More

    13 ರಾಜ್ಯಗಳಲ್ಲಿ ಹೆಚ್ಚಿದ ಕರೊನಾ ಸಕ್ರಿಯ ಕೇಸ್

    ಬೆಂಗಳೂರು: ಹವಾಮಾನ ಬದಲಾವಣೆಯೊಂದಿಗೆ ದೇಶದಲ್ಲಿ ಕೋವಿಡ್ 4ನೇ ಅಲೆ ಏರುಗತಿ ಪಡೆದು ಕೊಂಡಂತಿದ್ದು, 13 ರಾಜ್ಯಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ಈ ಪೈಕಿ ಕರ್ನಾಟಕ 6,739 ಪ್ರಕರಣಗಳೊಂದಿಗೆ ಐದನೇ ಸ್ಥಾನದಲ್ಲಿದೆ.

    ಪಶ್ಚಿಮ ಬಂಗಾಳ (27,496) ಮೊದಲ ಸ್ಥಾನದಲ್ಲಿದ್ದರೆ, ಕೇರಳ (26,451) ಎರಡನೇ, ತಮಿಳುನಾಡು (18,282) ಮೂರು ಹಾಗೂ ಮಹಾರಾಷ್ಟ್ರ (16,922) ನಾಲ್ಕನೇ ಸ್ಥಾನದಲ್ಲಿದೆ. ಉಳಿದಂತೆ ತೆಲಂಗಾಣ (5,082), ಗುಜರಾತ್ (4,225), ಒಡಿಸ್ಸಾ (3,511), ಅಸ್ಸಾಂ (2,584), ಬಿಹಾರ (2,511), ಉತ್ತರ ಪ್ರದೇಶ (2,363) ಆಂಧ್ರಪ್ರದೇಶ (2,121) ಹಾಗೂ ಛತ್ತೀಸ್​ಗಢ (2,068) ಅತೀ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿರುವ ರಾಜ್ಯಗಳಾಗಿವೆ.

    ಸದ್ಯ ಕರ್ನಾಟಕದಲ್ಲಿ ಸೋಂಕಿಗೆ ಒಳಗಾದವರಲ್ಲಿ 67 ಮಂದಿ ಸಾಮಾನ್ಯವಾರ್ಡ್, ಇಬ್ಬರು ಆಕ್ಸಿಜನ್, 13 ಮಂದಿ ಐಸಿಯು ಸೇರಿ ಒಟ್ಟು 82 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಗುರುವಾರ 1,209 ಮಂದಿಗೆ ಸೋಂಕು ದೃಢಪಟ್ಟಿದೆ. ಚಿಕ್ಕಬಳ್ಳಾಪುರದ 75 ವರ್ಷದ ವೃದ್ಧ ಸೋಂಕಿಗೆ ಬಲಿಯಾಗಿದ್ದು, ಮೃತರ ಒಟ್ಟು ಸಂಖ್ಯೆ 40,084 ತಲುಪಿದೆ.

    ಮಲೆ ಮಹದೇಶ್ವರ ದೇವಸ್ಥಾನದ ಹುಂಡಿ ಎಣಿಕೆ ವೇಳೆ ಕಳ್ಳತನ; ನೌಕರನ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts