ಬೆಂಗಳೂರು: ನಿರೂಪಕಿಯಾಗಿ, ನಟಿಯಾಗಿ, ರಿಯಾಲಿಟಿ ಶೋ ಸ್ಪರ್ಧಿಯಾಗಿ ಗುರುತಿಸಿಕೊಂಡಿರುವ ಶೀತಲ್ ಶೆಟ್ಟಿ ಆಕ್ಷನ್-ಕಟ್ ಹೇಳಿರುವ ಚೊಚ್ಚಲ ಚಿತ್ರ ‘ವಿಂಡೋ ಸೀಟ್’. ಇತ್ತೀಚೆಗಷ್ಟೇ ಚಿತ್ರದ ಟ್ರೖೆಲರ್ ಬಿಡುಗಡೆಯಾಗಿದ್ದು ಯೂಟ್ಯೂಬ್ನಲ್ಲಿ ಸದ್ದು ಮಾಡುತ್ತಿದೆ.
‘ವಿಂಡೋ ಸೀಟ್’ ಚಿತ್ರ ಪ್ರಾರಂಭವಾದ ಬಗ್ಗೆ ಮಾತನಾಡುವ ಶೀತಲ್, ‘ಒಂದು ಚಿತ್ರ ಮಾಡುವ ಯೋಚನೆ ಇತ್ತು. ಈ ವಿಷಯವನ್ನು ಸುದೀಪ್ ಸರ್ಗೆ ಹೇಳಿದ್ದೆ. ಯಾರಾದರೂ ನಿರ್ವಪಕರಿದ್ದರೆ ತಿಳಿಸಲು ಮನವಿ ಮಾಡಿಕೊಂಡಿದ್ದೆ. ಅವರು ಆಗ ಜ್ಯಾಕ್ ಮಂಜು ಸರ್ ಬಳಿ ಕಥೆ ಹೇಳಲು ತಿಳಿಸಿದರು. ಜ್ಯಾಕ್ ಮಂಜು ಅವರಿಗೆ ಕಥೆ ಹೇಳಿದೆ. ಮೊದಲು ಅವರು ಹೆದರಿಸಿದರು. ಆದರೆ, ನಂತರ ಸಿನಿಮಾ ನಿರ್ವಿುಸಲು ಒಪ್ಪಿಕೊಂಡರು. ಇದೊಂದು ತ್ರಿಕೋನ ಪ್ರೇಮಕಥೆ. ಮರ್ಡರ್ ಮಿಸ್ಟರಿ ಸಹ ಇದೆ. ಆರು ವರ್ಷಗಳ ಹಿಂದೆ ಮಾಡಿಕೊಂಡ ಕಥೆ, ಈಗ ಸಿನಿಮಾ ಆಗಿ ಹೊರಬಂದಿದೆ. ಈ ಮೂಲಕ ಕನಸು ನನಸಾಗಿದೆ’ ಎಂದರು.
ಇನ್ನು, ತಮ್ಮ ಪಾತ್ರದ ಬಗ್ಗೆ ಮಾತನಾಡುವ ಚಿತ್ರದ ನಾಯಕ ನಿರೂಪ್ ಭಂಡಾರಿ, ‘ಈ ಚಿತ್ರದಲ್ಲಿ ನನ್ನ ಲುಕ್ಗೆ ಕಾರಣ ಸುದೀಪ್. ಅವರು ನನಗೆ ಯಾವಾಗಲೂ ಅಣ್ಣನಂತೆ ಬೆಂಬಲವಾಗಿ ನಿಂತಿದ್ದಾರೆ’ ಎಂದು ಹೇಳಿದರು. ‘ವಿಂಡೋ ಸೀಟ್’ನಲ್ಲಿ ನಿರೂಪ್ಗೆ ನಾಯಕಿಯರಾಗಿ ಸಂಜನಾ ಆನಂದ್ ಮತ್ತು ಅಮೃತಾ ಅಯ್ಯಂಗಾರ್ ನಟಿಸಿದ್ದಾರೆ. ರವಿಶಂಕರ್, ಮಧುಸೂಧನ್ ರಾವ್, ಲೇಖಾ ನಾಯ್ಡು, ‘ಕಾಮಿಡಿ ಕಿಲಾಡಿ’ ಸೂರಜ್ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ವಿಘ್ನೇಶ್ ರಾಜ್ ಛಾಯಾಗ್ರಹಣ ಇದೆ. ಸಿನಿಮಾ ಜುಲೈ 01ರಂದು ಬಿಡುಗಡೆ ಆಗಲಿದೆ.
ಹೆಣ್ಮಕ್ಳೂ ಸ್ಟ್ರಾಂಗು ಅನ್ನೋದಕ್ಕೆ ಈಕೆ ‘ಸಾಕ್ಷಿ’: ಏಕಾಂಗಿಯಾಗಿ ಬೈಕ್ನಲ್ಲಿ ಜಮ್ಮು-ಕಾಶ್ಮೀರಕ್ಕೆ ಹೋಗಿಬಂದ ವಿದ್ಯಾರ್ಥಿನಿ..