More

    ಅರ್ಜುನ ಪ್ರಶಸ್ತಿಗೆ ಕರ್ನಾಟಕದ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಹೆಸರು ಶಿಫಾರಸು

    ಬೆಂಗಳೂರು: ಭಾರತದ ವೃತ್ತಿಪರ ಗಾಲ್ಫ್ ಪಟು ಆಗಿರುವ ಕರ್ನಾಟಕ ಅದಿತಿ ಅಶೋಕ್ ಹೆಸರನ್ನು ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಒಳಗೊಂಡ 12 ಸದಸ್ಯರ ಪ್ರಶಸ್ತಿ ಆಯ್ಕೆ ಸಮಿತಿ ಮಂಗಳವಾರ ನಡೆದ ಸಭೆಯಲ್ಲಿ ಶಿಫಾರಸು ಪಟ್ಟಿಯನ್ನು ಅಂತಿಮಗೊಳಿಸಿದೆ. 5 ಖೇಲ್‌ರತ್ನ ಹಾಗೂ 29 ಮಂದಿ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದೆ. ಅದಿತಿ ಅಶೋಕ್, ಅರ್ಜುನ ಪ್ರಶಸ್ತಿ ಪಟ್ಟಿಯಲ್ಲಿರುವ ಕರ್ನಾಟಕದ ಏಕೈಕ ಕ್ರೀಡಾಪಟುವಾಗಿದ್ದಾರೆ. ಕ್ರಿಕೆಟಿಗ ರೋಹಿತ್ ಶರ್ಮ, ಕುಸ್ತಿ ಪಟು ವಿನೇಶ್ ಪೋಗಟ್, ಟೇಬಲ್ ಟೆನಿಸ್ ಆಟಗಾರ್ತಿ ಮನಿಕಾ ಬಾತ್ರಾ, ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್, ಪ್ಯಾರಾಲಂಪಿಕ್ ಮರಿಯಪ್ಪನ್ ತಂಗವೇಲು ಹೆಸರುಗಳನ್ನು ಖೇಲ್ ರತ್ನಗೆ ಶಿಫಾರಸು ಮಾಡಲಾಗಿದೆ.

    ಇದನ್ನೂ ಓದಿ: ಇನ್ನು ಬಿಕಿನಿ ಚಿತ್ರ ಪೋಸ್ಟ್​ ಮಾಡುವುದಿಲ್ಲ ಎಂದು ಟೆನಿಸ್​ ತಾರೆ ಬೌಚಾರ್ಡ್​ ಹೇಳಿದ್ಯಾಕೆ?

    ಅರ್ಜುನ ಪ್ರಶಸ್ತಿಗೆ ಶಿಫಾರಸುಗೊಂಡವರು:

    ಇಶಾಂತ್ ಶರ್ಮ (ಕ್ರಿಕೆಟ್), ಅತಾನು ದಾಸ್ (ಆರ್ಚರಿ), ದೀಪಕ್ ಹೂಡಾ (ಕಬಡ್ಡಿ), ದೀಪಿಕಾ ಠಾಕೂರ್ (ಹಾಕಿ), ದಿವಿಜ್ ಶರಣ್ (ಟೆನಿಸ್), ಮಿರಾಬಾಯಿ ಛಾನು (ವೇಟ್‌ಲಿಫ್ಟಿಂಗ್), ಸಾಕ್ಷಿ ಮಲಿಕ್ (ಕುಸ್ತಿ), ಅಕಾಶ್‌ದೀಪ್ ಸಿಂಗ್ (ಹಾಕಿ), ಲವ್ಲಿನಾ ಬೊರ್ಗೊಹೈನ್ (ಬಾಕ್ಸಿಂಗ್), ಮನು ಭಾಕರ್ (ಶೂಟಿಂಗ್), ಸೌರಭ್ ಚೌಧರಿ (ಶೂಟಿಂಗ್), ಮನೀಷ್ ಕೌಶಿಕ್ (ಬಾಕ್ಸಿಂಗ್), ಸಂದೇಶ್ ಜಿನ್‌ಗಾನ್ (ಫುಟ್‌ಬಾಲ್), ದತ್ತು ಭೋಕನಲ್ (ರೋಯಿಂಗ್), ರಾಹುಲ್ ಅವಾರೆ( ಕುಸ್ತಿ), ದ್ಯುತಿ ಚಂದ್ (ಅಥ್ಲೆಟಿಕ್ಸ್), ದೀಪ್ತಿ ಶರ್ಮ (ಕ್ರಿಕೆಟ್), ಶಿವ ಕೇಶವನ್ (ವಿಂಟರ್ ಸ್ಪೋರ್ಟ್ಸ್), ಮಧುರಿಕೆ ಪಟ್ಕರ್ (ಟೇಬಲ್ ಟೆನಿಸ್), ಮನೀಷ್ ನರ್ವಾಲ್ (ಪ್ಯಾರಾ ಶೂಟರ್),ಸಂದೀಪ್ ಚೌಧರಿ (ಪ್ಯಾರಾಥ್ಲೀಟ್), ಸೂಯಾಶ್ ಜಾಧವ್ (ಪ್ಯಾರಾಸ್ವಿಮ್ಮರ್), ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್ (ಬ್ಯಾಡ್ಮಿಂಟನ್), ವಿಶೇಷ್ ಭಾರ್ಗುವಂಶಿ (ಬಾಸ್ಕೆಟ್‌ಬಾಲ್), ಅಜಯ್ ಸಾವಂತ್ (ಟೆಂಟ್ ಪೆಗ್ಗಿಂಗ್), ಅದಿತಿ ಅಶೋಕ್ (ಗಾಲ್ಫ್), ಕಾಲೆ ಸಾರಿಕಾ (ಖೋ ಖೋ), ದಿವ್ಯಾ ಕಾಕ್ರನ್ (ರೆಸ್ಲಿಂಗ್).

    VIDEO: ರಾಷ್ಟ್ರೀಯ ತರಬೇತಿ ಶಿಬಿರದಿಂದ ರೆಸ್ಲರ್ ವಿನೇಶ್ ಪೋಗಟ್ ಹೊರಗುಳಿದಿದ್ಯಾಕೆ..?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts