More

    ‘ಸಿನಿಮಾದಲ್ಲಿ ನೀನಿರಬೇಕೆಂದರೆ ಹೀರೋ ಜತೆ ಮಲಗಬೇಕೆಂದರು!’ ನಟಿ ಬಿಚ್ಚಿಟ್ಟ ಸತ್ಯ

    ಮುಂಬೈ: ಸಿನಿಮಾ ಚಾನ್ಸ್​ ಕೊಡುವುದಾಗಿ ಹೇಳಿ ಅವರನ್ನು ಬೇರೆಯದ್ದೇ ರೀತಿಯಲ್ಲಿ ಬಳಸಿಕೊಳ್ಳುವ ಅನೇಕ ಪ್ರಕರಣಗಳನ್ನು ನಾವು ನೋಡಿದ್ದೇವೆ. ಅದೇ ರೀತಿ ಪ್ರಸಿದ್ಧ ನಿರ್ದೇಶಕರೊಬ್ಬರು ನಟಿಗೆ ಸಿನಿಮಾದಲ್ಲಿ ಅವಕಾಶ ಕೊಡಲು ಹೀರೋ ಜತೆ ಮಲಗಲು ಹೇಳಿದ್ದರೆಂದು ಇದೀಗ ಸ್ವತಃ ನಟಿಯೇ ಬಾಯ್ಬಿಟ್ಟಿದ್ದಾರೆ.

    ನಟಿ ಕಿಶ್ವರ್ ಮರ್ಚೆಂಟ್ ಈ ರೀತಿಯ ಆರೋಪವೊಂದನ್ನು ಮಾಡಿದ್ದಾರೆ. ಗರ್ಭಿಣಿಯಾಗಿರುವ ಅವರನ್ನು ಖಾಸಗಿ ಮಾಧ್ಯಮ ಸಂಸ್ಥೆಯೊಂದು ಸಂದರ್ಶನ ಮಾಡುವಾಗ ಅವರು ಈ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಅದೊಂದು ದೊಡ್ಡ ಸಿನಿಮಾವಾಗಿತ್ತು. ಪ್ರಸಿದ್ಧ ಡೈರೆಕ್ಟರ್​ ಪ್ರಸಿದ್ಧ ಹೀರೋ ಜತೆಯೇ ಸಿನಿಮಾ ಮಾಡುವುದಾಗಿ ಹೇಳಿದ್ದರು. ಆದರೆ ಆ ಸಿನಿಮಾದಲ್ಲಿ ನಾನು ನಟಿಸುವುದಕ್ಕೆ ಹೀರೋ ಜತೆ ಮಲಗಬೇಕು ಎಂದೂ ಅವರು ಹೇಳಿದ್ದರು. ಸಿನಿಮಾ ಬಗ್ಗೆ ಮೀಟಿಂಗ್​ ಮಾಡಲು ಹೋದಾಗ ಆ ರೀತಿ ಹೇಳಿದರು. ಆದರೆ ನಾನು ಆ ಆಫರ್​ ಅನ್ನು ಸ್ವೀಕರಿಸದೆ ಹಾಗೆಯೇ ಎದ್ದು ಬಂದೆ ಎಂದು ಅವರು ಹೇಳಿದ್ದಾರೆ.

    ಸಿನಿಮಾ ಕ್ಷೇತ್ರ ಪೂರ್ತಿಯಾಗಿ ಅದೇ ರೀತಿ ಇದೆ ಎಂದು ಹೇಳಲಾಗದು. ಹಾಗಂತ ಈ ರೀತಿ ಆಗುವುದೇ ಇಲ್ಲವೆಂದೂ ಹೇಳಲಾಗದು ಎಂದು ನಟಿ ಹೇಳಿದ್ದಾರೆ. ಅಂದ ಹಾಗೆ ಆ ಸಿನಿಮಾದ ಮೀಟಿಂಗ್​ನಲ್ಲಿ ನನ್ನ ತಾಯಿಯೂ ನನ್ನ ಜತೆ ಇದ್ದರು ಎಂದು ಅವರು ತಮ್ಮ ಜೀವನದ ಕಹಿ ಘಟನೆಯನ್ನು ಹಂಚಿಕೊಂಡಿದ್ದಾರೆ. (ಏಜೆನ್ಸೀಸ್)

    ಶಿಕ್ಷಕಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ವ್ಯಕ್ತಿ! ಆಕೆಯ ಟಾರ್ಚರ್​ ತಾಳಲಾರದೆ ಆತ್ಮಹತ್ಯೆ!

    ಜಾರಕಿಹೊಳಿ ಸಿಡಿ ಪ್ರಕರಣ: ನರೇಶ್, ಶ್ರವಣ್​ ಸಲ್ಲಿಸಿರುವ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಮುಂದಾದ ಎಸ್​ಐಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts