More

    ತಮಿಳು ನಟ ಅಜಿತ್ ಮನೆಗೆ ಕಿಡಿಗೇಡಿಯಿಂದ ಬಾಂಬ್ ಬೆದರಿಕೆ!

    ಚೆನ್ನೈ: ತಮಿಳುನಾಡಿನ ಸೂಪರ್​ಸ್ಟಾರ್ ತಲಾ ಅಜಿತ್​ ಮನೆಗೆ ಕಿಡಿಗೇಡಿಯೊಬ್ಬ ಬಾಂಬ್​ ಬೆದರಿಕೆ ಹಾಕಿದ್ದಾನೆ. ಸೋಮವಾರ ರಾತ್ರಿ ವೇಳೆಗೆ ಅಜಿತ್ ಅವರ ಇಂಜಾಂಬಕಂನಲ್ಲಿನ ಮನೆಗೆ ಬಾಂಬ್​ ಇಟ್ಟಿರುವುದಾಗಿ ಅನಾಮಿಕ ವ್ಯಕ್ತಿಯೊಬ್ಬ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದ. ಅದನ್ನು ಆಧರಿಸಿ ನಟನ ಮನೆಗೆ ಹೋದಾಗ ಅಲ್ಲಿ ಬಾಂಬ್​ ಇಟ್ಟಿರುವ ಬಗ್ಗೆ ನೀಡಿದ ಮಾಹಿತಿಯೇ ಸುಳ್ಳು ಎಂದು ಗೊತ್ತಾಗಿದೆ.

    ಇದನ್ನೂ ಓದಿ: ಚಿತ್ರರಂಗದವರ ಲಸಿಕೆ ಅಭಿಯಾನವನ್ನು ಉದ್ಘಾಟಿಸಿದ ಡಿಸಿಎಂ ಅಶ್ವಥನಾರಾಯಣ್

    ತಮಿಳುನಾಡಿನ ಸ್ಟಾರ್​ ನಟರ ಮನೆಗೆ ಬಾಂಬ್​ ಇಡಲಾಗಿದೆ ಎಂಬ ಮಾಹಿತಿ ಬರುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಸಾಕಷ್ಟು ಕರೆಗಳು ಚೆನ್ನೈ ಪೊಲೀಸರಿಗೆ ಬಂದಿವೆ. ಕಮಲ್ ಹಾಸನ್​ ಅವರಿಂದ ಹಿಡಿದು, ರಜನಿಕಾಂತ್ಮ ವಿಜಯ್ ಮನೆಗೂ ಬಾಂಬ್​ ಇಟ್ಟಿರುವುದಾಗಿ ಒಂದಷ್ಟು ಹುಸಿ ಕರೆಗಳು ಬಂದಿದ್ದವು. ಇದೀಗ ಅದೇ ರೀತಿ ಅಜಿತ್​ ಮನೆಗೂ ಬಂದಿದೆ. ಅಂದಹಾಗೆ, ಈ ಹಿಂದೆಯೂ ಇಂಥದ್ದೆ ಕರೆಯೊಂದು ಅಜಿತ್​ಗೆ ಬಂದಿತ್ತು.

    ಇದನ್ನೂ ಓದಿ: ಸಲ್ಮಾನ್​ ವೃತ್ತಿಜೀವನವನ್ನು ಸರ್ವನಾಶ ಮಾಡ್ತಾರಂತೆ ಕೆಆರ್​ಕೆ

    ಕರೆ ಆಧರಿಸಿ 15ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಅಜಿತ್ ಅವರ ಇಂಜಾಂಬಕಂನಲ್ಲಿನ ಮನೆ ಮತ್ತು ಸುತ್ತಲಿನ ಆವರಣವನ್ನು ಪರಿಶೀಲನೆ ನಡೆಸಿದಾಗ ಅದೆಲ್ಲ ಸುಳ್ಳು ಎಂದು ಗೊತ್ತಾಗಿದೆ. ಫೋನ್ ಕರೆ ಮಾಡಿದ ವ್ಯಕ್ತಿಯ ಕಾಲ್​ ರೆಕಾರ್ಡ್ ಟ್ರ್ಯಾಕ್​ ಮಾಡಿದರೂ ಯಾವುದೇ ಸೂಕ್ತ ಮಾಹಿತಿ ಲಭ್ಯವಾಗಿಲ್ಲ. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts