More

    ಆಲಮೇಲದಲ್ಲಿ ಶಾಂತಿ ಕದಡಲು ಮುಂದಾದರೆ ಕ್ರಮ : ಸಿಪಿಐ ರವಿ ಉಕ್ಕುಂದ ಎಚ್ಚರಿಕೆ

    ಆಲಮೇಲ: ಎಲ್ಲರೂ ಶಾಂತಿ ಸೌಹಾರ್ದದಿಂದ ಸರ್ಕಾರದ ನಿಯಮ ಪಾಲಿಸಿ ಹಬ್ಬ ಆಚರಿಸಬೇಕು ಎಂದು ಸಿಂದಗಿ ಸಿಪಿಐ ರವಿ ಉಕ್ಕುಂದ ಸಾರ್ವಜನಿಕರಲ್ಲಿ ವಿನಂತಿಸಿದರು.
    ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಗಣೇಶ ಚತುರ್ಥಿ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ, ಸಮಾಜದಲ್ಲಿ ಶಾಂತಿ ಕದಡುವ ಕಾರ್ಯಕ್ಕೆ ಮುಂದಾದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

    ಪಟ್ಟಣದ ಕೆಲವು ಬಡಾವಣೆಗಳಲ್ಲಿ ಮುಂಜಾಗ್ರತೆ ಕ್ರಮವಾಗಿ ಪಪಂ ವತಿಯಿಂದ ಸಿಸಿ ಕ್ಯಾಮರಾ ಅಳವಡಿಸಲಾಗುತ್ತಿದೆ. ಇದರ ಜತೆ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ಮೇಲೆ ಇಲಾಖೆ ಹದ್ದಿನಕಣ್ಣಿಟ್ಟು ಸೂಕ್ತ ಬಂದೋಬಸ್ತ್ ಒದಗಿಸಲಾಗುವುದು ಎಂದರು.

    ಪಪಂ ಮುಖ್ಯಾಧಿಕಾರಿ ಅಭಿಷೇಕ ಪಾಂಡೆ ಮಾತನಾಡಿ ಗಣೇಶ ಪ್ರತಿಷ್ಠಾಪನೆಗೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಪರವಾನಗಿ ಪಡೆಯದಿದ್ದರೆ ಪ್ರತಿಷ್ಠಾಪನೆಗೆ ಅವಕಾಶ ನೀಡುವುದಿಲ್ಲ ಎಂದರು.

    ಆಲಮೇಲ ತಹಸೀಲ್ದಾರ್ ಸುರೇಶ ಚಾವಲರ್ ಮಾತನಾಡಿ, ಎಲ್ಲರೂ ಹಬ್ಬದಲ್ಲಿ ಕರೊನಾ ನಿಯಮ ಪಾಲಿಸುವ ಜತೆಗೆ ಪರಿಸರ ಸ್ನೇಹಿ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕು ಎಂದರು.
    ದೇವರಗುಡ್ಡದ ಒಡೆಯರಾದ ಡಾ.ಸಂದೀಪ ಪಾಟೀಲ ಸಾನ್ನಿಧ್ಯ ವಹಿಸಿದ್ದರು. ಪಿಎಸೈ ಅಜೀತಕುಮಾರ ಹೊಸಮನಿ, ಹೆಸ್ಕಾಂ ಶಾಖಾಧಿಕಾರಿ ಬಸವರಾಜ ಮಣ್ಣೂರ, ರಮೇಶ ಭಂಟನೂರ, ಅಯೂಬ ದೇವರಮನಿ, ಶ್ರೀಶೈಲ ಮಠಪತಿ, ಹಣಮಂತ ಹೂಗಾರ, ಶಿವಾನಂದ ಜಗತಿ, ಬಸವರಾಜ ತೆಲ್ಲೂರ, ಜೈಭೀಮ ನಾಯ್ಕೋಡಿ, ಹರೀಶ ಯಂಟಮಾನ, ದಯಾನಂದ ನಾರಾಯಣಕರ, ಹಸನಸಾಬ ಮುಲ್ಲಾ, ಶಶಿಧರ ಗಣಿಹಾರ ಹಾಗೂ ಗ್ರಾಮಸ್ಥರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts