More

    ‘ಎ’ ಬಿಡುಗಡೆಯಾಗಿ 25ನೇ ವರ್ಷಕ್ಕೆ ಅದೇ ನಿರ್ಮಾಪಕರ ‘ಟೆರರ್​’ ಶುರು

    ಬೆಂಗಳೂರು: ‘ಟೆರರ್​’ ಎಂಬ ಚಿತ್ರದಲ್ಲಿ ಆದಿತ್ಯ ಗ್ಯಾಂಗ್​ಸ್ಟರ್​ ಆಗಿ ನಟಿಸುತ್ತಿದ್ದಾರೆ ಎಂಬುದು ಹೊಸ ವಿಷಯವನೇಲ್ಲ. ಕಳೆದ ವರ್ಷದ ಕೊನೆಗೇ ಈ ಚಿತ್ರದ ಟೀಸರ್​ ಬಿಡಗುಡೆಯಾಗಿತ್ತು. ಆದರೆ, ಚಿತ್ರ ಪ್ರಾರಂಭವಾಗಿರಲಿಲ್ಲ. ಮೊನ್ನೆ ಜನವರಿ 25ರಂದು ಗವಿಪುರದಲ್ಲಿರುವ ಶ್ರೀಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ‘ಟೆರರ್’ ಚಿತ್ರಕ್ಕೆ ಚಾಲನೆ ನೀಡಲಾಗಿದೆ.

    ಇದನ್ನೂ ಓದಿ: ಮತ್ತೊಮ್ಮೆ ಬರ್ತಿದ್ದಾನಾ ‘ಮುನ್ನಾ ಭಾಯ್​’? ಹೊಸ ಪೋಸ್ಟರ್​ ಬಿಡುಗಡೆ

    ಜನವರಿ 25ರಂದೇ ಚಿತ್ರದ ಮುಹೂರ್ತವಾಗಿದ್ದಕ್ಕೂ ಕಾರಣವಿದೆ. ‘ಟೆರರ್​’ ಚಿತ್ರದ ನಿರ್ಮಾಪಕ ಸಿಲ್ಕ್​ ಮಂಜು ನಿರ್ಮಾಣದ ಮೊದಲ ಚಿತ್ರ ‘ಎ’, 25 ವರ್ಷಗಳ ಹಿಂದೆ ಅದೇ ದಿನ ಬಿಡುಗಡೆಯಾಗಿತ್ತು. ಆ ಸಂಭ್ರಮದಲ್ಲಿ ‘ಟೆರರ್’ ಚಿತ್ರ ಶುರು ಮಾಡಿದ್ದಾರೆ ಮಂಜು. ಈ ಚಿತ್ರವನ್ನು ರಂಜನ್​ ನಿರ್ದೇಶನ ಮಾಡುತ್ತಿದ್ದಾರೆ.

    ಈ ಚಿತ್ರದ ಕುರಿತು ಮಾತನಾಡುವ ರಂಜನ್​ ಶಿವರಾಮ ಗೌಡ, ‘ಇದು ನನ್ನ ನಿರ್ದೇಶನದ ಮೊದಲ ಚಿತ್ರ. ಹೊಸ ಮಾಫಿಯಾ ಸುತ್ತ ಕಥೆ ಇದೆ. ಆದಿತ್ಯ ಅವರಿಗೆ ಕಥೆ ಇಷ್ಟವಾಯಿತು. ಗ್ಯಾಂಗ್ ಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೆಚ್ಚಿನ ಭಾಗದ ಚಿತ್ರೀಕರಣ ಬೆಂಗಳೂರಿನಲ್ಲೇ ನಡೆಯುತ್ತದೆ’ ಎನ್ನುತ್ತಾರೆ.

    ಆದಿತ್ಯಗೆ ನಿರ್ದೇಶಕರು ನಟ ಧರ್ಮ ಅವರ ಮೂಲಕ ಪರಿಚಯವಾಯಿತಂತೆ. ‘ರಂಜನ್​ ಹೇಳಿದ ಕಥೆ ಇಷ್ಟವಾಯಿತು. ಈ ಚಿತ್ರದಲ್ಲಿ ಎರಡು ಶೇಡ್​ಗಳಲ್ಲಿರುತ್ತದೆ. ಪಾತ್ರ ಬಹಳ ಸ್ಟೈಲಿಶ್ ಆಗಿರುತ್ತದೆ. ಯಂಗ್ ಗ್ಯಾಂಗ್​ಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ’ ಎಂದರು ಆದಿತ್ಯ.

    ಇದನ್ನೂ ಓದಿ: ಪ್ಯಾನ್​ ಇಂಡಿಯಾ ಚಿತ್ರದಲ್ಲಿ ‘ಡಾಲಿ’ ಧನಂಜಯ್; ಹೆಸರು ರಿವೀಲ್​ ಆಯ್ತು!

    ‘ಟೆರರ್​’ ಚಿತ್ರಕ್ಕೆ ಹರ್ಷವರ್ಧನ್ ರಾಜ್ ಛಾಯಾಗ್ರಹಣ ಮತ್ತು ಕಾರ್ತಿಕ್​ ಶರ್ಮ ಸಂಗೀತವಿದ್ದು, ಮಿಕ್ಕಂತೆ ಧರ್ಮ, ಪ್ರಮೋದ್ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಪ್ಯಾನ್​ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಲಿದೆ.

    ಕಾಂತಾರದ ಬುಲ್ಲಾಗೆ ಶಾಕ್​! ‘ಶಬಾಷ್​ ಬಡ್ಡಿ ಮಗನೇ’ ನಿರ್ಮಾಪಕ ಅಂದರ್​…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts