More

    ಏರುತ್ತಲೇ ಇದೆ ಕರೊನಾ ಸೋಂಕಿತರ ಸಂಖ್ಯೆ; ವೈರಸ್​ ಪಸರಿಸುವುದನ್ನು ತಡೆಯಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹೆಚ್ಚುವರಿ ಸಲಹೆಗಳು ಹೀಗಿವೆ….

    ನೊವೆಲ್​ ಕರೊನಾ ವೈರಸ್​ ಎಂಬ ಶಬ್ದ ಕೇಳಿದರೇ ಭಯ ಪಡುವ ಪರಿಸ್ಥಿತಿ ಇದೆ. ಸರ್ಕಾರಗಳು, ವೈದ್ಯರು ಸಾರ್ವಜನಿಕರಿಗೆ ಮುನ್ನೆಚ್ಚರಿಕಾ ಕ್ರಮಗಳನ್ನು ತಿಳಿಸುತ್ತಿದ್ದಾರೆ.

    ಕೇಂದ್ರ ಹಾಗೂ ರಾಜ್ಯ ಆರೋಗ್ಯ ಇಲಾಖೆಯಿಂದ ಈಗಾಗಲೇ ಕರೊನಾ ಮುನ್ನೆಚ್ಚರಿಕಾ ಕ್ರಮಗಳನ್ನು ತಿಳಿಸಲಾಗಿದೆ. ಆದರೆ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇರುವ ಕಾರಣ ಸಾರ್ವಜನಿಕರಿಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಹೆಚ್ಚುವರಿಯಾಗಿ ಸಲಹೆಗಳನ್ನು ನೀಡಿದೆ.

    ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸೂಚನೆ ಮತ್ತು ಸಲಹೆಗಳು ಹೀಗಿವೆ:
    1. ಮಾ.22ರಿಂದ ಯಾವುದೇ ಅಂತಾರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕ ವಿಮಾನಗಳು ಭಾರತಕ್ಕೆ ಆಗಮಿಸಲು ಅನಿಮತಿ ಇಲ್ಲ.
    2. ಜನ ಪ್ರತಿನಿಧಿಗಳು, ಸರ್ಕಾರಿ ಉದ್ಯೋಗಿಗಳು, ವೈದ್ಯಕೀಯ ವೃತ್ತಿಪರರನ್ನು ಹೊರತು ಪಡಿಸಿ, 65ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರು ಮನೆಯಲ್ಲೇ ಇರಬೇಕು. ವೈದ್ಯಕೀಯ ನೆರವು ಅಗತ್ಯವಿದ್ದಲ್ಲಿ ಮಾತ್ರ ಹೊರಬರಬೇಕು. ಹಾಗೇ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಿಂದ ಹೊರಬರಬಾರದು. ಈ ಬಗ್ಗೆ ಆಯಾ ರಾಜ್ಯಸರ್ಕಾರಗಳು ಸೂಚನೆ, ನಿರ್ದೇಶನ ನೀಡಬೇಕು.
    3. ವಿದ್ಯಾರ್ಥಿಗಳು, ರೋಗಿಗಳು ಮತ್ತು ಅಂಗವಿಕಲರನ್ನು ಹೊರತುಪಡಿಸಿ, ಉಳಿದೆಲ್ಲರಿಗೂ ರೈಲ್ವೆ ಹಾಗೂ ನಾಗರಿಕ ವಿಮಾನಯಾನವು ಎಲ್ಲ ರಿಯಾಯಿತಿ ಪ್ರಯಾಣವನ್ನು ಸ್ಥಗಿತಗೊಳಿಸುತ್ತದೆ.
    4. ತುರ್ತು/ ಅಗತ್ಯ ಸೇವೆಗಳಲ್ಲಿ ಕೆಲಸ ಮಾಡುವವರನ್ನು ಹೊರತುಪಡಿಸಿ ಖಾಸಗಿ ವಲಯದ ನೌಕರರು ಮನೆಯಿಂದಲೇ ಕೆಲಸ ಮಾಡುವುದನ್ನು ಜಾರಿಗೆ ತರುವಂತೆ ಎಲ್ಲ ರಾಜ್ಯಗಳಿಗೂ ತಿಳಿಸಲಾಗಿದೆ.
    5. ಜನದಟ್ಟಣೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರದ ಎಲ್ಲಾ ಬಿ ಮತ್ತು ಸಿ ಗುಂಪು ನೌಕರರು ಪರ್ಯಾಯ ವಾರದಲ್ಲಿ ಹಾಗೂ ಬೇರೆ ಬೇರೆ ಸಮಯಗಳಲ್ಲಿ ಕಚೇರಿಗಳಿಗೆ ಹಾಜರಾಗುವಂತೆ ಸೂಚಿಸಲಾಗುತ್ತದೆ.

    ಕರೊನಾ ಕಾಲಿಟ್ಟ ಬೆನ್ನಲ್ಲೇ ಕೊಡಗು ಜಿಲ್ಲಾದ್ಯಂತ ಸೆಕ್ಷನ್​ 144 ಜಾರಿ; ಹೋಟೆಲ್​, ರೆಸಾರ್ಟ್​ಗಳೆಲ್ಲ ಮಾ.31ರವರೆಗೆ ಬಂದ್​

    ಕರೊನಾ ವೈರಸ್​ಗೆ ಭಾರತದಲ್ಲಿ ನಾಲ್ಕನೇ ಸಾವು; ಪಂಜಾಬ್​ನಲ್ಲಿ ಮೃತನಾದ 72 ವರ್ಷದ ವೃದ್ಧನಲ್ಲಿ ಸೋಂಕು ಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts