VIDEO: ರಾಷ್ಟ್ರೀಯ ತರಬೇತಿ ಶಿಬಿರದಿಂದ ರೆಸ್ಲರ್ ವಿನೇಶ್ ಪೋಗಟ್ ಹೊರಗುಳಿದಿದ್ಯಾಕೆ..?

ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿರುವ ಭಾರತದ ಏಕೈಕ ಮಹಿಳಾ ರೆಸ್ಲರ್ ವಿನೇಶ್ ಪೋಗಟ್, ಕರೊನಾ ವೈರಸ್ ಭೀತಿಯಿಂದಾಗಿ ಸೆಪ್ಟೆಂಬರ್ 1 ರಿಂದ ಲಖನೌದಲ್ಲಿ ಆರಂಭಗೊಳ್ಳಲಿರುವ ರಾಷ್ಟ್ರೀಯ ಶಿಬಿರದಿಂದ ಹೊರಗುಳಿದಿದ್ದಾರೆ. ವಿನೇಶ್ ಅವರ ತೀರ್ಮಾನದಿಂದಾಗಿ ರಾಷ್ಟ್ರೀಯ ಫೆಡರೇಷನ್‌ಗೆ ಇರುಸುಮುರುಸು ಉಂಟಾಗಿದೆ. ಸೆಪ್ಟೆಂಬರ್ 1 ರಿಂದ ಮಹಿಳೆಯರಿಗೆ ಲಖನೌದಲ್ಲಿ ಹಾಗೂ ಸೊನೆಪತ್‌ನಲ್ಲಿ ಪುರುಷರಿಗೆ ಶಿಬಿರ ಆರಂಭಗೊಳ್ಳಲಿದೆ. ಲಖನೌಗೆ ಪ್ರಯಾಣಿಸಲು ಸೂಕ್ತವಾದ ಸಮಯವಲ್ಲ. ಹೀಗಾಗಿ ತರಬೇತಿ ಶಿಬಿರದಿಂದ ಹೊರಗುಳಿಯಲಿದ್ದೇನೆ ಎಂದು ವಿನೇಶ್ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಧೋನಿಗೆ ಭಾರತರತ್ನ ನೀಡಬೇಕೆಂದ … Continue reading VIDEO: ರಾಷ್ಟ್ರೀಯ ತರಬೇತಿ ಶಿಬಿರದಿಂದ ರೆಸ್ಲರ್ ವಿನೇಶ್ ಪೋಗಟ್ ಹೊರಗುಳಿದಿದ್ಯಾಕೆ..?