More

    ಸವಾಲುಗಳ ಬೆನ್ನತ್ತಿ ಮೇಘಾ ಶೆಟ್ಟಿ ; ‘ಕೈವ’ ಚಿತ್ರ, ಪಾತ್ರದ ಬಗ್ಗೆ ‘ಮೌನ’ ಮುರಿದ ನಟಿ

    ವಿಜಯವಾಣಿ ಸುದ್ದಿಜಾಲ ಬೆಂಗಳೂರು

    ‘ಜೊತೆಜೊತೆಯಲಿ’ ಧಾರಾವಾಹಿಯ ಬಳಿಕ ನಟಿ ಮೇಘಾ ಶೆಟ್ಟಿ ‘ತ್ರಿಬಲ್ ರೈಡಿಂಗ್’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಪದಾರ್ಪಣೆ ಮಾಡಿದರು. ನಂತರ ‘ದಿಲ್‌ಪಸಂದ್’ ಚಿತ್ರದಲ್ಲಿ ನಟಿಸಿದ ಅವರು, ಸದ್ಯ ಮೂರ್ನಾಲ್ಕು ಚಿತ್ರಗಳಲ್ಲಿ ಬಿಜಿಯಿದ್ದಾರೆ. ಅವುಗಳಲ್ಲಿ ಜಯತೀರ್ಥ ನಿರ್ದೇಶನದ ‘ಕೈವ’ ಇಂದು ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಅದೇ ಖುಷಿಯಲ್ಲಿ ಮೇಘಾ, ತಮ್ಮ ಪಾತ್ರ, ಸಿದ್ದತೆ, ಸವಾಲು, ಮುಂದಿನ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ.

    ಇದನ್ನೂ ಓದಿ : VIDEO| ಸಿನಿಮಾ ಕೆರಿಯರ್​ಗೆ ಬ್ರೇಕ್​ ಬಿದ್ದಿದ್ಯಾಕೆ ಎಂದರೆ ಮಾತು ಬೆಳೆಯುತ್ತಾ ಹೋಗುತ್ತೆ: ವಿನೋದ್ ರಾಜ್

    ಸವಾಲುಗಳ ಬೆನ್ನತ್ತಿ ಮೇಘಾ ಶೆಟ್ಟಿ ; ‘ಕೈವ’ ಚಿತ್ರ, ಪಾತ್ರದ ಬಗ್ಗೆ ‘ಮೌನ’ ಮುರಿದ ನಟಿ
    • ‘ಕೈವ’ ಕರಗದ ಹಿನ್ನೆಲೆಯಲ್ಲಿ ನಡೆಯುವ ಕಥೆ. ನೀವು ಕರಗ ನೋಡಿದ್ದೀರಾ..
    • ಕರಗವನ್ನು ನಾನು ಈ ಹಿಂದೆ ನೋಡಿರಲಿಲ್ಲ. ಆದರೆ, ಚಿತ್ರದಲ್ಲಿ ಕರಗ ಪ್ರಮುಖ ಪಾತ್ರವಹಿಸುತ್ತದೆ. ಕೆಲವು ಸನ್ನಿವೇಶಗಳನ್ನು ನೈಜ ಕರಗದ ನಡುವೆಯೇ ಶೂಟಿಂಗ್ ನಡೆಸಿದ್ದೇವೆ. ಕೆಲ ಸನ್ನಿವೇಶಗಳನ್ನು ಕರಗ ಸಮಿತಿಯ ಒಪ್ಪಿಗೆ ಪಡೆದು ಅದೇ ರೀತಿ ಅಲಂಕಾರ ಮಾಡಿಸಿ ಮಸ್ತಾನ್ ದರ್ಗಾದಲ್ಲಿ ಚಿತ್ರೀಕರಣ ಮಾಡಲಾಗಿದೆ. ಹಿಂದೂ – ಮುಸ್ಲಿಂ ನಡುವಿನ ಪ್ರೇಮಕಥೆಯಾದರೂ ವಿವಾದಾತ್ಮಕ ಅಂಶಗಳಿಲ್ಲ. ಪ್ರೀತಿಗೆ ಯಾವುದೇ ಜಾತಿ, ಧರ್ಮವಿಲ್ಲ ಎಂಬ ಸಂದೇಶವಿದೆ.
    ಸವಾಲುಗಳ ಬೆನ್ನತ್ತಿ ಮೇಘಾ ಶೆಟ್ಟಿ ; ‘ಕೈವ’ ಚಿತ್ರ, ಪಾತ್ರದ ಬಗ್ಗೆ ‘ಮೌನ’ ಮುರಿದ ನಟಿ
    • ನೀವು ಈ ಚಿತ್ರ ಒಪ್ಪಲು ಕಾರಣ?
    • ಪಾತ್ರ ಮತ್ತು ಸಿನಿಮಾದಲ್ಲಿರುವ ವಿಷಯ ಎರಡೂ ಇಷ್ಟವಾಯಿತು. 1980ರ ಶೇಡ್, ಡಿಗ್ಲಾಮ್ ಜತೆಗೆ ವಿಭಿನ್ನ ಪಾತ್ರ, ಕಂಟೆಂಟ್ ಇಂಟರೆಸ್ಟಿಂಗ್ ಆಗಿತ್ತು. ಮೊದಲ ಬಾರಿಗೆ ಇಂತಹ ಪಾತ್ರದಲ್ಲಿ ನಟಿಸಿದ್ದೇನೆ. ವಿಶೇಷ, ವಿಭಿನ್ನ, ಸವಾಲಿನ ಪಾತ್ರ. ಪಾತ್ರಕ್ಕೆ ಎಷ್ಟು ಪ್ರಾಮುಖ್ಯತೆ ಅಂತ ನೋಡಿಯೇ ನಾನು ಕಥೆ ಒಪ್ಪುವುದು. ಕಂಟೆಂಟ್ ಕೂಡ ಚೆನ್ನಾಗಿರಬೇಕು. ‘ಕೈವ’ ಕಥೆ ಕೇಳಿದಾಗ ಇಂತಹ ಪಾತ್ರ ನನ್ನಿಂದ ಸಾಧ್ಯನಾ ಅಂತ ನನಗೂ ಪ್ರಾರಂಭದಲ್ಲಿ ಅನ್ನಿಸಿತ್ತು. ಆದರೆ, ಜಯತೀರ್ಥ ಸರ್ ತುಂಬ ಸರಳೀಕರಿಸಿದರು. ಕ್ರಮೇಣ ಹೊಂದಿಕೊಂಡೆ. ಚಿತ್ರದಲ್ಲಿರುವ ಪಾತ್ರಗಳು ಸುಮ್ಮನೆ ಹಾಗೆ ಬಂದು ಹೀಗೆ ಹೋಗುವುದಿಲ್ಲ. ಒಂದು ಪಾತ್ರ ತೆರೆ ಮೇಲೆ ಬರುತ್ತಿದೆ ಅಂದರೆ, ಆ ಪಾತ್ರಕ್ಕೂ ಇನ್ನೊಂದು ಪಾತ್ರಕ್ಕೂ ಕನೆಕ್ಷನ್ ಇರಲಿದೆ. ಸುಮ್ಮನೆ ಬಂದು ಹೋಗುವ ಪಾತ್ರಗಳು ಯಾವುದೂ ಇಲ್ಲ.
    • ಇದನ್ನೂ ಓದಿ : ‘NTR31’: ಜೂ. ಎನ್​ಟಿಆರ್​ ಸಿನಿಮಾ ಬಗ್ಗೆ ಪ್ರಶಾಂತ್ ನೀಲ್ ಕೊಟ್ರು ಸುಳಿವು!
    ಸವಾಲುಗಳ ಬೆನ್ನತ್ತಿ ಮೇಘಾ ಶೆಟ್ಟಿ ; ‘ಕೈವ’ ಚಿತ್ರ, ಪಾತ್ರದ ಬಗ್ಗೆ ‘ಮೌನ’ ಮುರಿದ ನಟಿ
    • ನಿಮ್ಮ ಪಾತ್ರ ಹೇಗಿರಲಿದೆ?
    • ನಾನು ಸಲ್ಮಾ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಈ ಹಿಂದಿನ ಸಿನಿಮಾಗಳಿಗಿಂತ ಸವಾಲಿನ ಹಾಗೂ ವಿಶೇಷವಾದ ಪಾತ್ರ. ಜಯತೀರ್ಥ ಸರ್ ಶೂಟಿಂಗ್‌ಗೂ ಮುನ್ನ ವರ್ಕ್‌ಶಾಪ್ ಮಾಡಿಸಿದರು. 2023ರಲ್ಲಿ 1980ರ ದಶಕವನ್ನು ಸೃಷ್ಟಿಸುವುದೇ ಚಾಲೆಂಜಿಂಗ್ ಆಗಿತ್ತು. ಅಶೋಕಪುರಂ ಸೇರಿ ಮೈಸೂರಿನ ಕೆಲವೆಡೆ ಚಿತ್ರೀಕರಣ ಮಾಡಿದೆವು. ಲೊಕೇಷನ್ ಸಿಗದ ಸನ್ನಿವೇಶಗಳನ್ನು ಸೆಟ್ ಹಾಕಿ ಶೂಟಿಂಗ್ ಮಾಡಲಾಗಿದೆ.
    ಸವಾಲುಗಳ ಬೆನ್ನತ್ತಿ ಮೇಘಾ ಶೆಟ್ಟಿ ; ‘ಕೈವ’ ಚಿತ್ರ, ಪಾತ್ರದ ಬಗ್ಗೆ ‘ಮೌನ’ ಮುರಿದ ನಟಿ
    • ಮುಂದಿನ ಚಿತ್ರಗಳು?
    • ‘ಕೈವ’ ಇಂದು ಬಿಡುಗಡೆಯಾಗಲಿದೆ. ‘ಆಪರೇಷನ್ ಲಂಡನ್ ಕೆೆ’ ಚಿತ್ರದ ಶೂಟಿಂಗ್ ಮುಗಿದಿದ್ದು, ಡಬ್ಬಿಂಗ್ ಬಾಕಿಯಿದೆ. ಉಳಿದಂತೆ ವಿನಯ್ ರಾಜಕುಮಾರ್ ಜತೆ ‘ಗ್ರಾಮಾಯಣ’ ಹಾಗೂ ಪ್ರಜ್ವಲ್ ದೇವರಾಜ್ ಜತೆ ‘ಚೀತಾ’ ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ.
    ಸವಾಲುಗಳ ಬೆನ್ನತ್ತಿ ಮೇಘಾ ಶೆಟ್ಟಿ ; ‘ಕೈವ’ ಚಿತ್ರ, ಪಾತ್ರದ ಬಗ್ಗೆ ‘ಮೌನ’ ಮುರಿದ ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts