More

    ಕಾಶಿಯ ಗಂಗೆಯಲ್ಲಿ ಕರೊನಾ ಮೃತರ ಅಸ್ಥಿ ವಿಸರ್ಜನೆ; ನಟ ಅರ್ಜುನ್ ಗೌಡ ಅವರಿಂದ ಮತ್ತೊಂದು ಮೆಚ್ಚುವ ಕಾರ್ಯ

    ಬೆಂಗಳೂರು: ಕರೊನಾ ಎರಡನೇ ಅಲೆಯ ಕರಾಳತೆ ಘೋರವಾಗುತ್ತಿದ್ದಂತೆ ಜನರ ಪ್ರಾಣ ಉಳಿಸಲು ಆಂಬ್ಯುಲೆನ್ಸ್ ಮೂಲಕ ರಸ್ತೆಗಿಳಿದಿದ್ದ ನಟ ಅರ್ಜುನ್ ಗೌಡ, ಇದೀಗ ಕಾಶಿಯಲ್ಲಿ ಬೀಡು ಬಿಟ್ಟಿದ್ದಾರೆ. ಅಂದರೆ, ಕಳೆದ ಎರಡು ತಿಂಗಳ ಅವಧಿಯಲ್ಲಿ ನೂರಾರು ಶವಗಳನ್ನು ಚಿತಾಗಾರ ತಲುಪಿಸಿ, ಅವುಗಳ ಅಂತ್ಯಸಂಸ್ಕಾರವನ್ನೂ ಮಾಡಿದ್ದ ಅರ್ಜುನ್ ಗೌಡ, ಹಾಗೆ ಅಂತ್ಯಸಂಸ್ಕಾರವಾದ ಶವಗಳ ಅಸ್ಥಿಗಳ ವಿಸರ್ಜನೆ ಕಾರ್ಯವನ್ನೂ ಮಾಡಿ ಮುಗಿಸಿದ್ದಾರೆ.

    ಕಾಶಿಯ ಗಂಗೆಯಲ್ಲಿ ಕರೊನಾ ಮೃತರ ಅಸ್ಥಿ ವಿಸರ್ಜನೆ; ನಟ ಅರ್ಜುನ್ ಗೌಡ ಅವರಿಂದ ಮತ್ತೊಂದು ಮೆಚ್ಚುವ ಕಾರ್ಯಇದನ್ನೂ ಓದಿ: ವಿಶ್ವನಾಥನ್​ ಆನಂದ್​ ಜತೆ ಕಿಚ್ಚನ ಚೆಸ್​

    ಕಾಶಿಗೆ ತೆರಳಿ ಅಲ್ಲಿನ ಪವಿತ್ರ ಗಂಗಾ ನದಿಯಲ್ಲಿ 90ಕ್ಕೂ ಹೆಚ್ಚು ಶವಗಳ ಅಸ್ಥಿಯನ್ನು ವಿಸರ್ಜಿಸಿದ್ದಾರೆ. ಅಂದಹಾಗೆ, ಕರೊನಾ ಸೋಂಕಿನಿಂದ ಮೃತರಾದಾಗ ಶವ ಪಡೆಯಲು ಎಷ್ಟೋ ಜನ ನಿರಾಕರಿಸಿದ್ದರು. ಆಗ ಆ ಮೃತ ದೇಹಗಳ ಅಂತ್ಯ ಸಂಸ್ಕಾರವನ್ನು ಸ್ವತಃ ಮುಂದೆ ನಿಂತು ನೆರವೇರಿಸಿದ್ದರು ಅರ್ಜುನ್ ಗೌಡ. ಇದೀಗ ಆ ಎಲ್ಲ ಅಸ್ಥಿಯನ್ನು ವಿಸರ್ಜಿಸಿದ್ದಾರೆ.

    ಇದನ್ನೂ ಓದಿ: ದೂರ ಸರಿದ ಧ್ರುವ ದುಬಾರಿ

    ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕರೊನಾ ಸ್ಥಿತಿ ಬಿಗಡಾಯಿಸಿತ್ತು. ಬೆಂಗಳೂರಿನಲ್ಲಿ ಸಾವಿನ ಸಂಖ್ಯೆಯ ಜತೆಗೆ ಸೋಂಕಿತರ ಸಂಖ್ಯೆಯೂ ಹೆಚ್ಚಾಗಿತ್ತು. ಅಂಥ ಒಂದು ವಿಷಮ ಸ್ಥಿತಿಯಲ್ಲಿ ಆ್ಯಂಬುಲೆನ್ಸ್ ಮೂಲಕ ರಸ್ತೆಗಿಳಿದ ನಟ ಅರ್ಜುನ್ ಗೌಡ, ಸಾವಿರಾರು ಮಂದಿಯನ್ನು ಆಸ್ಪತ್ರೆಗೆ ದಾಖಲಿಸುವ ಕೆಲಸ ಮಾಡಿದ್ದರು. ಇದಕ್ಕಾಗಿ ಒಂದಷ್ಟು ತಿಂಗಳು ಮನೆಯನ್ನೇ ಬಿಟ್ಟು, ಸ್ನೇಹಿತನ ಪ್ರತ್ಯೇಕ ಮನೆಯಲ್ಲಿ ಉಳಿದಿದ್ದರು.

    ಕಾಶಿಯ ಗಂಗೆಯಲ್ಲಿ ಕರೊನಾ ಮೃತರ ಅಸ್ಥಿ ವಿಸರ್ಜನೆ; ನಟ ಅರ್ಜುನ್ ಗೌಡ ಅವರಿಂದ ಮತ್ತೊಂದು ಮೆಚ್ಚುವ ಕಾರ್ಯ

    ಅಂದಹಾಗೆ ಕನ್ನಡದಲ್ಲಿ ಈಗಾಗಲೇ ‘ರುಸ್ತು’, ‘ಒಡೆಯ’, ‘ಆ ದೃಶ್ಯ’, ‘ಏಕ್‌ಲವ್ ಯಾ’, ‘ಯುವರತ್ನ’ ಸಿನಿಮಾಗಳಲ್ಲಿ ನಟಿಸಿರುವ ಅರ್ಜುನ್, ಫಿಟ್‌ನೆಸ್ ಮೂಲಕವೇ ಗುರುತಿಸಿಕೊಂಡವರು. ಮುಂದಿನ ದಿನಗಳಲ್ಲಿಯೂ ತಮ್ಮ ಕೈಲಾದ ಸೇವೆಯನ್ನು ಮುಂದುವರಿಸುವುದಾಗಿ ಅರ್ಜುನ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts