More

    ಒಬ್ಬರ ಬೆನ್ನಿಗೆ ಮತ್ತೊಬ್ಬರು ಹೋದರು…; ಗೆಳೆಯ ರಿಷಿ ಕಪೂರ್​ ಸಾವಿಗೆ ಕಂಬನಿ ಮಿಡಿದ ನಟ ಅಮಿತಾಭ್​ ಬಚ್ಚನ್​

    ನಿನ್ನೆ ಬಾಲಿವುಡ್​ನ ಖ್ಯಾತ ನಟ ಇರ್ಫಾನ್​ ಖಾನ್​ ತಮ್ಮ ಬದುಕಿನ ಪಯಣ ಮುಗಿಸಿದ್ದರು. ಅವರೂ ಕೂಡ ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಇಂದು ಇನ್ನೋರ್ವ ನಟ ರಿಷಿ ಕಪೂರ್​ ನಿಧನರಾಗಿದ್ದಾರೆ. ಹೀಗೆ ಒಬ್ಬರ ಬೆನ್ನಿಗೆ ಒಬ್ಬರಂತೆ ಹಿರಿಯ ನಟರು ಸಾವನ್ನಪ್ಪಿದ್ದು ಇಡೀ ಬಾಲಿವುಡ್​ಗೆ ಶಾಕ್​ ಆಗಿದೆ.

    ರಿಷಿ ಕಪೂರ್​ ನಿಧನಕ್ಕೆ ನಟ ಅಮಿತಾಭ್​ ಬಚ್ಚನ್​ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಅಮರ್​ ಅಕ್ಬರ್​ ಅಂಥೋನಿ, ಕೂಲಿ, ನಸೀಬ್​, ಕಭೀ ಕಭೀ ಸೇರಿ ಹಲವು ಸಿನಿಮಾಗಳಲ್ಲಿ ಅಮಿತಾಭ್​ ಮತ್ತು ರಿಷಿ ಒಟ್ಟಿಗೇ ನಟಿಸಿ, ಅಭಿಮಾನಿಗಳನ್ನು ರಂಜಿಸಿದ್ದರು.

    ರಿಷಿ ಕಪೂರ್​ಗೆ 2018ರಲ್ಲಿ ಕ್ಯಾನ್ಸರ್​ ಇರುವುದು ಪತ್ತೆಯಾಗಿತ್ತು. ಅದಾದ ಬಳಿಕ ಪತ್ನಿ ನೀತು ಕಪೂರ್​ ಜತೆ ಅಮೆರಿಕಕ್ಕೆ ತೆರಳಿ ಅಲ್ಲಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದಿದ್ದರು. ಸುಮಾರು 1 ವರ್ಷ ಅಲ್ಲಿಯೇ ಇದ್ದು ವಾಪಸ್​ ಬಂದಿದ್ದರು.

    ನಿನ್ನೆ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ರಿಷಿ ಕಪೂರ್​ ಬೆಳಗ್ಗೆಯಷ್ಟರಲ್ಲಿ ಈ ಲೋಕವನ್ನೇ ತೊರೆದಿದ್ದಾರೆ. ಪ್ರೀತಿಯ ಗೆಳೆಯನ ನಿಧನಕ್ಕೆ ಅಮಿತಾಭ್​ ಬಚ್ಚನ್​ ಟ್ವೀಟ್ ಮೂಲಕ ದುಃಖ ವ್ಯಕ್ತಪಡಿಸಿದ್ದಾರೆ. ‘ರಿಷಿ ಕಪೂರ್​ ಹೊರಟು ಹೋದರು..ಅವರು ಹೋದರು..ಈಗಷ್ಟೇ ನಿಧನರಾದರು..ನನಗೆ ಶಾಕ್​ನಿಂದ ಹೊರಬರಲಾಗುತ್ತಿಲ್ಲ..’ ಎಂದು ತುಂಬ ಭಾವನಾತ್ಮಕವಾಗಿ ಟ್ವೀಟ್ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts