More

    ಗ್ರಾಪಂ ಮಟ್ಟದಲ್ಲಿ ಸಮಸ್ಯೆ ಪರಿಹಾರಕ್ಕೆ ಕ್ರಮ

    ಕಳಸ: ಗ್ರಾಮ ಮಟ್ಟದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಲು ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಾಲೂಕಿನ ಎಲ್ಲ ಅಧಿಕಾರಿಗಳನ್ನು ಕರೆಸಿ ಜನಸಂಪರ್ಕ ಸಭೆ ಮಾಡಿ ಸಮಸ್ಯೆಗಳನ್ನು ಪರಿಹಾರ ಮಾಡಲಾಗುತ್ತದೆ ಎಂದು ಶಾಸಕಿ ನಯನ ಮೋಟಮ್ಮ ಹೇಳಿದರು.
    ಬುಧವಾರ ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಈ ಭಾಗದ ನಿವೇಶನ ಸಮಸ್ಯೆ ಪರಿಹಾರಕ್ಕಾಗಿ 5 ಎಕರೆ ಭೂಮಿ ಮೀಸಲಿರಿಸಿದೆ. ಅದರಲ್ಲಿರುವ ಮರಗಳನ್ನು ತೆರವು ಮಾಡಲು ಕೆಲ ಸಮಸ್ಯೆಗಳಿರುವುದರಿಂದ ಅದನ್ನು ಮೂರು ತಿಂಗಳೊಳಗೆ ಪರಿಹರಿಸಿ ನಿವೇಶನ ನೀಡಲಾಗುವುದು ಎಂದು ತಿಳಿಸಿದರು.
    ಕುದುರೆಮುಖ-ಎಸ್.ಕೆ ಬಾರ್ಡರ್ ರಸ್ತೆ ದುರಸ್ತಿಗೆ 33 ಕೋಟಿ ರೂ. ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಂಸೆ-ಎಳನೀರು-ದಿಡುಪೆ ರಸ್ತೆ ವಿಚಾರವಾಗಿ ಈಗಾಗಲೇ ಬೆಳ್ತಂಗಡಿ ಶಾಸಕರ ಜತೆ ಮಾತುಕತೆ ನಡೆಸಲಾಗಿದೆ. ಇಬ್ಬರೂ ಸೇರಿ ರಸ್ತೆ ನಿರ್ಮಿಸಲಾಗುವುದು. ತಾರತಮ್ಯ ಮಾಡದೇ ಪ್ರತಿ ಗ್ರಾಪಂ ವ್ಯಾಪ್ತಿಗೂ ಅನುದಾನ ನೀಡಿ ಕ್ಷೇತ್ರವನ್ನು ಅಭಿವೃದ್ಧಿ ಗೊಳಿಸಲಾಗುವುದು ಎಂದರು.
    ಮಡ್ಕೋಡು ಸಮೀಪದ ಸೋಮವತಿ ನದಿಗೆ ಸೇತುವೆ ನಿರ್ಮಾಣ, ಬಾಲ್ಗಲ್-ಎಡಮುರೇಶ್ವರ ದೇವಸ್ಥಾನದ ರಸ್ತೆ ಅಭಿವೃದ್ಧಿ, ಬಾಲ್ಗಲ್-ಉಳ್ಳೂರು ಕೋರೆ ರಸ್ತೆ, ಸಂಪಾನೆ ರಸ್ತೆ ನಿರ್ಮಿಸಬೇಕು ಹಾಗೂ ಸಂಸೆಯಲ್ಲಿ ಬಿಡಾಡಿ ಜಾನುವಾರುಗಳನ್ನು ತಂದು ಬಿಟ್ಟು ಹೋಗುವುದಕ್ಕೆ ಕಡಿವಾಣ ಹಾಕಬೇಕು. ಸೂಜಿಗುಡ್ಡಕ್ಕೆ ಚಾರಣಕ್ಕೆ ಅವಕಾಶ ನೀಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts