More

    ಅವನ ಕಥೆಯಲ್ಲಿ ಬಹುಭಾಷಾ ನಟಿ ಪ್ರಿಯಾಮಣಿ!

    ಬೆಂಗಳೂರು: ನಟಿ ಪ್ರಿಯಾಮಣಿ ಬಹುಭಾಷಾ ನಟಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಕನ್ನಡದ ಜತೆಗೆ ದಕ್ಷಿಣ ಭಾರತದ ಇತರೇ ಇಂಡಸ್ಟ್ರಿಗಳಲ್ಲಿ ಅವರು ಗುರುತಿಸಿಕೊಂಡಿದ್ದಾರೆ. ಬಾಲಿವುಡ್​ನಲ್ಲಿಯೂ ನಟಿಸಿ ಬಂದಿದ್ದಾರೆ. ಈ ನಡುವೆ ಸಿನಿಮಾಗಳ ಜತೆಯಲ್ಲಿಯೇ ಡಿಜಿಟಲ್ ಕಂಟೆಂಟ್​ನತ್ತ ಅವರ ಒಲವು ಹೆಚ್ಚಾಗುತ್ತಿದೆ. ಒಂದಾದ ಬಳಿಕ ಒಂದು ಓಟಿಟಿ ಒರಿಜಿನಲ್​ಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇನ್ನೇನು ‘ಹೀಸ್ ಸ್ಟೋರಿ’ ವೆಬ್​ಸಿರೀಸ್ ಸಹ ಜೀ5 ಓಟಿಟಿಯಲ್ಲಿ ಏ. 25ಕ್ಕೆ ಪ್ರಸಾರವಾಗಲಿದೆ.

    ‘ದಿ ಫ್ಯಾಮಿಲಿ ಮ್ಯಾನ್’ ಮೂಲಕ ಓಟಿಟಿ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದ ಪ್ರಿಯಾಮಣಿ, ಆ ವೆಬ್​ಸಿರೀಸ್​ನಿಂದ ಸಾಕಷ್ಟು ಅವಕಾಶಗಳನ್ನೂ ಪಡೆಯುತ್ತ ಹೋದರು. ಅದಾದ ಬಳಿಕ ‘ಅತೀತ್’ನಲ್ಲಿಯೂ ನಟಿಸಿದರು. ‘ಫ್ಯಾಮಿಲಿ ಮ್ಯಾನ್’ ಸೀಸನ್ ಎರಡರಲ್ಲಿಯೂ ಪ್ರಿಯಾಮಣಿ ನಟಿಸಿದ್ದಾರೆ. ಇದೀಗ ಹೊಸದಾದ ‘ಹೀಸ್ ಸ್ಟೋರಿ’ ಜತೆ ಆಗಮಿಸುತ್ತಿದ್ದಾರೆ.

    ಶೀರ್ಷಿಕೆ ಹೇಳುವಂತೆ ಈ ವೆಬ್​ಸಿರೀಸ್​ನಲ್ಲಿ ವಿಶೇಷವಾದ ಕಥೆಯೊಂದನ್ನು ನಿರ್ದೇಶಕ ಪ್ರಶಾಂತ್ ಭಾಗಿಯಾ ಹೇಳಿದ್ದಾರೆ. ಪತಿ ಮತ್ತು ಪತ್ನಿ ನಡುವೆ ಇನ್ನೊಬ್ಬ ವ್ಯಕ್ತಿಯ ಆಗಮನವಾದಾಗ ಏನೆಲ್ಲ ಘಟಿಸುತ್ತದೆ? ಪತ್ನಿಯ ಬದಲು ಪತಿಯ ಜತೆಗೆ ಪರ ಪುರುಷನೊಬ್ಬ ಸಂಬಂಧ ಇಟ್ಟುಕೊಳ್ಳುವ ಪ್ರಸಂಗವೂ ಈ ವೆಬ್​ಸಿರೀಸ್​ನಲ್ಲಿದೆ. ಇನ್ನುಳಿದಂತೆ ಹಿಂದಿಯಲ್ಲಿ ಅಜಯ್ ದೇವಗನ್ ಜತೆಗಿನ ‘ಮೈದಾನ್’, ಕನ್ನಡದ ‘ಕೈಮರ’ ಚಿತ್ರ ಶೂಟಿಂಗ್ ಹಂತದಲ್ಲಿದ್ದರೆ, ಡಾ. 56 ಬಿಡುಗಡೆಗೆ ಸಿದ್ಧವಿದೆ.

    ಉಗುರು ಉದ್ದ ಇದೆ, ಓಲೆ ದೊಡ್ಡದಿದೆ, ಜತೆಗೆ ಮೊಬೈಲ್​ಫೋನ್​ ಇದೆ ಎಂದು ಬೈದ ಪ್ರಾಂಶುಪಾಲ; ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ

    ಮಾಟ-ಮಂತ್ರಕ್ಕಾಗಿ 13 ವರ್ಷದ ಮಗಳನ್ನೇ ಬಲಿಕೊಟ್ಟಿದ್ದ; ಕೊನೆಗೂ ಸಿಕ್ಕಿಬಿದ್ದ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts