More

    ಬಿಸಿನೆಸ್ ರಾಜಕಾರಣದಿಂದ ಇಷ್ಟೆಲ್ಲ ಆಗುತ್ತಿದೆ: ನಟ ಉಪೇಂದ್ರ

    ಬೆಂಗಳೂರು: ದೇಶಾದ್ಯಂತ ಕರೊನಾ ಎರಡನೇ ಅಲೆ ಹೆಚ್ಚಾಗುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಿನ ಪರಿಸ್ಥಿತಿ ಹದಗೆಟ್ಟಿದ್ದು, ಇದರ ನಡೆವೆಯೇ ಪ್ರಸ್ತುತ ರಾಜಕೀಯ ವ್ಯವಸ್ಥೆಯ ವಿರುದ್ಧ ನಟ ಉಪೇಂದ್ರ ಟೀಕೆ ಮಾಡಿದ್ದಾರೆ.

    ಉಪೇಂದ್ರ ಅವರ ಹೊಸ ಸಿನಿಮಾ “ಲಗಾಮ್” ಸೆಟ್ಟೇರಿದ್ದು, ಈ ವೇಳೆ ಮಾತನಾಡಿದ ಅವರು ​ನಾನು ಮೊದಲ ದಿನದಿಂದ ಹೇಳುತ್ತಿದ್ದೆ. ಜನರಿಗೆ ಈಗ ಅರ್ಥ ಆಗುತ್ತಿದೆ. ಬಿಸಿನೆಸ್ ರಾಜಕಾರಣದಿಂದ ಇಷ್ಟೆಲ್ಲ ಆಗುತ್ತಿದೆ ಎಂದರು.

    ಇದನ್ನೂ ಓದಿರಿ: ರೈಲು ನಿಲ್ದಾಣದಲ್ಲಿ ನಿಗೂಢ ಗೋಣಿ ಚೀಲ: ಸ್ಥಳಕ್ಕೆ ಆಗಮಿಸಿದ ಪೊಲೀಸರ ಕಣ್ಮುಂದೆಯೇ ನಡೆಯಿತು ಅಚ್ಚರಿ!

    ಕರೊನಾ ಇಡೀ ಪ್ರಪಂಚಕ್ಕೆ ಬಂದಿದೆ. ಇದನ್ನು ತಡೆಯುವುದಕ್ಕೆ ಆರೋಗ್ಯ ವ್ಯವಸ್ಥೆ ಸರಿ ಇರಬೇಕು. ಶಿಕ್ಷಣ ಮತ್ತು ಆರೋಗ್ಯ ಚನ್ನಾಗಿದ್ದರೆ ಇಡೀ ದೇಶ ಚನ್ನಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಎಲ್ಲರು ಮನಸ್ಸು ಗಟ್ಟಿ ಮಾಡಿಕೊಳ್ಳಿ. ಪಾಸಿಟಿವ್​ ಆಗಿರಿ ಎಂದು ಉಪೇಂದ್ರ ಹೇಳಿದರು.

    ಕರೊನಾ ಬಗ್ಗೆ ಭಯ ಪಡಬೇಡಿ. ಎಚ್ಚರಿಕೆಯಿಂದಿರಿ. ಎಲ್ಲೆಂದರಲ್ಲಿ ಅನಾವಶ್ಯಕವಾಗಿ ಓಡಾಡಬೇಡಿ. ದಯವಿಟ್ಟು ಸಾಮಾಜಿಕ ಅಂತರ ಕಾಯ್ದುಕೊಂಡು ಹುಷಾರಾಗಿರಿ ಎಂದು ಸಲಹೆ ನೀಡಿದರು. ರಾಜಕಾರಣಿಗಳು ಸಭೆ ಸಮಾರಂಭ ಮಾಡುತ್ತಿದ್ದಾರೆ. ಅದನ್ನ ನೋಡಿ ಜನ ತಲೆ ಕೆಡಿಸಿಕೊಳ್ಳಲ್ಲ ಎಂದು ಇದೇ ವೇಳೆ ರಾಜಕೀಯ ನಾಯಕರನ್ನು ಉಪೇಂದ್ರ ಟೀಕಿಸಿದರು. (ದಿಗ್ವಿಜಯ ನ್ಯೂಸ್​)

    ರಾಜಧಾನಿಯಲ್ಲಿ ಒಂದು ವಾರ ಲಾಕ್​ಡೌನ್ ; ‘ಇಷ್ಟು ಕೇಸ್ ಬಂದರೆ ಆರೋಗ್ಯ ವ್ಯವಸ್ಥೆ ಕುಸಿದೀತು’ ಎಂದ ಸಿಎಂ

    ಸಾವಿನ ದವಡೆಗೆ ನೂಕುವ ಕ್ರಿಮಿ…. ಮತ್ತೆ ಸುದ್ದಿಯಲ್ಲಿ ಬಿಗ್​ಬಾಸ್​ ಸ್ಪರ್ಧಿ ಚೈತ್ರಾ ಕೋಟೂರು

    ಇನ್ನೂ ಸುಂದರಿಯಾಗಲು ಚಿಕಿತ್ಸೆ ಪಡೆದ ಖ್ಯಾತ ನಟಿ ಕನ್ನಡಿ ನೋಡಿದಾಗ ಮೂರ್ಛೆ ಹೋದಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts