More

    ಸಮರ್ಪಕವಾಗಿ ಜಾರಿಯಾಗಲಿ ಮಾನವ ಹಕ್ಕು ಕಾನೂನು

    ಶಿರಸಿ: ಮಾನವ ಕುಲ ಶ್ರೇಷ್ಠವಾಗಿದ್ದು, ಜಾತಿ, ಧರ್ಮ, ಮತ, ಭಾಷೆ, ಲಿಂಗ ಇತ್ಯಾದಿ ಕೇಂದ್ರವನ್ನಾಗಿಸಿಕೊಂಡು ತಾರತಮ್ಯ ಬಹಳಷ್ಟು ನಡೆಯುತ್ತಿದೆ. ಮಾನವ ಹಕ್ಕು ಕಾನೂನು ಸಮರ್ಪಕವಾಗಿ ಜಾರಿಯಾಗಿ ಅಸಮಾನತೆ ದೂರವಾಗಬೇಕು ಎಂದು ಹಿರಿಯ ಪತ್ರಕರ್ತ ಅಶೋಕ ಹಾಸ್ಯಗಾರ ಹೇಳಿದರು.

    ನಗರದ ರಾಯರಪೇಟೆಯ ವೆಂಕಟರಮಣ ಸಭಾಂಗಣದಲ್ಲಿ ಭಾನುವಾರ ವಿಶ್ವ ಮಾನವ ಹಕ್ಕುಗಳ ಆಯೋಗದ ಉತ್ತರ ಕನ್ನಡ ಜಿಲ್ಲಾ ಮಹಿಳಾ ಅಧ್ಯಕ್ಷೆ ಹಾಗೂ ಕಾನೂನು ಸಲಹೆಗಾರ್ತಿ ಅರ್ಚನಾ ಜಯಪ್ರಕಾಶ ನಾಯಕ ಆಯೋಜಿಸಿದ್ದ ಮಾನವ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

    ಪತ್ರಿಕಾ ಸಂಸ್ಥೆ, ನ್ಯಾಯಾಂಗ ವ್ಯವಸ್ಥೆ ಹಾಗೂ ಪೊಲೀಸ್ ಇಲಾಖೆಯು ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳುತ್ತದೆ. ಶೋಷಣೆಗೆ ಒಳಗಾದ ಜನರಿಗೆ, ಪೀಡಿತರು ಕಷ್ಟಕ್ಕೆ ಸಿಲುಕಿದಾಗ, ಅಂತಹ ಸಂದರ್ಭದಲ್ಲಿ ಈ ಮೂರು ಅಂಗಗಳು ಸದಾಕಾಲ ನೆರವಿಗೆ ಬರುತ್ತವೆ ಎಂದರು.

    ಜಿ.ಪಂ ಸಾಮಾಜಿಕ ನ್ಯಾಯ ಸಮಿತಿ ಮಾಜಿ ಅಧ್ಯಕ್ಷ ಬಸವರಾಜ ದೊಡ್ಮನಿ ಅಧ್ಯಕ್ಷತೆ ವಹಿಸಿ, ಮಾನವ ಹಕ್ಕುಗಳ ಕುರಿತು ಉಪನ್ಯಾಸ ನೀಡಿದರು.

    ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಿ, ಗೌರವಿಸಲಾಯಿತು.

    ಅಶು ಲ್ಯಾಂಡ್ ಡೇವಲಪರ್ ಮುಖ್ಯಸ್ಥ ಮಂಜು ರಾಯ್ಕರ, ಮಾನವ ಹಕ್ಕುಗಳ ಜಿಲ್ಲಾ ಮಹಿಳಾ ಅಧ್ಯಕ್ಷೆ ಅರ್ಚನಾ ಜಯಪ್ರಕಾಶ , ದತ್ತಾತ್ರೇಯ ಹೆಗಡೆ, ಚಿದಾನಂದ ಹರಿಜನ, ವಿದ್ಯಾ ವೈದ್ಯ, ಸುಮಂಗಲಾ ನಾಯ್ಕ, ಶಿವಾನಂದ ಮಡಸಾರಿ, ಗುಡ್ಡಪ್ಪ ಗುತ್ಯಪ್ಪ ವಾಸನ್, ಮಾರುಕಟ್ಟೆ ಠಾಣೆ ಪಿಎಸ್.ಐ ಮಾಲಿನಿ ಹಂಸಬಾವಿ, ಶೋಭಾ ಬೈಂದೂರ, ಕರೀಂ ಶೇಖ್, ಸಿಕಂದರ್ ಶುಂಠಿ, ಜಯಪ್ರಕಾಶ ನಾಯಕ, ಮತ್ತಿತರರು ಇದ್ದರು. ವಾಣಿ ನಾಯ್ಕ ನಿರೂಪಿಸಿ, ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts