More

    ಮುರುಘಾ ಶರಣರಿಂದ 5 ಎಕರೆ ಜಾಗ ಖಾಸಗಿ ಬಸ್ ನಿಲ್ದಾಣಕ್ಕೆ ದಾನ

    ಹೊಸದುರ್ಗ: ತಾಲೂಕಿನ ಜನರ ಅನುಕೂಲಕ್ಕಾಗಿ ಪಟ್ಟಣದ ಹೃದಯ ಭಾಗದಲ್ಲಿರುವ 5 ಎಕರೆ ಮಠದ ಜಾಗವನ್ನು ಖಾಸಗಿ ಬಸ್ ನಿಲ್ದಾಣಕ್ಕೆ ದಾನ ನೀಡಿರುವುದಾಗಿ ಮುರುಘಾಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

    ಪಟ್ಟಣದ ಮುರುಘರಾಜೇಂದ್ರ ಖಾಸಗಿ ಬಸ್ ನಿಲ್ದಾಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಖಾಸಗಿ ಬಸ್ ನಿಲ್ದಾಣದ ನೂತನ ನಾಮಫಲಕ ಉದ್ಘಾಟಿಸಿ ಮಾತನಾಡಿ, ಮಠವು ಜನರಿಗೆ ಸತ್ಕಾರ್ಯ ಮಾಡುವ ಉದ್ದೇಶದಿಂದ ಮಠದ ಆಸ್ತಿಯನ್ನು ಸಾರ್ವಜನಿಕ ಉಪಯೋಗಕ್ಕಾಗಿ ನೀಡಲಾಗಿದೆ. ಕೊಟ್ಟಿರುವ ಜಾಗವನ್ನು ಜನೋಪಯೋಗಕ್ಕಾಗಿ ಬಳಸಬೇಕು ಎಂದರು.

    ಶಾಸಕ ಗೂಳಿಹಟ್ಟಿ ಶೇಖರ್ ಶ್ರೀಮಠಕ್ಕೆ ಜನಸೇವಾ ಕಾರ್ಯಕ್ಕಾಗಿ 9 ಎಕರೆ ಜಮೀನನ್ನು ಸರ್ಕಾರದಿಂದ ಮಂಜೂರು ಮಾಡಿಸುವುದಾಗಿ ತಿಳಿಸಿದ್ದಾರೆ. ಅವರ ಜನಪರ ಕಾರ್ಯಕ್ಕೆ ಅಭಿನಂದನೆಗಳು ಎಂದು ತಿಳಿಸಿದರು.

    ಶಾಸಕ ಗೂಳಿಹಟ್ಟಿ ಡಿ.ಶೇಖರ್ ಮಾತನಾಡಿ, ಹಿಂದುಳಿದ ಸಮುದಾಯಗಳನ್ನು ಗುರುತಿಸಿ ಅವುಗಳ ಅಭಿವೃದ್ಧಿಗಾಗಿ ಗುರು ಹಾಗೂ ಗುರುಪೀಠಗಳನ್ನು ನೀಡಿದ ಶಿವಮೂರ್ತಿ ಮುರುಘಾ ಶರಣರು ಆಧುನಿಕ ಬಸವಣ್ಣನಾಗಿದ್ದಾರೆ. ಕೋಟಿಗಟ್ಟಲೆ ಬೆಲೆ ಬಾಳುವ ಜಾಗವನ್ನು ದಾನವಾಗಿ ನೀಡಿರುವುದು ಅವರಿಗೆ ಸಮಾಜದ ಕುರಿತು ಇರುವ ಕಾಳಜಿಗೆ ಸಾಕ್ಷಿಯಾಗಿದೆ ಎಂದರು.

    ಮಠ ನೀಡಿರುವ ಜಮೀನಿಗೆ ಪ್ರತಿಯಾಗಿ ಮಠದ ಭಕ್ತರು ಸೂಚಿಸುವ ಜಾಗದಲ್ಲಿ ಮಠಕ್ಕೆ 9 ಎಕರೆ ಜಮೀನನ್ನು ಸರ್ಕಾರದಿಂದ ಮಂಜೂರು ಮಾಡಿಸಲಾಗುವುದು. ಜನಪರವಾದ ಕಾರ್ಯಕ್ಕೆ ಸದಾ ಸಿದ್ಧರಿರುವುದಾಗಿ ತಿಳಿಸಿದರು.

    ಪುರಸಭೆ ಅಧ್ಯಕ್ಷ ಶ್ರೀನಿವಾಸ, ಸದಸ್ಯರಾದ ದಾಳಿಂಬೆ ಗಿರೀಶ್, ಶಂಕರಪ್ಪ, ನಾಗರಾಜ್, ಜಯದೇವ ವಿದ್ಯಾರ್ಥಿ ನಿಲಯ ಸಮಿತಿ ಅಧ್ಯಕ್ಷ ಎಚ್.ಪಿ.ಜಗದೀಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts