More

    ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮವಾಗಲಿ

    ಸಾರ್ವಜನಿಕರಿಗೆ, ತೊಂದರೆ, ಆಗದಂತೆ, ಕ್ರಮವಾಗಲಿ, For public, trouble, let action be taken,
    ಬೈಲಹೊಂಗಲ: ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಉಪವಿಭಾಗ ಮಟ್ಟದ ಹೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಭೆ ನಡೆಯಿತು.
    ಶಾಸಕರಾದ ಮಹಾಂತೇಶ ಕೌಜಲಗಿ, ಬಾಬಾಸಾಹೇಬ ಪಾಟೀಲ, ವಿಶ್ವಾಸ ವೈದ್ಯ ಮಾತನಾಡಿ, ಸವದತ್ತಿ, ಬೈಲಹೊಂಗಲ, ಕಿತ್ತೂರು ಕ್ಷೇತ್ರಗಳನ್ನು ವಿಶೇಷವಾಗಿ ಪರಿಗಣಿಸಿ ಕೂಡಲೇ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಹೆಸ್ಕಾಂನ ಎಲ್ಲ ಕೆಲಸಗಳನ್ನು ಮಾಡಿಕೊಡುವುದಾಗಿ ಹೆಸ್ಕಾಂ ಎಂ.ಡಿ. ತಿಳಿಸಿದ್ದಾರೆ ಎಂದು ಹೇಳಿದರು.

    ವಿದ್ಯುತ್ ಕೊರತೆ, ಅವಘಡ, ಉಪ ಕೇಂದ್ರಗಳ ಅವಶ್ಯ, ಸಿಬ್ಬಂದಿ ಕೊರತೆ, ರೈತರಿಗೆ ಹೇಗೆ ವಿದ್ಯುತ್ ನೀಡಬೇಕೆಂಬ ಕುರಿತು ಚರ್ಚೆ ಮಾಡಲಾಯಿತು. ಲೋಡ್ ಶೆಡ್ಡಿಂಗ್ ತಡೆದು ರೈತರು, ಸಾರ್ವಜನಿಕರಿಗೆ ತೊಂದರೆ ಆಗದ ರೀತಿ ವಿದ್ಯುತ್ ನೀಡುವಂತೆ ಶಾಸಕರು ಒತ್ತಾಯಿಸಿದರು. ಉಪವಿಭಾಗಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ವರದಿ ಕಳುಹಿಸಲು ಸಹಕರಿಸುವುದಾಗಿಯೂ ಹೇಳಿದರು.

    ಸವದತ್ತಿಗೆ ಒಂದು ವಿದ್ಯುತ್ ಉಪಕೇಂದ್ರ, ಹೆಚ್ಚುವರಿ ಶಾಖೆ ತೆರೆಯಲು ಅನುಮತಿ ನೀಡುವುದಾಗಿ ಹಾಗೂ ಗ್ರಾಮೀಣ ಭಾಗಗಳಲ್ಲಿ ವಾಲಿದ ವಿದ್ಯುತ್ ಕಂಬ, ವಿದ್ಯುತ್ ತಂತಿ ತೆರವುಗೊಳಿಸುವ ಬಗ್ಗೆ ಯೋಜನಾ ವರದಿ ಕಳಿಸಿದರೆ ಶೀಘ್ರ ಒದಗಿಸಿಕೊಡುವುದಾಗಿ ಎಂ.ಡಿ.ತಿಳಿಸಿದ್ದಾರೆ ಎಂದು ಶಾಸಕರು ಹೇಳಿದರು.
    ಸವದತ್ತಿ ಕ್ಷೇತ್ರದಲ್ಲಿ ನಾಲ್ಕು ಕಡೆ ವಿದ್ಯುತ್ ಉಪಕೇಂದ್ರ ತೆರೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಳ್ಳೂರ, ತೆಗ್ಗಿಹಾಳ, ಯರಝರ್ವಿ, ನದಿ ಪಕ್ಕದ ಜಾಕ್ವೆಲ್‌ಗಳಿಗೆ ವಿದ್ಯುತ್ ಕೇಂದ್ರದ ಅವಶ್ಯವಿದೆ. ಯರಗಟ್ಟಿ, ಮುನವಳ್ಳಿಯಲ್ಲಿ ವಿದ್ಯುತ್ ಬಳಕೆ ಹೆಚ್ಚಾಗಿದ್ದರಿಂದ ಉಳಿದೆಡೆ ವಿದ್ಯುತ್ ಪೂರೈಕೆಯಾಗುತ್ತಿಲ್ಲ. 7 ಗಂಟೆ ತ್ರೀ ೇಸ್ ವಿದ್ಯುತ್ ನೀಡಬೇಕು ಎಂದು ಶಾಸಕರು ಒತ್ತಾಯಿಸಿದರು.

    ಹುಬ್ಬಳ್ಳಿ ವಿದ್ಯುತ್ ಪ್ರಸರಣ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಮಹ್ಮದರೋಷನ್, ಮುಖ್ಯ ಅಭಿಯಂತ ಪ್ರಕಾಶ ವಿ., ಕಾರ್ಯನಿರ್ವಾಹಕ ಅಭಿಯಂತ ಕೆ.ಎ.ಜೈನ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ವೈಶಾಲಿ ತುಡವೇಕರ, ಎಂ.ಕೆ.ಹಿರೇಮಠ, ಎಂ.ಎಸ್.ವಿಶಾಪುರಕರ, ಕೆಪಿಟಿಸಿಎಲ್ ಅಧೀಕ್ಷಕ ಅಭಿಯಂತ ಎಸ್.ಎಸ್.ಖರೆ, ಹೆಸ್ಕಾಂ ಅಧೀಕ್ಷಕ ಅಭಿಯಂತ ಪಿ.ಕೆ.ಚಿಕಡೆ ಹಾಗೂ ಸವದತ್ತಿ, ಬೈಲಹೊಂಗಲ, ಕಿತ್ತೂರು ವಿದ್ಯುತ್ ಕೇಂದ್ರದ ಅಧಿಕಾರಿಗಳು, ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts