More

    ಜಾಹೀರಾತಿನಲ್ಲಿ ನಟಿ ಸಂಯುಕ್ತಾ ಪ್ರಾಣಿಪ್ರೀತಿ

    ಬೆಂಗಳೂರು: ನಟಿ ಸಂಯುಕ್ತಾ ಹೊರನಾಡು, ಶ್ವಾನಗಳ ಮೇಲಿನ ತಮ್ಮ ಪ್ರೀತಿಯನ್ನು ಆಗಾಗ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಳ್ಳುತ್ತಲೇ ಇರುತ್ತಾರೆ. ವಿಶೇಷವೆಂದರೆ, ಈ ಬಾರಿ ಅವರು ಪೆಟ್ ಫುಡ್​ನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಪೆಟ್​ಫುಡ್​ನ 10 ಜಾಹೀರಾತುಗಳಲ್ಲಿ ಸಂಯುಕ್ತಾ ಕಾಣಿಸಿಕೊಂಡಿದ್ದು, ಮುಂದಿನ ವಾರದಿಂದ ಪ್ರಸಾರವಾಗಲಿವೆ. ವಿಶೇಷವೆಂದರೆ, ಈ ಜಾಹೀರಾತುಗಳ ಹಿಂದೆ ಚಿತ್ರರಂಗದವರ ಶ್ರಮವೂ ಇದೆ. ಈ ಹಿಂದೆ ‘ರೋಮಿಯೋ’, ‘ದಿ ಟೆರರಿಸ್ಟ್’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ಪಿ.ಸಿ. ಶೇಖರ್, ಈ ಜಾಹೀರಾತುಗಳನ್ನು ನಿರ್ದೇಶಿಸಿದ್ದಾರೆ.

    ಶೇಖರ್ ಚಿತ್ರಗಳ ಕಾಯಂ ಸದಸ್ಯರಾದ ಛಾಯಾಗ್ರಾಹಕ ವೈದಿ ಮತ್ತು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ… ಈ ಜಾಹೀರಾತುಗಳಿಗೆ ಕೆಲಸ ಮಾಡಿದ್ದು, ಈ ಮೂವರಿಗೂ ಇದು ಮೊದಲ ಅನುಭವ. ಇದೊಂದು ದೊಡ್ಡ ಸವಾಲು ಎನ್ನುವ ಶೇಖರ್, ‘ಚಿತ್ರದಲ್ಲಿ ಒಂದು ಕಥೆಯನ್ನು ವಿವರವಾಗಿ ಹೇಳುತ್ತೇವೆ. ಆದರೆ, ಜಾಹೀರಾತುಗಳಲ್ಲಿ 10 ಅಥವಾ 30 ಸೆಕೆಂಡ್​ಗಳಲ್ಲಿ ಎಲ್ಲ ವಿಷಯಗಳನ್ನು ಹೇಳಬೇಕಾಗುತ್ತದೆ. ಇದೊಂದು ಒಳ್ಳೆಯ ಅನುಭವ’ ಎನ್ನುತ್ತಾರೆ. ಪ್ರಜ್ವಲ್ ದೇವರಾಜ್ ಅಭಿನಯದ ಚಿತ್ರವೊಂದನ್ನು ಈಗಾಗಲೇ ಘೋಷಿಸಿರುವ ಅವರು, ಜುಲೈನಿಂದ ಚಿತ್ರೀಕರಣ ಆರಂಭಿಸುತ್ತಾರಂತೆ.

    ಭಾರತದಲ್ಲಿ ಇಂದು ಒಂದು ಸೆಕೆಂಡ್​ನಲ್ಲಿ ಹಾಕಿಸಿದ ಲಸಿಕೆ ಎಷ್ಟು ಗೊತ್ತೇ!?

    ಕೆಎಸ್​ಆರ್​ಟಿಸಿ ಬಸ್​ನಲ್ಲಿ ಹಾವು!; ಲಾಕ್​ಡೌನ್​ ಇಫೆಕ್ಟ್​, ಚಾಲಕರಲ್ಲಿ ಭಯ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts