More

    ಜಿಮ್​ ಟ್ರೇನರ್​ಗೆ ಪ್ರಭಾಸ್​ ನೀಡಿದರು ವಿಶೇಷ ಉಡುಗೊರೆ

    ಪ್ಯಾನ್​ ಇಂಡಿಯಾ ಹೀರೋ ಪಟ್ಟ ಗಿಟ್ಟಿಸಿಕೊಂಡಿರುವ ನಟ ಪ್ರಭಾಸ್​, ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಒಂದಾದ ನಂತರ ಒಂದು ಸಿನಿಮಾ ಘೋಷಣೆ ಮಾಡಿಕೊಳ್ಳುತ್ತಿದ್ದಾರೆ. ಜತೆಗೆ ಚಿತ್ರಗಳಿಗಾಗಿ ತಯಾರಿಯೂ ಜೋರಾಗಿಯೇ ನಡೆದಿದೆ. ಹೀಗಿರುವಾಗಲೇ ಮತ್ತೊಂದು ವಿಚಾರಕ್ಕೆ ಪ್ರಭಾಸ್ ಸುದ್ದಿಯಾಗಿದ್ದಾರೆ.

    ಇದನ್ನೂ ಓದಿ: ‘ಮಾದಕ’ ನಟಿ ರಾಗಿಣಿ ಮತ್ತೆ 5 ದಿನ ಸಿಸಿಬಿ ವಶಕ್ಕೆ

    ಹೌದು, ಪ್ರಭಾಸ್​ ತಮ್ಮ ಜಿಮ್ ಟ್ರೇನರ್​ಗೆ ವಿಶೇಷವಾದ ಗಿಫ್ಟ್​ ನೀಡಿದ್ದಾರೆ. ಆ ಉಡುಗೊರೆಯೇ ಈಗ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಬರೋಬ್ಬರಿ 73ಲಕ್ಷ ಮೌಲ್ಯದ ರೇಂಜ್​ ರೋವರ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಇದನ್ನೂ ಓದಿ: ಓಪನ್ ಏರ್ ಥಿಯೇಟರ್ ಪಾರ್ಟಿಯಲ್ಲೂ ಡ್ರಗ್ಸ್ ನಶೆ!

    ಜಿಮ್​ ಟ್ರೇನರ್​ ಲಕ್ಷ್ಮಣ್​ ರೆಡ್ಡಿ 2010ರಲ್ಲಿ ಮಿಸ್ಟರ್ ವರ್ಲ್ಡ್​ ಪಟ್ಟ ಗಿಟ್ಟಿಸಿಕೊಂಡಿದ್ದರು. ಅದಾದ ಬಳಿಕ ಪ್ರೊಫೆಷನಲ್​ ಜಿಮ್​ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಟಾಲಿವುಡ್​ನ ಸಾಕಷ್ಟು ಸೆಲೆಬ್ರಿಟಿಗಳು ಇವರ ಬಳಿ ತರಬೇತಿ ಪಡೆದುಕೊಂಡಿದ್ದಾರೆ. ಸದ್ಯ ಪ್ರಭಾಸ್​ ತಮ್ಮ ಮುಂದಿನ ಸಿನಿಮಾಗಳಿಗಾಗಿ ಅವರ ಕೆಳಗೆ ತರಬೇತಿ ಪಡೆಯುತ್ತಿದ್ದಾರೆ. (ಏಜೆನ್ಸೀಸ್​)

    ‘ತುಪ್ಪ’ದ ಬೆಡಗಿ ರಾಗಿಣಿ ಮತ್ತೆ ಪೊಲೀಸ್​ ಕಸ್ಟಡಿಗೆ ಹೋಗಲು ಆ 7 ಕಾರಣ ಇಲ್ಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts