More

    ಡೋಂಗ್ರಿ ಗ್ರಾಮಕ್ಕೆ ಹೆಚ್ಚುವರಿ ಬಸ್ ವ್ಯವಸ್ಥೆ

    ಕಾರವಾರ: ತೆಪ್ಪದ ಮೂಲಕ ಪ್ರಯಾಣಿಸುವ ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಮಕ್ಕೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ. ಗ್ರಾಮಸ್ಥರು, ವಿದ್ಯಾರ್ಥಿಗಳು ಸುಂಕಸಾಳ ಎಂಬ ಪಕ್ಕದ ಊರಿಗೆ ತೆರಳಲು ನಡುವಿನ ಗಂಗಾವಳಿ ನದಿಯಲ್ಲಿ ಬಿದಿರಿನ ತೆಪ್ಪ ಬಳಸುತ್ತಿದ್ದಾರೆ. ಮಕ್ಕಳ ಅತ್ಯಂತ ಅಪಾಯಕಾರಿ ತೆಪ್ಪಯಾನದ ಬಗ್ಗೆ ‘ವಿಜಯವಾಣಿ’ ಜ. 24ರಂದು ‘ತೆಪ್ಪ ಏರಿ ಶಾಲೆಗೆ ಪಯಣ- ವಿದ್ಯಾರ್ಥಿಗಳ ಪ್ರಾಣವೇ ಪಣ’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. 2019ರ ಪ್ರವಾಹದಲ್ಲಿ ತೂಗು ಸೇತುವೆ ಕೊಚ್ಚಿ ಹೋದ ನಂತರ ಗ್ರಾಮಸ್ಥರ ಸಂಕಟದ ಬಗ್ಗೆ ವರದಿ ಮಾಡಿತ್ತು. ಗ್ರಾಮಸ್ಥರು ತೆಪ್ಪ ಏರದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ ಬಗ್ಗೆ ಜ. 31ರಂದು ‘ಜನರ ಮೇಲೆಯೇ ಅಧಿಕಾರಿಗಳ ದರ್ಪ’ಎಂಬ ಶೀರ್ಷಿಕೆಯಡಿ ಮತ್ತೊಂದು ಫಾಲೋ ಅಪ್ ವರದಿ ಪ್ರಕಟಿಸಿತ್ತು.

    ಇದಾದ ಬಳಿಕ ಮಂಗಳವಾರ ಅಂಕೋಲಾದಿಂದ ಡೋಂಗ್ರಿ ಗ್ರಾಮಕ್ಕೆ ನಿತ್ಯ ಮಧ್ಯಾಹ್ನ 2.30ಕ್ಕೆ ಪ್ರತ್ಯೇಕ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಜಿಪಂ ಸಿಇಒ ಪ್ರಿಯಾಂಗಾ ಎಂ. ತಿಳಿಸಿದ್ದಾರೆ. ಈ ಮೊದಲು ಡೋಂಗ್ರಿಗೆ ಬೆಳಗ್ಗೆ 7ಕ್ಕೆ ಹಾಗೂ ಸಂಜೆ 5.30ಕ್ಕೆ ಮಾತ್ರ ಬಸ್ ವ್ಯವಸ್ಥೆ ಇತ್ತು. ಆ ಬಸ್ 20 ಕಿ.ಮೀ. ಸುತ್ತಿ ಬರುತ್ತಿತ್ತು. ಇದರಿಂದ ಪಕ್ಕದ ಸುಂಕಸಾಳ ಹಾಗೂ ಅಂಕೋಲಾದ ವಿದ್ಯಾರ್ಥಿಗಳು ತೆಪ್ಪದ ಪ್ರಯಾಣ ಮಾಡುತ್ತಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts