More

    ಬಿಜೆಪಿ ಜತೆ ಕೈಜೋಡಿಸಿದ ನಟ ಪವನ್​ ಕಲ್ಯಾಣ್; ಈ ಮೈತ್ರಿಗೆ ಕಾರಣವೇನು?

    ಹೈದರಾಬಾದ್: ಇನ್ನೇನು ಕೆಲವೇ ದಿನಗಳಲ್ಲಿ ತೆಲಂಗಾಣದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಯೊಂದು ನಡೆದಿದೆ. ಅರ್ಥಾತ್, ತೆಲಂಗಾಣ ಬಿಜೆಪಿ ಜತೆ ನಟ ಪವನ್ ಕಲ್ಯಾಣ್ ಕೈಜೋಡಿಸಿದ್ದಾರೆ.

    ತಾವು ಬಿಜೆಪಿ ಜತೆ ಕೈಜೋಡಿಸಿದ್ದಾಗಿ ಇಲ್ಲಿನ ಜನಸೇನಾ ಪಕ್ಷದ ಮುಖ್ಯಸ್ಥ, ನಟ ಪವನ್ ಕಲ್ಯಾಣ್ ಘೋಷಣೆ ಮಾಡಿದ್ದು, ಅದಕ್ಕೆ ಅವರು ಸೂಕ್ತ ಕಾರಣವೊಂದು ಇರುವುದಾಗಿಯೂ ತಿಳಿಸಿದ್ದಾರೆ. ಅಂದರೆ, ತೆಲಂಗಾಣದಲ್ಲಿ ಹಿಂದುಳಿದ ವರ್ಗದವರು ಮುಖ್ಯಮಂತ್ರಿ ಆಗಬೇಕು ಎಂಬ ಆಶಯದಿಂದ ಬಿಜೆಪಿ ಜತೆ ಕೈಜೋಡಿಸಿದ್ದಾಗಿ ಅವರು ತಿಳಿಸಿದ್ದಾರೆ.

    ಈ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಮತ ಹಾಕಿ ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಂತೆ ಮಾಡಿದರೆ ಹಿಂದುಳಿದ ವರ್ಗದ ವ್ಯಕ್ತಿಯನ್ನೇ ಮುಖ್ಯಮಂತ್ರಿ ಮಾಡಲಾಗುವುದು. ಒಬಿಸಿ ವರ್ಗದವರನ್ನು ರಾಜಕೀಯವಾಗಿ ಸಬಲಗೊಳಿಸುವುದೇನಿದ್ದರೂ ಬಿಜೆಪಿ ಮಾತ್ರ ಎಂದೂ ಪ್ರಧಾನಿ ಮೋದಿ ಇತ್ತೀಚೆಗೆ ಇಲ್ಲಿ ಹೇಳಿದ್ದನ್ನು ಸ್ಮರಿಸಿಕೊಳ್ಳಬಹುದು.

    ಇದನ್ನೂ ಓದಿ: ಜಾತಿಮುಕ್ತ ಸಿದ್ಧಾಂತ ಪತಂಜಲಿ ಆದ್ಯತೆ; ಜಾತಿಮುಕ್ತ ಸಮಾಜ ಸನಾತನ ಸಂಸ್ಕೃತಿಯ ಬಯಕೆ

    ಎರಡು ವಾರಗಳ ಹಿಂದೆ ಹೈದರಾಬಾದ್​ನ ಎಲ್​.ಬಿ.ಸ್ಟೇಡಿಯಮ್​ಲ್ಲಿ ನಡೆದ ‘ಒಬಿಸಿ ಆತ್ಮಗೌರವ ಸಭೆ’ ಎಂಬ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, 2013ರಲ್ಲಿ ದೇಶದ ಮೊದಲ ಒಬಿಸಿ ಪ್ರಧಾನಿಯನ್ನಾಗಿಸುವ ನಿಟ್ಟಿನಲ್ಲಿ ಇಲ್ಲೇ ಬುನಾದಿ ಹಾಕಲಾಗಿತ್ತು ಎಂದು ಸ್ಮರಿಸಿಕೊಂಡಿದ್ದರು. ಇದಾಗಿ ಕೆಲವೇ ದಿನಗಳಲ್ಲಿ ಪವನ್​ ಕಲ್ಯಾಣ್ ಬಿಜೆಪಿ ಜತೆ ಕೈಜೋಡಿಸಿರುವುದು ಇಲ್ಲಿ ಗಮನಾರ್ಹ.

    ಇದನ್ನೂ ಓದಿ: ಅಧಿಕಾರಕ್ಕೆ ಬಂದರೆ ಒಬಿಸಿಯವರಿಗೇ ಸಿಎಂ ಪಟ್ಟ: ಪ್ರಧಾನಿ ಮೋದಿ ಭರವಸೆ

    ಇಂದು ಹನಮಕೊಂಡದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಬಿಜೆಪಿ-ಜೆಎಸ್​ಪಿ ಅಭ್ಯರ್ಥಿಗಳ ಅಭಿಯಾನಕ್ಕೆ ಚಾಲನೆ ನೀಡಿದ ಪವನ್​ ಕಲ್ಯಾಣ್ ಬಿಜೆಪಿ ಜತೆ ಕೈಜೋಡಿಸುತ್ತಿರುವ ಕುರಿತು ಹೇಳಿದ್ದಾರೆ. ನ. 30ರಂದು ತೆಲಂಗಾಣದ 119 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

    ಭಾರಿ ಹೆಬ್ಬಾವನ್ನೇ ಹಿಡಿದ ‘ಮಗಧೀರ’; ವಿಡಿಯೋ ವೈರಲ್, ಜನರಿಂದ ಮೆಚ್ಚುಗೆಯ ಮಹಾಪೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts