More

    ಹಿಂದಿಗೆ ಆಕ್ಟ್ 1978: ಬೇರೆ ಭಾಷೆಗಳಲ್ಲೂ ಬೇಡಿಕೆ

    ಬೆಂಗಳೂರು: ಮಂಸೋರೆ ನಿರ್ದೇಶನದ ‘ಆಕ್ಟ್ 1978’ ಚಿತ್ರದ ಹಿಂದಿ ರಿಮೇಕ್ ಹಕ್ಕುಗಳು ಮಾರಾಟವಾಗಿದೆಯಂತೆ. ಹಾಗಂತ ಖುದ್ದು ಮಂಸೋರೆ ಈ ವಿಷಯವನ್ನು ಖಚಿತಪಡಿಸಿದ್ದಾರೆ. ಇನ್ನೂ ಒಂದು ವಿಶೇಷವೆಂದರೆ, ಈ ಚಿತ್ರವನ್ನು ನೀವೇ ನಿರ್ದೇಶಿಸಿಕೊಟ್ಟುಬಿಡಿ ಎಂದು ಹಕ್ಕುಗಳನ್ನು ಪಡೆದವರು ಆಫರ್ ಕೊಟ್ಟಿದ್ದು, ಮಂಸೋರೆ ಇನ್ನಷ್ಟೇ ತಮ್ಮ ತೀರ್ವನವನ್ನು ಹೇಳಬೇಕಿದೆ.

    ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿರುವ ಮಂಸೋರೆ, ‘ನಮ್ಮ ಚಿತ್ರ ಅಮೆಜಾನ್ ಪ್ರೖೆಮ್ಲ್ಲಿ ಬಿಡುಗಡೆಯಾದ ನಂತರ ಬೇರೆ ಭಾಷೆಗಳಿಂದ ರಿಮೇಕ್ ಹಕ್ಕುಗಳಿಗೆ ಬೇಡಿಕೆ ಬಂದಿದೆ. ಈ ಪೈಕಿ, ಹಿಂದಿ ರಿಮೇಕ್ ರೈಟ್ಸ್ ಮಾರಾಟವಾಗಿದೆ. ಸದ್ಯದಲ್ಲೇ ಆ ಚಿತ್ರದ ಟೈಟಲ್ ಸಹ ಬಿಡುಗಡೆಯಾಗಲಿದೆ.

    ಚಿತ್ರವನ್ನು ನೀವೇ ನಿರ್ದೇಶಿಸಿ ಎಂಬ ಆಫರ್ ಇದೆ. ಆದರೆ, ಈ ಬಗ್ಗೆ ಇನ್ನಷ್ಟೇ ನಿರ್ಧಾರ ತೆಗೆದುಕೊಳ್ಳಬೇಕಿದೆ’ ಎನ್ನುತ್ತಾರೆ ಅವರು. ಇನ್ನು, ಮೂಲ ಚಿತ್ರದಲ್ಲಿ ಯಜ್ಞಾ ಮಾಡಿದ ಪಾತ್ರವನ್ನು ಯಾರು ಮಾಡಬಹುದು ಎಂದರೆ, ವಿದ್ಯಾ ಬಾಲನ್, ತಾಪ್ಸಿ ಪನ್ನು ಮತ್ತು ಭೂಮಿ ಪೆಡ್ನೇಕರ್ ಜತೆಗೆ ಚರ್ಚೆಯಾಗುತ್ತಿದ್ದು, ಮೂವರಲ್ಲಿ ಒಬ್ಬರು ನಟಿಸಬಹುದು ಎನ್ನುತ್ತಾರೆ ಮಂಸೋರೆ. ಮಿಕ್ಕಂತೆ, ಉಳಿದ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ಇನ್ನಷ್ಟೇ ಆಗಬೇಕಿದೆ.

    ಕಿರಿಕ್ ಪಾರ್ಟಿ ಚಿತ್ರತಂಡಕ್ಕೆ ಶುರುವಾಯ್ತು ಕಿರಿಕಿರಿ: ರಕ್ಷಿತ್​ ಶೆಟ್ಟಿ, ರಿಷಬ್​ ಶೆಟ್ಟಿಗೆ ಕೋರ್ಟ್​ ವಾರೆಂಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts