More

    ರವಿಚಂದ್ರನ್​ ಮನೇಲಿ ತಡರಾತ್ರಿವರೆಗೂ ನಡೆದ ಸುದೀಪ್​-ಕುಮಾರ್ ಸಂಧಾನ ಸಭೆ ಯಶಸ್ವಿಯಾಯ್ತಾ​? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

    ಬೆಂಗಳೂರು: ನಟ ಕಿಚ್ಚ ಸುದೀಪ್​ ಮತ್ತು ನಿರ್ಮಾಪಕ ಎಂ.ಎನ್​. ಕುಮಾರ್​ ನಡುವೆ ಕಾಲ್​ಶೀಟ್​ ವಿಚಾರವಾಗಿ ಹಲವು ವಾರಗಳಿಂದ ನಡೆಯುತ್ತಿರುವ ಜಟಾಪಟಿಗೆ ತಾರ್ಕಿಕ ಅಂತ್ಯ ನೀಡಲು ಚಿತ್ರರಂಗದ ಹಿರಿಯರಾದ ಕ್ರೇಜಿಸ್ಟಾರ್​ ರವಿಚಂದ್ರನ್​ ಮತ್ತು ಹ್ಯಾಟ್ರಿಕ್​ ಶಿವರಾಜ್​ಕುಮಾರ್​ ನೇತೃತ್ವದಲ್ಲಿ ನಿನ್ನೆ ತಡರಾತ್ರಿಯವರೆಗೂ ಸಂಧಾನ ಸಭೆ ನಡೆದಿದೆ. ಈ ಸಂಧಾನ ಸಭೆಯಲ್ಲಿ ಯಾರು ಯಾರು ಇದ್ದರು? ಏನು ತೀರ್ಮಾನ ಆಗಿದೆ? ಸಂಧಾನ ಸಭೆ ಯಶಸ್ವಿ ಆಯಿತಾ? ಮುಂತಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

    ನಿನ್ನೆ ಮಧ್ಯಾಹ್ನ ರವಿಚಂದ್ರನ್​ ಅವರ ಹೊಸಕೆರೆಹಳ್ಳಿ ನಿವಾಸದಲ್ಲಿ ಆರಂಭವಾದ ಸಂಧಾನ ಸಭೆ ತಡರಾತ್ರಿಯವರೆಗೂ ನಡೆದಿದೆ. ರವಿಚಂದ್ರನ್​ ಮತ್ತು ಶಿವಣ್ಣ ಮಾತಿಗೆ ಗೌರವ ನೀಡಿ ನಟ ಕಿಚ್ಚ ಸುದೀಪ್​ ಕೂಡ ಸಂಧಾನ ಸಭೆಯಲ್ಲಿ ಪಾಲ್ಗೊಂಡಿದ್ದರು. ಉಳಿದಂತೆ ಎಂ.ಎನ್​. ಕುಮಾರ್​, ಎಂ. ಎನ್. ಸುರೇಶ್​, ರಾಕ್​ಲೈನ್​ ವೆಂಕಟೇಶ್​, ಚಲನಚಿತ್ರಣ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾಮಾ ಹರೀಶ್​ ಸೇರಿದಂತೆ ಚಿತ್ರರಂಗದ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು.

    ಇದನ್ನೂ ಓದಿ: ರಾಜ್ಯ ಸರ್ಕಾರ ತಾತ್ಸಾರ, ಜನರ ಬದುಕು ದುರ್ಬರ: ಮಾಜಿ ಸಿಎಂ ಬೊಮ್ಮಾಯಿ ಕಿಡಿ; ಎರಡನೇ ದಿನವೂ ಕಲಾಪ ಬಹಿಷ್ಕಾರ, ಧರಣಿ

    ಇನ್ನೂ ಬಗೆಹರಿದಿಲ್ಲ

    ಈ ವಿವಾದವನ್ನು ಕೊರ್ಟಿನ ಹೊರಗೆ ಇತ್ಯರ್ಥ ಮಾಡಿಸಲು ಎಂ.ಎನ್​.ಕುಮಾರ್​ ಮನವಿ ಮಾಡಿದ ಹಿನ್ನೆಲೆಯಲ್ಲಿ ಸಂಧಾನ ಸಭೆ ನಡೆಯುತ್ತಿದ್ದು, ಇಬ್ಬರ ನಡುವಿನ ಜಟಾಪಟಿ ಇನ್ನು ಕ್ಲೈಮ್ಯಾಕ್ಸ್​ ಹಂತಕ್ಕೆ ತಲುಪಿಲ್ಲ ಎಂದು ತಿಳಿದುಬಂದಿದೆ. ನಿನ್ನೆ ತಡರಾತ್ರಿ 3 ರಿಂದ 4 ಗಂಟೆವರೆಗೂ ಚರ್ಚೆ ನಡೆದಿದೆ. ಸದ್ಯ ಇಬ್ಬರ ವಾದ-ವಿವಾದ ಮುಂದುವರೆದಿದ್ದು, ಸಮಸ್ಯೆ ಇನ್ನು ಬಗೆ ಹರೆದಿಲ್ಲ ಎಂದು ಮೂಲಗಳು ತಿಳಿಸಿವೆ.

    ಚರ್ಚೆ ಮುಂದುವರಿಯಲಿದೆ

    ಇಬ್ಬರ ಹೇಳಿಕೆಯನ್ನು ಪರಿಶೀಲಿಸುತ್ತಿರುವ ರವಿಚಂದ್ರನ್ ಹಾಗೂ ಶಿವಣ್ಣ ಸೇರಿದಂತೆ ಇತರರು ಗೊಂದಲದಲ್ಲಿದ್ದಾರಂತೆ. ಸದ್ಯಕ್ಕೆ ನಿನ್ನೆಯ ಸಂಧಾನ ಸಭೆ ಮುಕ್ತಾಯಗೊಂಡಿದ್ದು, ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಮತ್ತೊಮ್ಮೆ ಈ ಚರ್ಚೆ ಮುಂದುವರೆಯಲಿದೆ ಎಂದು ಬಲ್ಲ ಮೂಲಗಳು ಹೇಳಿವೆ. ಶಿವಣ್ಣ ಹಾಗೂ ರವಿಚಂದ್ರನ್​ ನಾಯಕತ್ವದ್ಲಲೇ ಈ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

    ಎಂ.ಎನ್​. ಕುಮಾರ್ ಆರೋಪವೇನು?​

    ಕಿಚ್ಚನ ಜತೆ ಮಾಣಿಕ್ಯ, ಮುಕುಂದ ಮುರಾರಿ ಸಿನಿಮಾ ಸೇರಿದಂತೆ ಹಲವು ಹಿಟ್​ ಸಿನಿಮಾಗಳನ್ನು ನೀಡಿರುವ ನಿರ್ಮಾಪಕ ಎಂ.ಎನ್​. ಕುಮಾರ್​ ಎರಡು ವಾರದ ಹಿಂದೆ ಇದ್ದಕ್ಕಿದ್ದಂತೆ ಸುದ್ದಿಗೋಷ್ಠಿ ನಡೆಸಿ ಸುದೀಪ್​ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ. ಸಿನಿಮಾಗೆ ಅಡ್ವಾನ್ಸ್​ ಪಡೆದು ಸಿನಿಮಾ ಮಾಡಿಕೊಡದೇ ಸತಾಯಿಸುತ್ತಿದ್ದಾರೆ. ಎಷ್ಟೇ ಬಾರಿ ಮನೆಗೆ ಹೋದರು ನಮಗೆ ಸ್ಪಂದಿಸುತ್ತಿಲ್ಲ. ಅವರಿಂದ ಸಾಕಷ್ಟು ಹಣ ನಷ್ಟವಾಗಿದೆ. ಮನೆಯ ಅಡುಗೆ ಕೋಣೆ ರಿಪೇರಿಗೆಂದು 10 ಕೋಟಿ ರೂ. ಹಣ ನೀಡಿದ್ದೇನೆ. ಅದ್ಯಾವುದನ್ನು ನೀಡದೆ, ಸಿನಿಮಾ ಮಾಡಿಕೊಡದೆ ಸುದೀಪ್​ ಸತಾಯಿಸುತ್ತಿದ್ದಾರೆ ಎಂದು ವಾಣಿಜ್ಯ ಮಂಡಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕುಮಾರ್​ ಆರೋಪಗಳ ಸುರಿಮಳೆಗೈದರು.

    ಮಾನನಷ್ಟ ಮೊಕದ್ದಮ್ಮೆ

    ಈ ಆರೋಪಗಳ ಬೆನ್ನಲ್ಲೇ ಸುದೀಪ್​​ ಟ್ವೀಟ್​ ಮೂಲಕ ನಯವಾಗಿಯೇ ಎಚ್ಚರಿಕೆ ನೀಡಿದ್ದರು. ಅಲ್ಲದೆ, ವಾಣಿಜ್ಯ ಮಂಡಳಿಗೆ ಸುದೀರ್ಘ ಪತ್ರ ಬರೆದು, ದಾಖಲೆಗಳಿಲ್ಲದೆ ಆರೋಪ ಮಾಡುವುದು ಸರಿಯಲ್ಲ, ಈ ಪ್ರಕರಣ ಕೋರ್ಟ್​ನಲ್ಲೇ ಇತ್ಯರ್ಥವಾಗಲಿ ಎಂದು ಹೇಳಿ ನಿರ್ಮಾಪಕ ಎಂ.ಎನ್​. ಕುಮಾರ್​ ವಿರುದ್ಧ ನ್ಯಾಯಾಲಯದಲ್ಲಿ 10 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮ್ಮೆಯನ್ನು ಸುದೀಪ್​ ಹೂಡಿದ್ದಾರೆ.

    ಇದನ್ನೂ ಓದಿ: ಲೋಕಸಭೆ ಚುನಾವಣೆ ತಯಾರಿಗೆ ಕೈಹಾಕಿದ ಕಾಂಗ್ರೆಸ್: 28 ಕ್ಷೇತ್ರಗಳ ಚಿತ್ರಣ ಪಡೆಯಲು ಜವಾಬ್ದಾರಿ ಹಂಚಿಕೆ

    ವಾಣಿಜ್ಯ ಮಂಡಳಿಯಲ್ಲೇ ಇತ್ಯರ್ಥಕ್ಕೆ ಪಟ್ಟು

    ಯಾವಾಗ ಸುದೀಪ್​ ಕೋರ್ಟ್​ ಮೆಟ್ಟಿಲೇರಿದರೂ ತನ್ನ ವರಸೆ ಬದಲಿಸಿದ ನಿರ್ಮಾಪಕ ಎಂ.ಎನ್​. ಕುಮಾರ್​, ಸಂಧಾನದ ಮೂಲಕವೇ ಸಮಸ್ಯೆ ಬಗೆಹರಿಸುವಂತೆ ಪಟ್ಟು ಹಿಡಿದರು. ಅಲ್ಲದೆ, ವಾಣಿಜ್ಯ ಮಂಡಳಿಯಲ್ಲೇ ಧರಣಿ ಕುಳಿತರು. ಕೆಲ ನಿರ್ಮಾಪಕರು ಕೂಡ ಅವರಿಗೆ ಸಾಥ್​ ನೀಡಿದರು. ಕೊನೆಗೆ ಈ ಪ್ರಕರಣಕ್ಕೆ ರವಿಚಂದ್ರನ್​ ಮತ್ತು ಶಿವಣ್ಣ ಎಂಟ್ರಿಯಾಗಿದ್ದು, ಇದೀಗ ಸಂಧಾನ ಸಭೆಯ ಹಂತಕ್ಕೆ ಬಂದಿದೆ. ಈ ಪ್ರಕರಣ ಯಾವ ತೀರ್ಮಾನದೊಂದಿಗೆ ತಾರ್ಕಿಕ ಅಂತ್ಯ ಕಾಣುತ್ತೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

    ಕಿಚ್ಚ 46 ಬಳಿಕ ಶುರು

    ಅಂದಹಾಗೆ ಇಷ್ಟು ದಿನ ಸುಮ್ಮನಿದ್ದ ಕುಮಾರ್​ ಅವರು ದಿಢೀರನೇ ಸುದ್ದಿಗೋಷ್ಠಿ ನಡೆಸಿ ಆರೋಪ ಮಾಡಿದ್ದೇಕೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ನಿಮಗೆ ಗೊತ್ತಿರಹುದು. ಜುಲೈ 2ರಂದು ಕಿಚ್ಚನ 46ನೇ ಸಿನಿಮಾದ ಟೀಸರ್​ ಬಿಡುಗಡೆಯಾಯಿತು. ಈ ಟೀಸರ್​ ಎಲ್ಲೆಡೆ ಭಾರೀ ಸದ್ದು ಮಾಡಿತು. ಆದರೆ, ಈ ಸಿನಿಮಾ ನಿರ್ಮಿಸುತ್ತಿರುವುದು ಕನ್ನಡದ ನಿರ್ಮಾಪಕರಲ್ಲ. ಬದಲಿಗೆ ತಮಿಳಿನ ಖ್ಯಾತ ನಿರ್ಮಾಪಕ ಕಲೈಪುಲಿ ತನು. ತಮಿಳು ನಿರ್ಮಾಪಕರಿಗೆ ಸುದೀಪ್​ ಡೇಟ್​ ಕೊಟ್ಟಿರುವುದರಿಂದ ಕನ್ನಡದ ಕೆಲ ನಿರ್ಮಾಪಕರಲ್ಲಿ ಅಸಮಾಧಾನ ಭುಗಿಲೆದ್ದಿರಬಹುದು ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸುದೀಪ್​ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡುತ್ತಿದ್ದಾರೆ ಎಂಬ ವಾದವಿದೆ. ಈ ಪ್ರಕರಣ ಎಲ್ಲಿ ಹೋಗಿ ನಿಲ್ಲುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. (ದಿಗ್ವಿಜಯ ನ್ಯೂಸ್​)

    ಕಾನೂನು ಹೋರಾಟಕ್ಕೆ ಸುದೀಪ್ ಸಜ್ಜು: ಸಂಧಾನಕ್ಕೆ ಒಪ್ಪದ ಕಿಚ್ಚ ಕೋರ್ಟ್​ ಮೆಟ್ಟಿಲೇರಲು ಇದೇ ಕಾರಣ!

    ಇಬ್ಬರು ಹೆಣ್ಣುಮಕ್ಕಳ ಜತೆ ಬಾವಿಗೆ ಹಾರಿದ ತಾಯಿ: ಓರ್ವ ಬಾಲಕಿ ಪಾರು, ಚಿಕ್ಕಬಳ್ಳಾಪುರದಲ್ಲಿ ಕರುಣಾಜನಕ ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts