More

    ಶಹಾಪುರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

    ಯಾದಗಿರಿ : ವೀರಸನ್ಯಾಸಿ ಸ್ವಾಮಿ ವಿವೇಕಾನಂದರ 158ನೇ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾದ್ಯಂತ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.

    ಶಹಾಪುರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಜಯಂತಿ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ಚಾಲನೆ ನೀಡಿ ಮಾತನಾಡಿ, ಸ್ವಾಮಿ ವಿವೇಕಾನಂದರು ಕೇವಲ ಆಧ್ಯಾತ್ಮಿಕ ಪುರುಷರಾಗದೆ, ಮೌಢ್ಯದಿಂದ ಬಳಲುತ್ತಿದ್ದ ಭಾರತವನ್ನು ಮೇಲಕ್ಕೆತ್ತಿ ಜಾಗೃತಿ ಮೂಡಿಸಿ ವ್ಯಕ್ತಿಯಾಗಿದ್ದಾರೆ ಎಂದರು.

    ವೈದ್ಯರಾದ ಡಾ.ಚಂದ್ರಶೇಖರ ಸುಬೇದಾರ ಮಾತನಾಡಿ, ರೋಗಗಳಿಗೆ ಆಹ್ವಾನ ನೀಡುತ್ತಿರುವ ಜೀವನಶೈಲಿಯನ್ನು ಬದಲಾಯಿಸುವಂತಹ ಜಾಗೃತಿ ಕಾರ್ಯಕ್ರಮಗಳು ಆಗಬೇಕಾಗಿದೆ ಎಂದು ತಿಳಿಸಿದರು.
    ಪ್ರಮುಖರಾದ ಸುರೇಂದ್ರ ಪಾಟೀಲ ಮಡ್ನಾಳ, ಅಮರೇಶಗೌಡ ದರ್ಶನಾಪುರ, ಬಸವರಾಜ ಹೇರುಂಡಿ, ವಿನೋದ ಗೋಗಿ, ಪ್ರಶಾಂತ ಗೋಗಿ, ರಾಮು

    ಇದ್ದರು. ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯಿಂದ ಬಂದಿದ್ದ ಡಾ.ಜಯವಂತ, ಡಾ.ರವಿ ಗುಪ್ತ ಅವರ ತಂಡ ಆರೋಗ್ಯ ತಪಾಸಣೆ ನಡೆಸಿತು. ಬಸವರಾಜ ಗೋಗಿ ನಿರೂಪಣೆ ಮಾಡಿದರು.

    ಕರವೇ ಯುವ ಘಟಕ: ಸ್ವಾಮಿ ವಿವೇಕಾನಂದರ ಯುವಜನತೆಯ ನಿಜವಾದ ಆದರ್ಶವಾಗಿದ್ದಾರೆ ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಅಭಿಪ್ರಾಯಪಟ್ಟರು. ನಗರದ ಕರವೇ ಜಿಲ್ಲಾ ಕಾಯರ್ಾಲಯದಲ್ಲಿ ಕನರ್ಾಟಕ ರಕ್ಷಣಾ ವೇದಿಕೆ ಯುವ ಘಟಕದ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಸ್ವಾಮಿ ವಿವೇಕಾನಂದ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿ, ಸ್ವಾಮಿ ವಿವೇಕಾನಂದರು ಜೀವಿಸಿದ ಅತ್ಯಲ್ಪ ಅವಧಿಯಲ್ಲಿನ ಅವರ ಬದುಕು ದೇಶದ ಅಷ್ಟೇ ಅಲ್ಲದೇ ಜಗತ್ತಿನ ಯುವ ಸಮುದಾಯಕ್ಕೆ ದಾರಿದೀಪ ಎಂದು ನುಡಿದರು. ವಿಶ್ವಾರಾಧ್ಯ ದಿಮ್ಮೆ, ಜಿಲ್ಲಾ ಉಪಾಧ್ಯಕ್ಷ ತೇಜರಾಜ್ ರಾಠೋಡ, ಯುವ ನಗರಾಧ್ಯಕ್ಷ ರಿಯಾಜ್ ಪಟೇಲ್, ಸಾಬು ಹೋರುಂಚಾ, ನಾಗರಾಜ ತಾಂಡೂರಕರ್, ದೀಪಕ ಒಡೆಯರ್, ಭೀಮು ಕೊಯಿಲೂರು, ಅಬ್ದುಲ್ ಅಜೀಜ್, ಕಾಶಿ ನಾಯಕ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts