More

    ದಾನದಿಂದ ಭಗವಂತನ ಅನುಗ್ರಹ

    ಉಡುಪಿ: ಗಳಿಸಿದ ಸಂಪತ್ತಿನಲ್ಲಿ ಒಂದು ಭಾಗವನ್ನು ದಾನ ಮಾಡುವ ಮೂಲಕ ಭಗವಂತನ ಅನುಗ್ರಹಕ್ಕೆ ಪಾತ್ರರಾಗಬಹುದು ಎಂದು ಪರ್ಯಾಯ ಅದಮಾರು ಮಠ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಹೇಳಿದರು.
    ಕೃಷ್ಣ ಮಠ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ ಭಾನುವಾರ ಪರ್ಯಾಯ ಅದಮಾರು ಮಠದ ಆಶ್ರಯದಲ್ಲಿ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ವಿನಮ್ರ ಧನಸಹಾಯ ಸಮಾರಂಭದಲ್ಲಿ ಆಶಿರ್ವಚನ ನೀಡಿದರು.
    ಧಾನ, ಧರ್ಮದ ಚಿಂತನೆಯನ್ನು ಜೀವನದಲ್ಲಿ ಅಳವಡಿಸಿಕೊಂಡು, ಸಹಾಯ ಮಾಡಿದ ಸಂಸ್ಥೆಗೆ ಕೃತಜ್ಞರಾಗಿ ಮುಂದೆ ತಾವು ಗಳಿಸಿದ ಸಂಪತ್ತಿನಲ್ಲಿ ಒಂದು ಭಾಗವನ್ನು ದಾನ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಶ್ರೀಗಳು ಸಲಹೆ ನೀಡಿದರು.

    ಬೆಳಗ್ಗೆ ಉದ್ಘಾಟನೆ ಕಾರ್ಯಕ್ರಮವನ್ನು ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ನೆರವೇರಿಸಿ, ವಿದ್ಯಾರ್ಥಿ ಜೀವನ ಎಂಬುದು ಅಮೂಲ್ಯ ಕ್ಷಣಗಳು. ಇದನ್ನು ವ್ಯರ್ಥ ಮಾಡಿಕೊಳ್ಳದೆ ಒಳ್ಳೆಯ ಚಿಂತನೆಗಳಿಂದ ಸದುಪಯೋಗಪಡಿಸಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ಆಶಿರ್ವಚನ ನೀಡಿದರು.
    ಲೇಖಕಿ ನೇಮಿಚಂದ್ರ ಉಪಸ್ಥಿತರಿದ್ದರು. ಸಹಾಯಧನ, ಲ್ಯಾಪ್‌ಟಾಪ್, ಮನೆಗೆ ವಿದ್ಯುದ್ದೀಪ, ಸೌರಶಕ್ತಿ ದೀಪ ಸೇರಿದಂತೆ ಕಾರ್ಯಕ್ರಮದಲ್ಲಿ 1080 ವಿದ್ಯಾರ್ಥಿಗಳಿಗೆ 70 ಲಕ್ಷ ರೂ. ವಿದ್ಯಾರ್ಥಿವೇತನ ವಿತರಿಸಲಾಯಿತು.
    ಶಾಸಕ ಕೆ.ರಘುಪತಿ ಭಟ್, ಅಂಬಲಪಾಡಿ ಜನಾರ್ದನ ದೇವಳದ ಧರ್ಮದರ್ಶಿ ಡಾ.ವಿಜಯ ಬಲ್ಲಾಳ್, ಇನ್ಫೋಸಿಸ್ ಫೌಂಡೇಶನ್ ಉಪಾಧ್ಯಕ್ಷ ರವಿರಾಜ್, ಭವಾನಿ ಎಂಟರ್‌ಪ್ರೈಸಸ್‌ನ ಪುರುಷೋತ್ತಮ ಪಟೇಲ್, ಸೆಲ್ಕೋ ಸೋಲಾರ್‌ನ ಗುರುಪ್ರಕಾಶ್ ಶೆಟ್ಟಿ, ಕಲಾರಂಗದ ಪದಾಧಿಕಾರಿಗಳಾದ ಅಧ್ಯಕ್ಷ ಎಂ.ಗಂಗಾಧರ ರಾವ್, ಕಾರ್ಯದರ್ಶಿ ಮುರಳಿ ಕಡೆಕಾರ್, ಎಸ್.ವಿ.ಭಟ್, ವಿ.ಜಿ ಶೆಟ್ಟಿ, ನಿಕಟ ಪೂರ್ವ ಅಧ್ಯಕ್ಷ ಗಣೇಶ್ ರಾವ್, ನಾರಾಯಣ ಹೆಗ್ಡೆ ಇದ್ದರು.

    ಬಡತನ ಎಲ್ಲರನ್ನೂ ಕಾಡುತ್ತದೆ, ಆದರೆ ಯಾವ ಪರಿಸ್ಥಿತಿಯಲ್ಲಿಯೂ ನಿಷ್ಠೆ ಪ್ರಾಮಾಣಿಕತೆ ಬಿಡಬಾರದು. ಸಮಾಜ ಬದಲಾಗಬೇಕು ಎಂಬ ನಿರೀಕ್ಷೆಗಿಂತ ಒಳ್ಳೆಯ ವಿಚಾರಗಳಿಂದ ನಮ್ಮನ್ನು ನಾವು ಬದಲಾವಣೆ ಮಾಡಿಕೊಳ್ಳಬೇಕು.
    -ನೇಮಿಚಂದ್ರ, ಲೇಖಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts