More

    ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ, ಶಿಕ್ಷಕರು ನಿರಂತರ ಜ್ಞಾನದಾಹಿಗಳಾಗಿರಬೇಕು ಎಂದ ಸಚಿವ ಎಂ.ಬಿ. ಪಾಟೀಲ

    ವಿಜಯಪುರ: ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದಲಾಗುತ್ತಿರುವ ವಿದ್ಯಮಾನಗಳಿಗೆ ತಕ್ಕಂತೆ ಶಿಕ್ಷಕರು ನಿರಂತರ ಜ್ಞಾನಾರ್ಜನೆ ಮಾಡುತ್ತ ಆದರ್ಶ ಶಿಕ್ಷಕರಾಗಬೇಕು ಎಂದು ಜಿಲ್ಲಾ ಉಸ್ತವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.

    ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಆದರ್ಶ ಶಿಕ್ಷಕರ ವೇದಿಕೆ ಮತ್ತು ಜಿಲ್ಲಾ ಯುವ ಪರಿಷತ್ ವತಿಯಿಂದ ಶನಿವಾರ ಆಯೋಜಿಸಿದ್ದ ಶೈಕ್ಷಣಿಕ ಚಿಂತನಾಗೋಷ್ಠಿ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

    ದೇಶ ಮತ್ತು ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಶ್ಲಾಘನೀಯ. ಶಿಕ್ಷಕರು ಆದರ್ಶರಾಗಿರಬೇಕು. ಇದರಿಂದ ಸ್ಪೂರ್ತಿ ಪಡೆದ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಕನಸುಗಳನ್ನು ನನಸು ಮಾಡಲು ಶ್ರಮಿಸುತ್ತಾರೆ. ನಮ್ಮ ಅಜ್ಜ ತಿಕೋಟಾದ ಎ.ಟಿ. ಪಾಟೀಲರು ರಾಷ್ಟ್ರ ಮಟ್ಟದಲ್ಲಿ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದಿದ್ದರು. ಅಲ್ಲದೇ, ತರಗತಿಗಳಿಗೆ ಗೈರು ಹಾಜರಾದ ತಮ್ಮ ಸ್ವಂತ ಮಗನನ್ನೇ ಒಂದು ವರ್ಷ ಫೇಲ್ ಮಾಡಿ ಆದರ್ಶ ಶಿಕ್ಷಕರಾಗಿ ಕೆಲಸ ಮಾಡಿದ್ದರು. ಶಿಕ್ಷಕರ ಆದರ್ಶಗಳು ಇತರರಿಗೆ ಪ್ರೇರಣೆಯಾಗಬೇಕು ಎಂದರು.

    ಸಾಧನೆ ಮಾಡಿದ ಶಿಕ್ಷಕರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
    ಕುಂಟೋಜಿ ಸಂಸ್ಥಾನ ಹಿರೇಮಠದ ಚನ್ನವೀರ ದೇವರು, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ಎಚ್. ನಾಗೂರ, ಆದರ್ಶ ಶಿಕ್ಷಕರ ವೇದಿಕೆಯ ಜಿಲ್ಲಾಧ್ಯಕ್ಷ ಉಮೇಶ ಕವಲಗಿ, ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ನಿವೃತ್ತ ಉಪನಿರ್ದೇಶಕಿ ಸಾಯಿರಾಬಾನು ಖಾನ, ನಗರ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ, ವಿಜಯಪುರ ಗ್ರಾಮೀಣ ಶಿಕ್ಷಣಾಧಿಕಾರಿ ಪ್ರಮೋದಿನಿ ಬಳೋಲಮಟ್ಟಿ, ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಪ್ರಧಾನ ಆಯುಕ್ತ ಸಿದ್ದಣ್ಣ ಸಕ್ರಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೆಡಶ್ಯಾಳ, ಯುವ ಪರಿಷತ್ ಜಿಲ್ಲಾಧ್ಯಕ್ಷ ಶರಣು ಸಬರದ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಜುಬೇರ ಕೆರೂರ, ಎಂ.ಎಸ್. ಭೂಸಗೊಂಡ, ಶಂಕರ ಖಂಡೆಕರ, ಎಸ್.ಎಸ್. ಜೇವೂರ, ರಾಜು ಬಿಸನಾಳ, ಎಸ್.ಎಸ್. ಪಾಟೀಲ, ಆನಂದ ಮೂಲಿಮನಿ, ಶಿವಾನಂದ ಮಂಗಾನವರ, ಎಸ್.ಡಿ. ಪಾಟೀಲ, ಎಸ್.ಆರ್. ಪಾಟೀಲ, ಎಸ್.ಎಸ್. ಸೋಲಾಪುರ, ಎಂ.ಕೆ. ಪಾಟೀಲ, ಬಸವರಾಜ ಅಮರಪ್ಪಗೋಳ, ಮುತ್ತಪ್ಪ ಪೂಜಾರಿ ಮತ್ತಿತರರಿದ್ದಾರೆ.

    ಜಗದೀಶ ಬೋಳಸೂರ ಸ್ವಾಗತಿಸಿದರು. ಎಚ್.ಕೆ. ಬೂದಿಹಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಬೂಲ್ ಕೊಕಟನೂರ ಮತ್ತು ರೇವತಿ ಬೂದಿಹಾಳ ನಿರೂಪಿಸಿದರು. ಸಂತೋಷ ಕುಲಕರ್ಣಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts