More

    ಬಾಹುಬಲಿ, 3 ಈಡಿಯಟ್ಸ್​​ ಗಿಂತಲೂ ‘ಪುಷ್ಪ’ ಸಿನಿಮಾದ ಸಕ್ಸಸ್ ದೊಡ್ಡದು: ಆಮಿರ್ ಖಾನ್

    ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್​ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಐದು ಭಾಷೆಗಳಲ್ಲಿ ತೆರೆ ಕಂಡ ಈ ಸಿನಿಮಾ ಬಾಕ್ಸ್​ಆಫೀಸ್​​ನಲ್ಲಿ ಧೂಳೆಬ್ಬಿಸಿದೆ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಬಾಲಿವುಡ್ ಸ್ಟಾರ್ ಆಮಿರ್ ಖಾನ್, ಯಶಸ್ಸಿನ ವಿಚಾರದಲ್ಲಿ ‘ಪುಷ್ಪ’ ಸಿನಿಮಾ ‘3 ಈಡಿಯಟ್ಸ್​’ ಮತ್ತು ಬಾಹುಬಲಿ ಸಿನಿಮಾವನ್ನು ಹಿಂದಿಕ್ಕಿದೆ ಎಂದಿದ್ದಾರೆ.

    ಈ ಮೂಲಕ ಚಿತ್ರ ಬ್ಲಾಕ್​ಬಸ್ಟರ್​ ಹಿಟ್​ ಎನಿಸಿಕೊಂಡಿದೆ. ಈ ಸಿನಿಮಾ ಬಾಲಿವುಡ್​ನಲ್ಲೂ ಒಳ್ಳೆಯ ಕಲೆಕ್ಷನ್​ ಮಾಡಿದೆ. ಹಿಂದಿಗೆ ಡಬ್​ ಆಗಿ ತೆರೆ ಕಂಡ ಈ ಚಿತ್ರದ ಕಲೆಕ್ಷನ್​ 100 ಕೋಟಿ ರೂಪಾಯಿ ಸಮೀಪಿಸಿದೆ. ಈ ಚಿತ್ರದ ಬಗ್ಗೆ ಆಮಿರ್​ ಖಾನ್​ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಒಟ್ಟಾರೆಯಾಗಿ ಚಿತ್ರದ ಗಳಿಕೆ 300 ಕೋಟಿ ರೂಪಾಯಿ ದಾಟಿದೆ ಎನ್ನಲಾಗಿದೆ.

    ಯಶ್ v/s ಆಮೀರ್!: ಕನ್ನಡ ಸೇರಿ ಪರಭಾಷೆಯಲ್ಲಿಯೂ ನಿರೀಕ್ಷೆ ಮೂಡಿಸಿರುವ ಸಿನಿಮಾ ಎಂದರೆ ಅದು ಯಶ್ ನಟನೆಯ ‘ಕೆಜಿಎಫ್ ಚಾಪ್ಟರ್ 2’. ಈ ಸಿನಿಮಾ ಸಿದ್ಧವಾಗಿ ಒಂದು ವರ್ಷದ ಮೇಲಾಯಿತಾದರೂ, ಬಿಡುಗಡೆಗೆ ಕಾಲ ಕೂಡಿಬಂದಿರಲಿಲ್ಲ. ಮುಂದಿನ ವರ್ಷ ಏಪ್ರಿಲ್ 14ರಂದು ವಿಶ್ವದಾದ್ಯಂತ ‘ಕೆಜಿಎಫ್ 2’ ರಿಲೀಸ್ ಆಗಲಿದೆಯೆಂದು ತಂಡ ಕೆಲವು ದಿನಗಳ ಹಿಂದೆ ಅಧಿಕೃತವಾಗಿ ಘೋಷಿಸಿತ್ತು. ಈಗ ಅದೇ ದಿನ ಆಮೀರ್ ಖಾನ್ ಅಭಿನಯದ ‘ಲಾಲ್​ಸಿಂಗ್ ಛಡ್ಡಾ’ ಚಿತ್ರ ಕೂಡ ತೆರೆಗೆ ಬಿಡುಗಡೆಯಾಗುತ್ತಿದೆ. ಈ ಮೂಲಕ ಬಾಕ್ಸ್ ಆಫೀಸ್​ನಲ್ಲಿ ದೊಡ್ಡ ಕ್ಲ್ಯಾಷ್ ಏರ್ಪಡಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts