More

    ಎಲ್ಲ ಮುನ್ನೆಚ್ಚರಿಕೆ ವಹಿಸಿದ್ರೂ ಹೀಗಾಯ್ತು ಎಂದ ಮಹಾನಟಿ; ಕೀರ್ತಿ ಸುರೇಶ್​​ಗೂ ಕೋವಿಡ್ ಪಾಸಿಟಿವ್​

    ಬೆಂಗಳೂರು: ಮಹಾನಟಿ ಎಂದೂ ಖ್ಯಾತಿ ಪಡೆದಿರುವ ನಟಿ ಕೀರ್ತಿ ಸುರೇಶ್, ತಮ್ಮ ನಿಕಟ ಸಂಪರ್ಕಕ್ಕೆ ಬಂದವರು ಟೆಸ್ಟ್ ಮಾಡಿಸಿಕೊಳ್ಳಿ ಎಂದು ಹೇಳಿದ್ದಾರೆ. ಮಾತ್ರವಲ್ಲ, ಎಲ್ಲ ಮುನ್ನೆಚ್ಚರಿಕೆ ವಹಿಸಿದ್ದರೂ ಹೀಗಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಅವರು ಹೀಗೆ ಹೇಳಿಕೊಳ್ಳಲು ಕಾರಣ, ಕರೊನಾ.

    ಹೌದು.. ನಟಿ ಕೀರ್ತಿ ಸುರೇಶ್ ಕೂಡ ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. ನಾನು ಸೋಂಕಿಗೆ ಒಳಗಾಗಿದ್ದು, ಲಘುವಾದ ಲಕ್ಷಣಗಳು ಕಾಣಿಸಿಕೊಂಡಿವೆ. ಎಲ್ಲ ಮುನ್ನೆಚ್ಚರಿಕೆ ವಹಿಸಿದ್ದರೂ ಪಾಸಿಟಿವ್ ಆಗಿರುವುದು ನೋಡಿದರೆ, ಕೋವಿಡ್ ಸೋಂಕು ಎಷ್ಟು ತೀವ್ರಗತಿಯಲ್ಲಿ ಹರಡುತ್ತಿದೆ ಎಂಬುದು ತಿಳಿದುಬರುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

    ಇನ್ನು ತಾವು ಈಗಾಗಲೇ ಐಸೋಲೇಷನ್​ಗೆ ಒಳಗಾಗಿರುವುದನ್ನು ಹೇಳಿಕೊಂಡಿರುವ ಅವರು, ಲಸಿಕೆ ತೆಗೆದುಕೊಂಡಿರದವರು ಆದಷ್ಟು ಬೇಗ ಲಸಿಕೆ ತೆಗೆದುಕೊಳ್ಳುವಂತೆ ಮತ್ತು ಅಗತ್ಯ ಮುನ್ನೆಚ್ಚರಿಕೆ ವಹಿಸಿ ಸುರಕ್ಷಿತವಾಗಿ ಇರುವಂತೆ ಕಿವಿಮಾತು ಹೇಳಿದ್ದಾರೆ.

    ಶಾಲಾ-ಕಾಲೇಜುಗಳಿಗೆ ರಜೆ ವಿಚಾರ; ಕರೊನಾ ನಿಯಂತ್ರಣ ನಿಟ್ಟಿನಲ್ಲಿ ಸಿಎಂ ಮಹತ್ವದ ನಿರ್ಧಾರ

    ಒಂಟಿ ಕೈ ರೌಡಿಯ ಬಂಧನ; ಒಂದೇ ಕೈಯಲ್ಲಿ ಮಾಡಿದ್ದ ಕೊಲೆ, ಕೊಲೆಯತ್ನ, ಸುಲಿಗೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts