More

    ಕಿರಿಕ್​ ನಟಿ ಮೇಲೆ ಹಲ್ಲೆ ಆರೋಪ; ಕಾಂಗ್ರೆಸ್​ ವಕ್ತಾರೆ ವಿರುದ್ಧ ಕೇಸ್​: ತುಂಡುಡುಗೆ ಕಸರತ್ತಿಗೆ ಪರ-ವಿರೋಧ ಚರ್ಚೆ

    ಬೆಂಗಳೂರು: ಉದ್ಯಾನದಲ್ಲಿ ತುಂಡುಡುಗೆ ಧರಿಸಿ ಕಸರತ್ತು ನಡೆಸಿದ ಟೀಕೆಗೆ ಗುರಿಯಾಗಿರುವ ಕಿರಿಕ್​ ಪಾರ್ಟಿ ನಟಿ ತನ್ನ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಕಾಂಗ್ರೆಸ್ ವಕ್ತಾರೆ ವಿರುದ್ಧ ಕೇಸ್​ ದಾಖಲಿಸಿದ್ದಾರೆ. ಅಲ್ಲಿಗೆ ಪರಸ್ಪರ ವಿರುದ್ಧ ದೂರು ದಾಖಲಾದಂತಾಗಿದೆ.

    ಎಚ್ಎಸ್ಆರ್ ಲೇಔಟ್ ಠಾಣೆಯಲ್ಲಿ‌ ಕಾಂಗ್ರೆಸ್​ ವಕ್ತಾರೆ ಕವಿತಾ ರೆಡ್ಡಿ ಹಾಗೂ ಅನೀಲ್ ರೆಡ್ಡಿ ವಿರುದ್ಧ ನಟಿ ಸಂಯುಕ್ತಾ ಹೆಗ್ಡೆ ದೂರು ದಾಖಲಿಸಿದ್ದಾರೆ. ತನ್ನ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾಗಿ ದೂರಿನಲ್ಲಿ ಹೇಳಲಾಗಿದೆ.

    ಇದನ್ನೂ ಓದಿ; VIDEO: ಗಾಂಜಾ ಬೆಳೆಯೋದಲ್ಲ…., ಇಸ್ರೇಲ್​ನಲ್ಲಿ ಸುರಿಯಿತು ‘ಗಾಂಜಾ ಮಳೆ’…! 

    ಶುಕ್ರವಾರ (ಸೆ.4) ಸಂಜೆ ಬೆಂಗಳೂರಿನ ಅಗರ ಕೆರೆ ಬಳಿಯಿರುವ ಸಾರ್ವಜನಿಕ ಉದ್ಯಾನದಲ್ಲಿ ಸಂಜೆ ಸಂಯುಕ್ತಾ ಹೆಗ್ಡೆ ಮತ್ತವರ ಸ್ನೇಹಿತರು ಸ್ಪೋರ್ಟ್ಸ್ ಬ್ರಾ ಧರಿಸಿ ಹುಲಾ ಲೂಪ್​ ಡಾನ್ಸ್ ಮಾಡಿದ್ದಾರೆ. ಇದಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಸಂಯುಕ್ತಾ ಮತ್ತವರ ತಂಡವನ್ನು ತರಾಟೆ ತೆಗೆದುಕೊಂಡಿದ್ದರು. ನಟಿಯರ ವಿರುದ್ಧ ಧಿಕ್ಕಾರ ಕೂಗಿ, ಉದ್ಯಾನದ ಗೇಟ್ ಲಾಕ್ ಮಾಡಿ, ಪೊಲೀಸರನ್ನು ಸ್ಥಳಕ್ಕೆ ಕರೆಯಿಸಿದ್ದರು.

    ಜತೆಗೆ, ಸಂಯುಕ್ತ ರೆಡ್ಡಿ ಹಾಗೂ ಸ್ನೇಹಿತರ ವಿರುದ್ಧ ಕವಿತಾ ರೆಡ್ಡಿ ದೂರು ದಾಖಲಿಸಿದ್ದರು. ಇದೀಗ ಸಂಯುಕ್ತ ಕೂಡ ದೂರು ದಾಖಲಿಸಿದ್ದಾರೆ.
    ಪ್ರಕರಣವೀಗ ಭಾರಿಮಟ್ಟದಲ್ಲಿ ಪರ- ವಿರೋಧ ಚರ್ಚೆಗೆ ಕಾರಣವಾಗಿದೆ. ಸಂಯುಕ್ತ ಹೆಗ್ಗಡೆ ಪರ ನಟ ಜಗ್ಗೇಶ್ ಸೇರಿ ಹಲವರ ಟ್ವೀಟ್ ಮಾಡಿದ್ದಾರೆ. ನಟಿ ಸಂಯುಕ್ತಾ ಹಾಗೂ ಫ್ರೆಂಡ್ಸ್​ ವಿರುದ್ಧ ಕಾಂಗ್ರೆಸ್​ ನಾಯಕಿ ಕವಿತಾ ರೆಡ್ಡಿ ನಡೆದುಕೊಂಡ ರೀತಿಯನ್ನು ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಖಂಡಿಸಿದ್ದಾರೆ.

    ಅಂದು ನಡೆದಿದ್ದೇನು? ಇಲ್ಲಿದೆ ಸಂಯುಕ್ತ ಹೆಗ್ಡೆ ಚಿತ್ರಿಸಿದ್ದು ಇಲ್ಲಿದೆ….

    ಪಾರ್ಕ್​ನಲ್ಲಿ ಕಿರಿಕ್​ ನಟಿಯ ‘ತುಂಡುಡುಗೆ’ ಕಸರತ್ತು; ಉದ್ಯಾನದಲ್ಲೇ ಲಾಕ್​ ಮಾಡಿದ ಸಾರ್ವಜನಿಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts