More

    ತಾರೆಯರ ಬೈಕ್ ಪ್ರೇಮ: ವಿಶ್ವ ಮೋಟರ್‌ಸೈಕಲ್ ದಿನಾಚರಣೆಯ ವಿಶೇಷ

    | ಪ್ರಮೋದ ಮೋಹನ ಹೆಗಡೆ

    ಮೋಟರ್‌ಸೈಕಲ್ ಎಂದರೆ ಸಾಮನ್ಯವಾಗಿ ಹುಡುಗರಿಗೆ ಅಚ್ಚುಮೆಚ್ಚು ಅಥವಾ ಹುಡುಗರು ಓಡಿಸುವಂಥದ್ದು ಎಂಬ ಕಾಲವೊಂದಿತ್ತು. ಆದರೆ ಈಗ ಹಾಗಿಲ್ಲ, ಹುಡುಗಿಯರು ನಾವೇನೂ ಕಮ್ಮಿ ಇಲ್ಲ ಎಂಬಂತೆ ಬೈಕ್ ಓಡಿಸುತ್ತಾರೆ. ಈ ವಿಶ್ವ ಮೋಟರ್ ಸೈಕಲ್ ದಿನಾಚರಣೆಯಂದು ಕನ್ನಡದ ತಾರೆಯರಾದ ಲಾಸ್ಯ ನಾಗರಾಜ್ ಹಾಗೂ ಅಕ್ಷಿತಾ ಸತ್ಯನಾರಾಯಣ್ ತಮ್ಮ ಬೈಕ್ ಪ್ರೇಮವನ್ನು ವಿಜಯವಾಣಿ ಜತೆ ಹಂಚಿಕೊಂಡಿದ್ದಾರೆ.

    ತಾರೆಯರ ಬೈಕ್ ಪ್ರೇಮ: ವಿಶ್ವ ಮೋಟರ್‌ಸೈಕಲ್ ದಿನಾಚರಣೆಯ ವಿಶೇಷ

    ಬೈಕ್ ಹುಚ್ಚು ಹಿಡಿಸಿದ್ದು ಅಪ್ಪ:
    ‘ರೇಸರ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ನಟಿ ಅಕ್ಷಿತಾ ಸತ್ಯನಾರಾಯಣ್ ಚಿತ್ರಕ್ಕಾಗಿ ಸ್ಪೋರ್ಟ್ಸ್ ಬೈಕ್ ಓಡಿಸಲು ಕಲಿತಿದ್ದಾರಂತೆ. ಬೈಕ್ ಜತೆಗಿನ ಬಾಂಧವ್ಯವನ್ನು ಮೆಲಕು ಹಾಕುವ ಅಕ್ಷಿತಾ, ‘ನಾನು ಏಳನೇ ತರಗತಿಯಲ್ಲಿದ್ದಾಗ ಮೊದಲು ಅಪ್ಪನ ಬೈಕ್ ಓಡಿಸಿದ್ದು. ಬೈಕ್ ಕಲಿಸಿದ್ದು, ಬೈಕ್ ಬಗ್ಗೆ ಹುಚ್ಚು ಹಿಡಿಸಿದ್ದು ಅಪ್ಪ. ಹಾಗೆ ಶುರುವಾದ ನನ್ನ ಮತ್ತು ಬೈಕ್ ಸಂಬಂಧ ‘ರೇಸರ್’ ಚಿತ್ರದಲ್ಲಿ ರೈಡರ್ ಪಾತ್ರ ಮಾಡುವವರೆಗೆ ಬಂದಿದೆ. ನನಗೆ ಡ್ಯೂಕ್ ತುಂಬಾ ಇಷ್ಟ, ರಾಯಲ್ ಎನ್‌ಫೀಲ್ಡ್ ಓಡಿಸಬೇಕು ಅಂತಾಸೆ. ಇದುವರೆಗೆ ಪಿಲಿಯನ್ ಆಗಿ ದೂರ ಪ್ರಯಾಣ ಮಾಡಿದಿನಿ, ರೈಡರ್ ಆಗಿ ಲಾಂಗ್ ರೈಡ್ ಮಾಡಬೇಕು. ಎಲ್ಲ ಬೈಕ್​ಗಳಿಗೂ ಅದರದ್ದೇ ಆದ ವಿಶೇಷತೆ ಇರುತ್ತದೆ. ಹೀಗಾಗಿ ಎಲ್ಲರೂ ಪ್ರತಿ ಬೈಕನ್ನೂ ಗೌರವಿಸಬೇಕು’ ಎಂದು ಹೇಳಿಕೊಳ್ಳುತ್ತಾರೆ.

    ತಾರೆಯರ ಬೈಕ್ ಪ್ರೇಮ: ವಿಶ್ವ ಮೋಟರ್‌ಸೈಕಲ್ ದಿನಾಚರಣೆಯ ವಿಶೇಷ
    ತಾರೆಯರ ಬೈಕ್ ಪ್ರೇಮ: ವಿಶ್ವ ಮೋಟರ್‌ಸೈಕಲ್ ದಿನಾಚರಣೆಯ ವಿಶೇಷ

    ಕದ್ದು ಮುಚ್ಚಿ ಬೈಕ್ ಕಲಿತೆ:
    ಚಿಕ್ಕ ವಯಸ್ಸಿನಿಂದಲೂ ಬೈಕ್ ಬಗ್ಗೆ ಕ್ರೇಜ್ ಇಟ್ಟುಕೊಂಡಿರುವ ಲಾಸ್ಯ ನಾಗರಾಜ್ ಎಂಟನೇ ತರಗತಿಯಲ್ಲಿರುವಾಗ ಕದ್ದು ಮುಚ್ಚಿ ಪ್ರತಿದಿನ ಬೆಳಗ್ಗೆ ಐದು ಗಂಟೆಗೆ ಎದ್ದು FZ ಬೈಕ್ ಕಲಿತರಂತೆ. ಅಲ್ಲಿಂದ ಶುರುವಾದ ಬೈಕ್ ಕ್ರೇಜ್ ಕೊಯಿಮುತ್ತೂರ್‌ನಲ್ಲಿ ಟ್ರಾಕ್ ರೇಸಿಂಗ್ ಕಲಿಯುವ ಹಾಗೆ ಮಾಡಿತಂತೆ. ‘ಒಮ್ಮೆ ಸಿಗ್ನಲ್‌ನಲ್ಲಿ ನಾನು ಬೈಕ್‌ನಲ್ಲಿದ್ದಾಗ ಪಕ್ಕದಲ್ಲಿ ಅಪ್ಪ ಇದ್ದರು. ನಾನು ಬೈಕ್ ಓಡಿಸುವ ವಿಷಯ ಆಗ ಅಪ್ಪನಿಗೆ ಗೊತ್ತಾಗಿ ಮನೆಯಲ್ಲಿ ಒದೆ ತಿಂದಿದ್ದೆ. ಹಾಗಂತ ಬೈಕ್ ಓಡಿಸುವುದು ನಿಲ್ಲಿಸಲಿಲ್ಲ. ಡ್ಯೂಕ್, ಎನ್‌ಫೀಲ್ಡ್ ಸೆರಿ ಹಲವು ಸೂಪರ್ ಬೈಕ್‌ಗಳನ್ನೂ ಓಡಿಸಿದ್ದೀನಿ. ಟ್ರಯಂ್ ನನಗೆ ತುಂಬ ಇಷ್ಟ. ಒಮ್ಮೆ ಬೈಕ್ ಅಲ್ಲಿ ಹಿಮಾಚಲದವರೆಗೂ ರೈಡ್ ಹೋಗಬೇಕು ಎಂಬ ಆಸೆಯಿದೆ’ ಎನ್ನುತ್ತಾರೆ. ಹುಡಗಿಯರು ಬೈಕ್ ಓಡಿಸಲು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕು ಎನ್ನುವ ಲಾಸ್ಯ, ‘ಹುಡುಗಿಯರಿಗೆ ಬೈಕ್ ಓಡಿಸುವ ಆಸೆ ಇದ್ದರೆ ಅವರ ತಂದೆ ತಾಯಿ ಪ್ರೋತ್ಸಾಹಿಸಬೇಕು ಹೊರತು ಕಟ್ಟಿಹಾಕಬಾರದು’ ಎಂಬ ಕಿವಿಮಾತು ಹೇಳುತ್ತಾರೆ.

    ತಾರೆಯರ ಬೈಕ್ ಪ್ರೇಮ: ವಿಶ್ವ ಮೋಟರ್‌ಸೈಕಲ್ ದಿನಾಚರಣೆಯ ವಿಶೇಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts