More

    ಮದ್ವೆ ಆದ್ಮೇಲೆ ಫಸ್ಟ್​ನೈಟಲ್ಲಿ ಏನ್ಮಾಡ್ತಾರೆ, ಅದ್ನೇ ಮಾಡಿದ್ದೀವಿ..: ನಟಿ ರಚಿತಾ ರಾಮ್​

    ಬೆಂಗಳೂರು: ‘ಐ ಲವ್​ ಯೂ’ ಸಿನಿಮಾದಲ್ಲಿ ನಟಿಸಿ ಒಂದು ಹಾಡಿನ ಕಾರಣಕ್ಕೆ ತೀರಾ ಗಮನ ಸೆಳೆದಿದ್ದ ನಟಿ ರಚಿತಾ ರಾಮ್​ ಇದೀಗ ‘ಲವ್​ ಯೂ ರಚ್ಚು’ ಸಿನಿಮಾದಲ್ಲೂ ಅಂಥದ್ದೇ ಕಾರಣಕ್ಕೆ ಟಾಕ್​ ಆಫ್​ ದ ಟೌನ್​ ಎಂಬಂತೆ ಆಗಿದ್ದಾರೆ. ಅಷ್ಟಕ್ಕೂ ಹಾಗಾಗಲಿಕ್ಕೆ ಕಾರಣ ಮತ್ತಂಥದ್ದೇ ದೃಶ್ಯ ಹಾಗೂ ರಚಿತಾ ಮಾತು.

    ಗುರು ದೇಶಪಾಂಡೆ ನಿರ್ಮಾಣ, ಶಂಕರ್ ಎಸ್​. ರಾಜ್ ನಿರ್ದೇಶನದಲ್ಲಿ ಅಜೇಯ್​ ರಾವ್​ ಹಾಗೂ ರಚಿತಾ ರಾಮ್​ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ‘ಲವ್ ಯೂ ರಚ್ಚು’ ಚಿತ್ರದ ಮುದ್ದು ನೀನೇ.. ಎಂಬ ಹಾಡು ನಿನ್ನೆಯಷ್ಟೇ ಬಿಡುಗಡೆ ಆಗಿದೆ. ಈ ಹಾಡಿನಲ್ಲಿ ಅಜೇಯ್​ ರಾವ್ ಜತೆ ಮೈ ಕಾಣಿಸುವಂತೆ ಮಾದಕವಾಗಿ ಕಾಣಿಸಿಕೊಂಡಿರುವ ರಚಿತಾ ರಾಮ್​ ಪ್ರಶ್ನೆ ಎದುರಿಸಬೇಕಾಗಿತ್ತು.

    ಇದನ್ನೂ ಓದಿ: ‘ನನ್ನ ಹಾಗೂ ಮಗು ಲೈಫ್ ಹಾಳು ಮಾಡಿದ್ದಿ’ ಎಂದು ವಾಟ್ಸ್​​ಆ್ಯಪ್​ ಸ್ಟೇಟಸ್​ ಹಾಕಿ, 6 ತಿಂಗಳ ಮಗು ಜತೆ ನದಿಗೆ ಹಾರಿದ ತಾಯಿ!

    ‘ಐ ಲವ್ ಯೂ’ ಚಿತ್ರದ ಹಾಡಿನಲ್ಲಿ ಉಪೇಂದ್ರ ಜತೆ ಮಾದಕವಾಗಿ ಕಾಣಿಸಿಕೊಂಡಿದ್ದ ರಚಿತಾ ರಾಮ್​ ನಂತರ ನಾನು ಅಂಥ ದೃಶ್ಯಗಳಲ್ಲಿ ನಟಿಸಬಾರದಿತ್ತು, ಇನ್ನು ಮುಂದೆ ಆ ರೀತಿ ನಟಿಸುವುದಿಲ್ಲ ಎಂದು ಕಣ್ಣೀರು ಹಾಕಿ ಹೇಳಿಕೊಂಡಿದ್ದರು. ಈಗ ‘ಲವ್ ಯೂ ರಚ್ಚು’ ಚಿತ್ರದಲ್ಲೂ ಹಾಗೆ ಕಾಣಿಸಿಕೊಂಡಿದ್ದರಿಂದ ಅವರನ್ನು ಸುದ್ದಿಗಾರರು ಪ್ರಶ್ನೆ ಮಾಡಿದ್ದರು.
    ಅಂಥ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಅತ್ತಿದ್ದ ನೀವು ಮತ್ತೆ ಅಂಥದ್ದೇ ದೃಶ್ಯಗಳಲ್ಲಿ ಅಭಿನಯಿಸಿದ್ದೇಕೆ? ಎಂಬ ಪ್ರಶ್ನೆಗೆ ಅವರು ನೀಡಿರುವ ಉತ್ತರ ಈಗ ಎಲ್ಲೆಡೆ ಮತ್ತೆ ಮತ್ತೆ ಕೇಳಿ ಬರಲಾರಂಭಿಸಿದೆ. ‘ಮದ್ವೆ ಆದ್ಮೇಲೆ ಫಸ್ಟ್​ನೈಟಲ್ಲಿ ಎಲ್ರೂ ಏನ್ಮಾಡ್ತಾರೆ, ಅದ್ನೇ ನಾವೂ ಮಾಡಿದ್ದೀವಿ’ ಎಂದು ರಚಿತಾ ತಾವು ಮಾದಕವಾಗಿ ಕಾಣಿಸಿಕೊಂಡಿರುವುದಕ್ಕೆ ಸಮಜಾಯಿಷಿ ನೀಡಿದ್ದಾರೆ. ‘ಸುಮ್ನೆ ಮಾಡಲ್ಲ, ಮಾಡಿದ್ದೀವಿ ಅಂದ್ರೆ ಅದ್ಕೂ ಒಂದು ರೀಸನ್ ಇರುತ್ತೆ, ಜಾಸ್ತಿ ಡಿಟೇಲ್ಸ್ ಹೋಗಿಲ್ಲ, ಬೇಸಿಕ್ ಏನಿದ್ಯೋ ಅಷ್ಟು ಮಾಡಿದ್ವಿ’ ಎಂದು ರಚಿತಾ ರಾಮ್​ ತಾವು ‘ಲವ್​ ಯೂ ರಚ್ಚು’ ಚಿತ್ರದಲ್ಲಿ ಅಭಿನಯಿಸಿರುವ ದೃಶ್ಯಗಳನ್ನು ಸಮರ್ಥಿಸಿಕೊಂಡಿದ್ದಾರೆ.

    ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್​ನಲ್ಲಿ ಬಿಡುಗಡೆ ಆಗಿರುವ ಈ ಹಾಡು, ಒಂದೇ ದಿನದಲ್ಲಿ 10 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಕಂಡಿದೆ. ನಾಗಾರ್ಜುನ ಶರ್ಮಾ ಅವರು ಬರೆದಿರುವ ಈ ಗೀತೆಗೆ ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸಿದ್ದು, ಸಿದ್ ಶ್ರೀರಾಮ್​ ಮತ್ತು ಸುಪ್ರಿಯಾ ರಾಮ್​ ಹಾಡಿದ್ದಾರೆ.

    ಮದ್ವೆ ಆದ್ಮೇಲೆ ಫಸ್ಟ್​ನೈಟಲ್ಲಿ ಏನ್ಮಾಡ್ತಾರೆ, ಅದ್ನೇ ಮಾಡಿದ್ದೀವಿ..: ನಟಿ ರಚಿತಾ ರಾಮ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts