More

    ಖ್ಯಾತ ನಟ ಹಾಗೂ ನಿರ್ದೇಶಕ ಪ್ರತಾಪ್​ ಪೋಥೆನ್​ ನಿಗೂಢ ಸಾವು: ಅಪಾರ್ಟ್​​ಮೆಂಟ್​ನಲ್ಲಿ ಶವವಾಗಿ ಪತ್ತೆ!

    ಚೆನ್ನೈ: ಖ್ಯಾತ ನಟ ಹಾಗೂ ನಿರ್ದೇಶಕರಾಗಿದ್ದ ಪ್ರತಾಪ್​ ಪೋಥೆನ್​​ ಶುಕ್ರವಾರ ಚೆನ್ನೈನ ತಮ್ಮ ಅಪಾರ್ಟ್​ಮೆಂಟ್​ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 69ವರ್ಷದ ಪೋಥೆನ್​​ ಮಲಯಾಳಂ ಸೇರಿದಂತೆ ತಮಿಳು, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ.

    ಎಂದಿನಂತೆ ಮನೆ ಕೆಲಸ ಮಾಡಲು ಕೆಲಸದವರು ಬಂದಾಗ ಪ್ರತಾಪ್​ ಪೋಥೆನ್​ ಅವರ ಮೃತ ದೇಹವನ್ನು ಬೆಡ್​​ರೂಮ್​ನಲ್ಲಿ ಕಂಡು, ತಕ್ಷಣವೇ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ.

    100ಕ್ಕೂ ಹೆಚ್ಚು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದು, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿ ಒಟ್ಟು 12 ಸಿನಿಮಾಗಳನ್ನು ಸಹ ನಿರ್ದೇಶಿಸಿದ್ದಾರೆ. 1979ರಲ್ಲಿ ಆರವ್​ ಸಿನಿಮಾ ಮೂಲಕ ಪ್ರತಾಪ್​ ಪೋಥೆನ್​ ಅವರನ್ನು ನಿರ್ದೇಶಕ ಭರತ್​ ಚಿತ್ರರಂಗಕ್ಕೆ ಕರೆತಂದರು. 1980ರಲ್ಲಿ ನಟಿಸಿದ್ದ ಲೋರಿ ಮತ್ತು ಚಮರಮ್​ ಸಿನಿಮಾ ಪ್ರತಾಪ್​ಗೆ ಖ್ಯಾತಿ ತಂದುಕೊಟ್ಟಿತು.

    1952ರ ಆಗಸ್ಟ್​ 13ರಂದು ಪ್ರತಾಪ್​ ಜನನವಾಯಿತು.ಮದ್ರಾಸ್​ನಲ್ಲಿ ಪ್ರತಾಪ್ ಶಿಕ್ಷಣ ಪಡೆದರು. 1985ರಲ್ಲಿ ಖ್ಯಾತ ನಟಿ ರಾಧಿಕಾ ಅವರನ್ನು ಪ್ರತಾಪ್​ ಮದುವೆಯಾಗಿದ್ದರು.1986ರಲ್ಲೇ ಈ ಜೋಡಿ ದೂರವಾಯಿತು. ನಂತರ 1990ರಲ್ಲಿ ಅಮಲಾ ಸತ್ಯನಾಥ್​ ಎಂಬುವವರನ್ನು ಪ್ರತಾಪ್​ ಮದುವೆಯಾದರು. ಈ ದಂಪತಿಗೆ ಒಬ್ಬಳು ಮಗಳಿದ್ದಾರೆ.

    ಹಲವು ಪ್ರಶಸ್ತಿಗಳನ್ನು ಪಡೆದಿರುವ ಪ್ರತಾಪ್​, 1979ರಲ್ಲೇ ಉತ್ತಮ ನಟನೆಗಾಗಿ ಫಿಲ್ಮ್​ ಫೇರ್​ ಅವಾರ್ಡ್​, ಸೈಮಾ, ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts