More

    ನಟಿ ಶಬಾನಾ ಆಜ್ಮಿಗೆ ಆನ್​ಲೈನ್​ ಧೋಖಾ?!

    ಮುಂಬೈ : ಆನ್​​ಲೈನ್​ ಮದ್ಯ ಮಾರಾಟ ವೇದಿಕೆಯೊಂದು ತಮಗೆ ವಂಚನೆ ಮಾಡಿದೆ ಎಂದು ಹಿರಿಯ ನಟಿ ಶಬಾನಾ ಆಜ್ಮಿ ಆರೋಪಿಸಿದ್ದಾರೆ. ಹಣ ಪಡೆದು ಡೆಲಿವರಿ ನೀಡದೆ, ಫೋನ್​ ಕರೆಗಳಿಗೆ ಉತ್ತರ ನೀಡುತ್ತಿಲ್ಲ ಎಂದು ಟ್ವಿಟರ್ ಮೂಲಕ ತಿಳಿಸಿದ್ದಾರೆ.

    “ಲಿವಿಂಗ್​ ಲಿಖ್ವಿಡ್ಸ್​ ಎಂಬ ಸಂಸ್ಥೆಗೆ ನಾನು ಹಣ ಪಾವತಿಸಿದೆ. ಆದರೆ ಆರ್ಡರ್​ ನೀಡಿದ ಸಾಮಾನು ಬಾರದಿದ್ದಾಗ, ವಿಚಾರಿಸಲು ಕರೆ ಮಾಡಿದರೆ ಅವರು ಉತ್ತರಿಸುತ್ತಿಲ್ಲ” ಎಂದು ಬರೆದಿರುವ ಆಜ್ಮಿ, ತಾವು ಹಣ ಕಳುಹಿಸಿದ ಬ್ಯಾಂಕ್ ಖಾತೆ ಸಂಖ್ಯೆಯ ವಿವರ ನೀಡಿದ್ದಾರೆ. ಆದರೆ ಎಷ್ಟು ಹಣ ಕಟ್ಟಿದ್ದಾರೆ, ಈ ಬಗ್ಗೆ ದೂರು ನೀಡಿದ್ದಾರಾ ಎಂದು ತಿಳಿಸಿಲ್ಲ.

    ಅಕ್ಷಯ್​ ಖನ್ನ, ನರ್ಗಿಸ್​ ಫಕ್ರಿ ಮತ್ತು ಕರಣ್​ ಸಿಂಗ್ ಗ್ರೋವರ್​ ಮುಂತಾದ ಬಾಲಿವುಡ್ ಸೆಲೆಬ್ರಿಟಿಗಳು ಈ ಮುಂಚೆ ಈ ರೀತಿ ಆನ್​ಲೈನ್​ ಸ್ಕಾಮ್​ಗಳಿಗೆ ಬಲಿಯಾಗಿರುವುದು ವರದಿಯಾಗಿದೆ. (ಏಜೆನ್ಸೀಸ್)

    ಸಾಲದ ಕಂತಿಗೆ ಮನೆಬಾಗಿಲಿಗೆ ಬಂದ ಏಜೆಂಟರು… ಮಾನ ಹೋಯಿತೆಂದು ಸಾವಿಗೆ ಶರಣಾದ ಪ್ಲಂಬರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts