More

    ಒಡಿಶಾ ಸಮುದ್ರ ತೀರದಲ್ಲಿ ಸಾಹಸಸಿಂಹನ ಅಲೆ; ಡಾ.ವಿಷ್ಣುವರ್ಧನ್ ಅವರ ಮರಳು ಶಿಲ್ಪ!

    ಬೆಂಗಳೂರು: ಇನ್ನೊಂದು ದಿನ ಕಳೆದರೆ ಸಾಹಸಸಿಂಹ ಡಾ.ವಿಷ್ಣುವರ್ಧನ್​ ಅವರ ಜನ್ಮದಿನ. ಅವರು ಮರೆಯಾಗಿ ದಶಕವೇ ಕಳೆದಿದ್ದರೂ ಸಿನಿಪ್ರಿಯರಿಗೆ ಅವರ ಕುರಿತ ಅಭಿಮಾನ ಮರೆಯಾಗುವಂಥದ್ದಲ್ಲ, ಮಸುಕಾಗುವಂಥದ್ದೂ ಅಲ್ಲ. ಅಂಥ ಒಂದು ಅಭಿಮಾನ ಇದೀಗ ಒಡಿಶಾದ ಸಮುದ್ರ ತೀರದಲ್ಲೂ ಕಂಡುಬಂದಿದೆ.

    ಒಡಿಶಾದ ಪುರಿಯ ಮರೈನ್​ ಡ್ರೈವ್ ಬೀಚ್​ನಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅವರ ಕಲಾಕೃತಿ ಮೂಡುವ ಮೂಲಕ ಅಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಕಲಾವಿದರೊಬ್ಬರ ಮರಳು ಶಿಲ್ಪ ಅರಳಿದಂತಾಗಿದೆ. ಸೆಪ್ಟೆಂಬರ್ 18ರಂದು ಡಾ.ವಿಷ್ಣುವರ್ಧನ್​ ಅವರ 71ನೇ ಜನ್ಮದಿನವಾಗಿದ್ದು, ಆ ಪ್ರಯುಕ್ತ ಮರಳುಶಿಲ್ಪ ಕಲೆಯ ತವರೂರಾದ ಒಡಿಶಾದಲ್ಲಿ ವಿಷ್ಣುವರ್ಧನ್ ಅವರ 6 ಅಡಿ ಎತ್ತರ ಮತ್ತು 15 ಅಡಿ ಅಗಲದ ಮರಳು ಶಿಲ್ಪ ಅರಳಿದೆ.

    ಹೆಸರಾಂತ ಶಿಲ್ಪಿ ಮನೀಶ್ ಕುಮಾರ್ ಅವರು, ಅಪಾರ ಶ್ರಮ ಹಾಗೂ ಸಮಯ ವಿನಿಯೋಗಿಸಿ ಈ ಶಿಲ್ಪವನ್ನು ರಚಿಸಿದ್ದಾರೆ. ಅದಕ್ಕೆ ಅಗತ್ಯವಾದ ಹಣಕಾಸು ವ್ಯವಸ್ಥೆಯನ್ನು ವಿಷ್ಣು ಸೇನಾ ಸಮಿತಿಯ ವೀರಕಪುತ್ರ ಶ್ರೀನಿವಾಸ ಅವರು ಒದಗಿಸಿದ್ದಾರೆ.

    ಒಡಿಶಾ ಸಮುದ್ರ ತೀರದಲ್ಲಿ ಸಾಹಸಸಿಂಹನ ಅಲೆ; ಡಾ.ವಿಷ್ಣುವರ್ಧನ್ ಅವರ ಮರಳು ಶಿಲ್ಪ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts