More

    ಆದಿತ್ಯ ಈಗ ‘ಟೆರರ್​’; ಪ್ಯಾನ್​ ಇಂಡಿಯಾ ಚಿತ್ರದಲ್ಲಿ ಗ್ಯಾಂಗ್​ಸ್ಟರ್​ ಪಾತ್ರ

    ಬೆಂಗಳೂರು: ಆದಿತ್ಯ ಇದುವರೆಗೂ ಹಲವು ಚಿತ್ರಗಳಲ್ಲಿ ಮತ್ತು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಅವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟಿರುವುದು ರೌಡಿ ಮತ್ತು ಗ್ಯಾಂಗ್​ಸ್ಟರ್​ ಪಾತ್ರಗಳು. ಈಗ ಅವರು ಬಹಳ ದಿನಗಳ ನಂತರ ಮತ್ತೊಮ್ಮೆ ಅಂಡರ್​ವರ್ಲ್ಡ್​ ಕುರಿತಾದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹೆಸರು ‘ಟೆರರ್​’.

    ಇದನ್ನೂ ಓದಿ: ರಂಗಭೂಮಿ, ಸಿನಿಮಾ, ನಟನೆ ಬಗ್ಗೆ ಅದ್ಭುತ ಚರ್ಚೆ … ನವಾಜುದ್ದೀನ್​ ಮನೆಯಲ್ಲಿ ರಿಷಭ್​

    ‘ಟೆರರ್​’ ಚಿತ್ರವು ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು ಕನ್ನಡವಲ್ಲದೆ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲೂ ಬಿಡುಗಡೆಯಾಗುತ್ತಿದೆ. ಚಿತ್ರದ ಮೊದಲ ಲುಕ್​ ಬಿಡುಗಡೆಯಾಗಿದ್ದು, ಚಿತ್ರ ಸದ್ಯದಲ್ಲೇ ಪ್ರಾರಂಭವಾಗಲಿದೆ.

    ಸೋಷಿಯಲ್​ ಮೀಡಿಯಾದಲ್ಲಿ ಚಿತ್ರದ ಫಸ್ಟ್​ ಲುಕ್​ ಹಂಚಿಕೊಂಡಿರುವ ಆದಿತ್ಯ, ‘ಇದು ನನ್ನ ಮಹಾತ್ವಾಕಾಂಕ್ಷೆಯ ಚಿತ್ರವಾಗಿದ್ದು, ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಡಿ.14ರಂದು ಚಿತ್ರದ ಟೀಸರ್​ ಬಿಡುಗಡೆಯಾಗಲಿದೆ’ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ಮತ್ತೆ ‘ರೋಲೆಕ್ಸ್​’ ಆಗ್ತಾರಾ ಸೂರ್ಯ? ಏನಂತಾರೆ ನಿರ್ದೇಶಕ ಲೋಕೇಶ್​ ಕನಕರಾಜ್​

    ‘ಟೆರರ್​’ ಚಿತ್ರವನ್ನು ‘ಎ’ ಮುಂತಾದ ಚಿತ್ರಗಳನ್ನು ನಿರ್ಮಿಸಿರುವ ಸಿಲ್ಕ್​ ಮಂಜು ನಿರ್ಮಿಸುತ್ತಿದ್ದು, ರಂಜನ್​ ಶಿವರಾಂ ಗೌಡ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಕಾರ್ತಿಕ್​ ಶರ್ಮ ಸಂಗೀತ ಸಂಯೋಜಿಸುತ್ತಿದ್ದಾರೆ. ಈ ಚಿತ್ರದ ಇನ್ನಷ್ಟು ವಿವರಗಳು ಸದ್ಯದಲ್ಲೇ ಹೊರಬೀಳಬೇಕಿದೆ.

    ದಿ ಟಾಪ್​ ಟೆನ್ಸ್​ ಜಗತ್ತಿನ ಸಾರ್ವಕಾಲಿಕ ಅತ್ಯುತ್ತಮ ನಿರ್ದೇಶಕರ ಪಟ್ಟಿಯಲ್ಲಿ ಉಪೇಂದ್ರ … ಎಷ್ಟನೇ ಸ್ಥಾನ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts