸಭೆ ಚುನಾವಣೆಗೆ ಸೀಮಿತ

    ಚಿಕ್ಕಮಗಳೂರು: ಹೊಂದಾಣಿಕೆ ಆದ ಕೂಡಲೆ ಇನ್ನೊಂದು ಪಕ್ಷಕ್ಕೆ ಸಂಪೂರ್ಣ ಒಪ್ಪಿಸಿಕೊಂಡಂತೆ ಅಲ್ಲ. ಈಗಿನ ಹೊಂದಾಣಿಕೆ ಲೋಕಸಭಾ ಚುನಾವಣೆಗೆ ಸೀಮಿತವಾಗಿದೆ. ತದನಂತರ ಮುಂದಿನ ಚುನಾವಣೆಗಳಿಗೆ ಯಾವ ರೀತಿ ಹೊಂದಾಣಿಕೆ ಆಗಬೇಕು ಎಂಬುದನ್ನು ಪಕ್ಷ ನಿರ್ಧರಿಸಲಿದೆ ಎಂದು ಜೆಡಿಎಸ್ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ ಹೇಳಿದರು.

    ನಗರದ ಜೆಡಿಎಸ್ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಏಳು ತಾಲೂಕುಗಳ ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಮಾತನಾಡಿದರು.
    ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿವೆ. ಹೊಂದಾಣಿಕೆ ಎಂದ ಮೇಲೆ ನಮ್ಮಿಂದ ಕಾರ್ಯಕರ್ತರು ಬಹಳ ನಿರೀಕ್ಷೆ ಮಾಡುತ್ತಾರೆ. ತಳಮಟ್ಟದಲ್ಲೂ ಸರಿಯಾದ ರೀತಿ ಆಗಬೇಕು. ಹೀಗಾಗಿಯೇ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಇಂದಿನ ಸಭೆಯಲ್ಲಿ ಕ್ರೋಡೀಕೃತವಾದ ಪದಾಧಿಕಾರಿಗಳ ಅಭಿಪ್ರಾಯವನ್ನು ಬೆಂಗಳೂರಲ್ಲಿ ನಡೆಯಲಿರುವ ರಾಜ್ಯ ಕೋರ್ ಕಮಿಟಿ ಸಭೆಗೆ ತಿಳಿಸುತ್ತೇನೆ ಎಂದು ತಿಳಿಸಿದರು.
    ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲಾ ಒಂದು ಹಗರಣಗಳು ನಡೆಯುತ್ತಲೇ ಇವೆ. ಅಭಿವೃದ್ಧಿ ಮರೆತಿರುವ ಸರ್ಕಾರ ಲಂಚಾವತಾರದಲ್ಲಿ ಮುಳುಗಿದೆ. ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಬದಲಿಗೆ ಲಂಚಾವತಾರ 60 ಪರ್ಸೆಂಟ್‌ಗೆ ಮುಟ್ಟಿದೆ ಎಂದು ಆರೋಪಿಸಿದರು.
    ಸದ್ಯಕ್ಕೆ ಪಕ್ಷ ಸಂಘಟನೆಯೇ ನಮ್ಮ ಮುಖ್ಯ ಉದ್ದೇಶ. ಜಿಲ್ಲೆಯ 7 ತಾಲೂಕಲ್ಲಿ ಪಕ್ಷ ಪ್ರಬಲವಾಗಿದೆ. ಎಲ್ಲೋ ಒಂದು ಕಡೆ ಪಕ್ಷಕ್ಕೆ ನಾಯಕತ್ವದ ಕೊರತೆ ಕಾಡುತ್ತಿದೆ. ಹೀಗಾಗಿ ಪಕ್ಷದ ನಾಯಕತ್ವಕ್ಕೆ ಚಾಲನೆ ಕೊಡಬೇಕಿದೆ. ಮೂಡಿಗೆರೆ, ಶೃಂಗೇರಿ, ಕಡೂರು ಸೇರಿ ಎಲ್ಲ ತಾಲೂಕಲ್ಲಿ ಪಕ್ಷದ ಮತದಾರ ಗಟ್ಟಿಯಾಗಿ ನೆಲೆಯೂರಿದ್ದಾನೆ ಎಂದು ಹೇಳಿದರು.
    ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ. ಜಿಲ್ಲಾಮಟ್ಟದಿಂದ ಬೂತ್ ಮಟ್ಟದವರೆಗೆ ಪಕ್ಷ ಸಂಘಟನೆ ಮಾಡಲಿದ್ದೇವೆ. ಗ್ಯಾರಂಟಿ ಯೋಜನೆಗಳನ್ನು ಯಾವ ಸರ್ಕಾರ ಬಂದರೂ ಕೊಡಲೇಬೇಕು. ಈ ಬಗ್ಗೆ ನಮ್ಮ ಟೀಕೆಯಿಲ್ಲ. ಒಂದೆಡೆ ಬರಗಾಲ, ಇನ್ನೊಂದೆಡೆ ಸರ್ಕಾರ ಅಭಿವೃದ್ಧಿಗೆ ಒತ್ತು ಕೊಡುತ್ತಿಲ್ಲ. ಜನರ ಕೈಗೆ ಕೆಲಸವಿಲ್ಲ. ಈ ಸಂದರ್ಭ ಜನರ ವಿರುದ್ಧವಾದ ಯೋಜನೆಗಳು, ದಬ್ಬಾಳಿಕೆ ಹಾಗೂ ಸರಕಾರದ ವೈಫಲ್ಯಗಳ ವಿರುದ್ಧ ಹೋರಾಟ ಮಾಡಲು ಪಕ್ಷ ನಿರ್ಧರಿಸಿದೆ ಎಂದರು.
    ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್‌ಕುಮಾರ್, ಮುಖಂಡರಾದ ಮಂಜಪ್ಪ, ಜಿ.ಎಸ್.ಚಂದ್ರಪ್ಪ, ದೇವಿಪ್ರಸಾದ್, ಶ್ರೀದೇವಿ, ಜಗದೀಶ್, ಸಿ.ಕೆ.ಮೂರ್ತಿ, ಗಂಗಾಧರನಾಯ್ಕ, ಚಂದ್ರು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts